»   » ಮದುವೆ ಆಗ್ಬಿಟ್ರು ರಶ್ಮಿಕಾ ಮಂದಣ್ಣ.! ಬೇಕಾದ್ರೆ ನೀವೇ ಈ ಫೋಟೋ ನೋಡಿ..

ಮದುವೆ ಆಗ್ಬಿಟ್ರು ರಶ್ಮಿಕಾ ಮಂದಣ್ಣ.! ಬೇಕಾದ್ರೆ ನೀವೇ ಈ ಫೋಟೋ ನೋಡಿ..

Posted By:
Subscribe to Filmibeat Kannada

ನಟ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಮದುವೆಯಾಗಲಿದ್ದಾರೆ ಎಂಬುದೀಗ ಜಗಜ್ಜಾಹೀರು. ಆದರೆ, ಈಗಾಗಲೇ ರಶ್ಮಿಕಾ ಮದುವೆಯಾಗಿರುವ ಒಂದು ಫೋಟೋ ಹೊರಬಿದ್ದಿದೆ. ಇದು ರೀಲ್ ಸುದ್ದಿ ಅನ್ನೋದು ಮಾತ್ರ ನಿಮ್ಮ ಗಮನದಲ್ಲಿ ಇರಲಿ...

ಸುದೀಪ್ ಜೊತೆ ಸಿನಿಮಾ ಮಾಡಿ ಅಂದ್ರೆ ರಶ್ಮಿಕಾ ಹೀಗೆ ಹೇಳಿದ್ರು!

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಅಭಿನಯದ 'ಚಮಕ್' ಸಿನಿಮಾದ ಕೆಲ ಫೋಟೋಗಳು ಹೊರಬಂದಿದೆ. ಇಲ್ಲಿ ಮದುವೆ ಗಂಡು-ಹೆಣ್ಣಾಗಿ ಈ ಜೋಡಿ ಸಖತ್ ಮಿಂಚಿದೆ. ಆ ಲುಕ್ ಜೊತೆ ಜೊತೆಗೆ ಸಿನಿಮಾದ ಒಂದಷ್ಟು ಮಾಹಿತಿ ಮುಂದಿದೆ ಓದಿ...

'ಚಮಕ್' ಲುಕ್

'ಚಮಕ್' ಸಿನಿಮಾದ ಹೊಸ ಫೋಟೋಗಳು ರಿಲೀಸ್ ಆಗಿದೆ. ಇಲ್ಲಿ ಗಣೇಶ್ ಮದುಮಗನಾಗಿ ಮತ್ತು ರಶ್ಮಿಕಾ ಮದುಮಗಳಾಗಿ ಮಿಂಚಿದ್ದಾರೆ.

ಮದುವೆ ಹುಡುಗನಾಗಿ ರಶ್ಮಿಕಾಗೆ 'ಚಮಕ್' ಕೊಟ್ಟ ಗಣೇಶ್

ಗಂಡ - ಹೆಂಡತಿ ಪಾತ್ರ

'ಚಮಕ್' ಸಿನಿಮಾದಲ್ಲಿ ಮದುವೆಯ ಆಗಿರುವ ಒಬ್ಬ ಹುಡುಗ ಮತ್ತು ಹುಡುಗಿಯ ಕಥೆ ಇದೆಯಂತೆ. ಇಲ್ಲಿ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಗಂಡ ಹೆಂಡತಿ ಆಗಿದ್ದಾರೆ.

ಖುಷ್ - ಖುಷಿ

ಸುನಿ ತಮ್ಮ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾದ ನಾಯಕ ಮತ್ತು ನಾಯಕಿಯ 'ಖುಷ್, ಖುಷಿ' ಎಂಬ ಹೆಸರನ್ನೇ ಮತ್ತೆ ಈ ಪಾತ್ರಗಳಿಗೂ ಇಟ್ಟಿರುವುದು ವಿಶೇಷ.

ಸಾಂಗ್ ಶೂಟಿಂಗ್

ಸದ್ಯಕ್ಕೆ ನಿರ್ದೇಶಕ ಸುನಿ ಈ ಚಿತ್ರದಿಂದ ಬ್ರೇಕ್ ತೆಗೆದುಕೊಂಡಿದ್ದು, ಚಿತ್ರದ ಹಾಡುಗಳ ಚಿತ್ರೀಕರಣ ಇನ್ನೂ ಬಾಕಿ ಇದೆ.

ಚಿತ್ರದ ಲುಕ್

'ಚಮಕ್' ಸಿನಿಮಾದಲ್ಲಿ ಗಣೇಶ್ ಮತ್ತು ರಶ್ಮಿಕಾ ಡಿಫರೆಂಟ್ ಲುಕ್ ಗಳಲ್ಲಿ ಕಾಣಿಸಿಕೊಂಡಿದ್ದು, ನೋಡುಗರಿಗೆ ಫ್ರೆಶ್ ಫೀಲ್ ನೀಡುತ್ತಿದೆ.

English summary
Goldan Star Ganesh and Rashmika Mandanna starrer Kannada Movie 'Chamak' making stills are out. The movie is direted by Suni.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada