»   » 'ಚೆಲುವಿನ ಚಿತ್ತಾರ'ದ ನಟ ರಾಕೇಶ್ (ಬುಲ್ಲಿ) ನಿಧನ

'ಚೆಲುವಿನ ಚಿತ್ತಾರ'ದ ನಟ ರಾಕೇಶ್ (ಬುಲ್ಲಿ) ನಿಧನ

Posted By:
Subscribe to Filmibeat Kannada
Cheluvina Chittara Bulli Aka Rakesh Is No More | Filmibeat Kannada

'ಚೆಲುವಿನ ಚಿತ್ತಾರ' ಚಿತ್ರದ 'ಬುಲ್ಲಿ' ಪಾತ್ರದ ಮೂಲಕ ಖ್ಯಾತಿ ಗಳಿಸಿದ ನಟ ರಾಕೇಶ್ ಅನಾರೋಗ್ಯದ ಹಿನ್ನೆಲೆ ಸೋಮವಾರ (ಅಕ್ಟೋಬರ್ 2) ನಿಧನರಾದರು.

ಗ್ಯಾಂಗ್ರಿನ್ ಸಮಸ್ಯೆಯಿಂದ ಬಳಲುತ್ತಿದ್ದ ರಾಕೇಶ್ ಅವರಿಗೆ ಎರಡು ತಿಂಗಳ ಹಿಂದೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಬಳಿಕ ಕೋರಮಂಗಲದ ಸೆಂಟ್ ಜಾನ್ಸ್‌ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ, ನಿನ್ನೆ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.

Challuvina Chitara Actor Bulli Rakesh is No More

ಅಂದ್ಹಾಗೆ, ನಟ ರಾಕೇಶ್, ಹಿರಿಯ ನಟಿ ಆಶಾರಾಣಿ ಪುತ್ರ. 'ಚೆಲುವಿನ ಚಿತ್ತಾರ', ಶಿವರಾಜ್ ಕುಮಾರ್ ಅಭಿನಯದ 'ಬಂಧುಬಳಗ', 'ಭಜರಂಗಿ', 'ದುನಿಯಾ ವಿಜಯ್ ಅಭಿನಯದ 'ಚಂಡ', ಯಶ್ ಅವರ 'ಮೊದಲ ಸಲ' ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದರು. ಸದ್ಯ, 'ಧೂಮಪಾನ' ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದರು. ​​

English summary
Kannada Actor,'Cheluvina Chittara' fame actor Rakesh is No More. 'ಚೆಲುವಿನ ಚಿತ್ತಾರ' ಖ್ಯಾತಿಯ ನಟ ರಾಕೇಶ್ (ಬುಲ್ಲಿ) ಅನಾರೋಗ್ಯದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada