ತೆಲುಗಿನಲ್ಲಿ ಬರ್ತಿದೆ ಕನ್ನಡದ 'ಚಮಕ್' ಸಿನಿಮಾ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಚಮಕ್' ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದು ಮಾಡಿತ್ತು. 2017ರಲ್ಲಿ ರಿಲೀಸ್ ಆಗಿದ್ದ 'ಚಮಕ್' ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ. ಪಂಚಿಂಗ್ ಡೈಲಾಗ್ ಗಳ ಮೂಲಕವೇ ಕನ್ನಡ ಚಿತ್ರಾಭಿಮಾನಿಗಳನ್ನು ರಂಜಿಸಿದ್ದ ಗೋಲ್ಡನ್ ಸ್ಟಾರ್ ಗಣೇಶ್, ಈಗ ಟಾಲಿವುಡ್ ಮಂದಿಗೆ 'ಚಮಕ್' ಕೊಡಲು ಹೊರಟಿದ್ದಾರೆ.
ಹೌದು, ಕನ್ನಡದ 'ಚಮಕ್' ಈಗ ತೆಲುಗಿನಲ್ಲಿ ಡಬ್ ಆಗಿ ರಿಲೀಸ್ ಆಗುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ 'ಚಮಕ್' ನೋಡಲು ತೆಲುಗು ಚಿತ್ರಪ್ರಿಯರು ಕಾತುರರಾಗಿದ್ದಾರೆ. ವಿಶೇಷ ಅಂದ್ರೆ 'ಚಮಕ್' ತೆಲುಗಿನಲ್ಲಿ 'ಗೀತಾ ಚಲೋ' ಹೆಸರಿಲ್ಲಿ ರಿಲೀಸ್ ಆಗುತ್ತಿದೆ.
ರಶ್ಮಿಕಾ ಮಂದಣ್ಣ ಅಭಿನಯದ ತೆಲುಗಿನ ಸೂಪರ್ ಹಿಟ್ 'ಗೀತಾ ಗೋವಿಂದಂ' ಮತ್ತು ರಶ್ಮಿಕಾ ಅವರ ಮೊದಲ ತೆಲುಗು ಸಿನಿಮಾ 'ಚಲೋ' ಚಿತ್ರದ ಹೆಸರನ್ನೇ ಬಳಸಿಕೊಂಡು 'ಗೀತಾ ಚಲೋ' ಎಂದು ಟೈಟಲ್ ಇಡಲಾಗಿದೆ. ಸದ್ಯ ಟಾಲಿವುಡ್ ಮಂದಿಯ ಹಾಡ್ ಫೇವರಿಟ್ ನಟಿ ರಶ್ಮಿಕಾ ಮಂದಣ್ಣ. ಹಾಗಾಗಿ ಅವರ 'ಗೀತಾ ಚಲೋ' ಸಿನಿಮಾ ತೆಲುಗು ಪ್ರೇಕ್ಷಕರ ಮನ ಗೆಲ್ಲಲಿದೆ ಎನ್ನುವುದು ಚಿತ್ರ ತಂಡದ ನಂಬಿಕೆ.

'ಚಮಕ್' ಚಿತ್ರದ ಪಂಚಿಂಗ್ ಟೀಸರ್ ಮೂಲಕವೇ ಚಿತ್ರಾಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ್ದರು ನಿರ್ದೇಶಕ ಸುನಿ ಮತ್ತು ತಂಡ. ಸದ್ಯ ತೆಲುಗಿನಲ್ಲಿ 'ಗೀತಾ ಚಲೋ' ಚಿತ್ರದ ರೋಮ್ಯಾಂಟಿಕ್ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. 'ಗೀತಾ ಚಲೋ' ಇದೇ ತಿಂಗಳು 26ರಂದು ರಿಲೀಸ್ ಆಗಲಿದೆ.


Click it and Unblock the Notifications











