»   » ವಿದೇಶದ ಪ್ರೇಕ್ಷಕರನ್ನೂ ಚಮಕಾಯಿಸಿದ ಗಣೇಶ್ 'ಚಮಕ್' ಸಿನಿಮಾ

ವಿದೇಶದ ಪ್ರೇಕ್ಷಕರನ್ನೂ ಚಮಕಾಯಿಸಿದ ಗಣೇಶ್ 'ಚಮಕ್' ಸಿನಿಮಾ

Posted By:
Subscribe to Filmibeat Kannada

ಕರ್ನಾಟಕದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಗಣೇಶ್ ನಟನೆಯ 'ಚಮಕ್' ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. 'ಚಮಕ್' ಚಿತ್ರವನ್ನು ಯು.ಕೆ ನಲ್ಲಿ ನೋಡಿರುವ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ಅದರಲ್ಲಿ ಯು.ಕೆ ನಲ್ಲಿ ಸಿನಿಮಾ ನೋಡಿದ ನವೀನ್ ಕುಮಾರ್.ಆರ್.ಓ. ಎಂಬುವವರು ಚಿತ್ರದ ಬಗ್ಗೆ ಹೀಗೆ ಬರೆದಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಹಾಗು ರಶ್ಮಿಕಾ ಮಂದಣ್ಣ ಅಭಿನಯದ 'ಚಮಕ್' ಚಿತ್ರವು ನೋಡುಗರಿಗೆ ಹಾಸ್ಯದ ರಸದೌತಣ ನೀಡುವಲ್ಲಿ ಯಶಸ್ವಿಯಾಗಿದೆ. ತಮ್ಮ ಹಾಸ್ಯಶೈಲಿಯ ಮೂಲಕ ನೋಡುಗರಿಗೆ ಹಾಸ್ಯದ ನಗೆಗಡಲಿನಲ್ಲಿ ತೇಲಿಸಿದ ಸಾಧುಮಹಾರಾಜರ ಕಾಮಿಡಿ ಚಿತ್ರಕ್ಕೆ ಪ್ಲಸ್ ಆಗಿದೆ. ಡಾ‌.ಖುಷ್(ಗಣೇಶ್) ಹಾಗೂ ಖುಷಿ(ರಶ್ಮಿಕಾ ಮಂದಣ್ಣ) ಅಭಿನಯ ಫನ್ ನಿಂದ ಕೂಡಿದ್ದು, ಡೈರೆಕ್ಟರ್ ಶಾಟ್ ಕಟ್ ಹೇಳಿದಾಗ ಬ್ರೇಕ್ ಅಪ್ ಅಂದರೆ interval ಬರುತ್ತದೆ.

ವಿಮರ್ಶೆ: ಗಣೇಶ್ ಒಂಥರಾ ಕಿಕ್ಕು ಪ್ರೇಕ್ಷಕರಿಗೆ ಚಮಕ್ಕು

'Chamak' movie screened in united kingdom

ಚಿತ್ರದ ದ್ವಿತೀಯಾರ್ಧ ಸಂಬಂಧದ ಆಳಾಗಲದ ವಿಮರ್ಶೆ, ಹುಡುಗಾಟ ಜೀವನವಲ್ಲ ಹಾಗೂ ಪ್ರೀತಿಯೇ ಮಧುರ ಜೀವನ ಎನ್ನುತ್ತಾ ಅಲ್ಲಲ್ಲಿ ಕಣ್ಣಂಚಲ್ಲಿ ನೀರು ತರಿಸುವಾಗ ಚಿತ್ರಕ್ಕೆ ತೆರೆ ಬೀಳುತ್ತದೆ. ನೀವು 'ಚಮಕ್' ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಿ ಆನಂದಿಸಿ. ನಿರ್ದೇಶಕ ಸಿಂಪಲ್ ಸುನಿಗೆ ಸಿಂಪಲ್ಲಾಗ್ ಒಂದ್ ಧನ್ಯವಾದಗಳು.

English summary
Kannada actor Ganesh and Rashmika Mandanna starrer 'Chamak' kannada movie screened in united kingdom. The movie was released in 29 December 2017.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada