ಕಣ್ಣು ಕುಕ್ಕುತ್ತಿದೆ 'ಚಮಕ್' ಜೋಡಿಯ ಸ್ಟೈಲಿಶ್ ಲುಕ್
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಚಮಕ್' ಸಿನಿಮಾದ ಹೊಸ ಫೋಟೋಗಳು ಹೊರಬಿದ್ದಿದ್ದು, ಕುತೂಹಲ ಮೂಡಿಸಿದೆ. ಮೊದಲ ಬಾರಿಗೆ ಗಣೇಶ್ ಜೊತೆಯಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಸಖತ್ ಸ್ಟೈಲಿಶ್ ಆಗಿ ಮಿಂಚುತ್ತಿದ್ದಾರೆ.
'ಚಮಕ್' ಚಿತ್ರದಲ್ಲಿ ಗಣೇಶ್ ಮತ್ತು ರಶ್ಮಿಕಾ ಲುಕ್ ಹೇಗಿರಲಿದೆ ಎನ್ನುವ ಕುತೂಹಲಕ್ಕೆ ಬ್ರೇಕ್ ಬಿದ್ದಿದ್ದು, ಇಬ್ಬರ ಗೆಟಪ್ ಕಣ್ಮನ ಸೆಳೆಯುತ್ತಿದೆ.

ಸಿಂಪಲ್ ಸುನಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಜಾಸ್ತಿ ಇದೆ. ಏಪ್ರಿಲ್ 24 ರಿಂದ ಚಿತ್ರೀಕರಣ ಶುರುವಾಗಿದ್ದು, ಬೆಂಗಳೂರಿನ ಅನೇಕ ಕಡೆ ಭರ್ಜರಿಯಾಗಿ ಶೂಟಿಂಗ್ ನಡೆಯುತ್ತಿದೆ.

ಒಂದು ಕಡೆ 'ಮುಗುಳುನ'ಗೆ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದರೆ, ಇನ್ನೊಂದು ಕಡೆ 'ಚಮಕ್' ಸಿನಿಮಾದ ಚಿತ್ರೀಕರಣದಲ್ಲಿ ಗಣೇಶ್ ಭಾಗಿಯಾಗಿದ್ದಾರೆ. ಇನ್ನು ಈ ಚಿತ್ರಕ್ಕೆ ನಿರ್ಮಾಪಕ ಚಂದ್ರಶೇಖರ್ ಬಂಡವಾಳ ಹಾಕಿದ್ದು, ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.
More from Filmibeat
English summary
Goldan Star Ganesh starrer Kannada Movie 'chamak' first look/first look poster is out. The movie is direted by suni.


Click it and Unblock the Notifications











