'ಚಂಬಲ್' ಇದು ಡಿಕೆ ರವಿ ಲೈಫ್ ಸ್ಟೋರಿ ಚಿತ್ರವೇ?

ನಟ ಸತೀಶ್ ನೀನಾಸಂ ಅಭಿನಯದ 'ಚಂಬಲ್' ಸಿನಿಮಾ ಟ್ರೇಲರ್ ನಿನ್ನೆ ಬಿಡುಗಡೆಯಾಗಿದೆ. ಟ್ರೇಲರ್ ನೋಡಿದ ಅನೇಕರಿಗೆ ಇದು ಜಿಲ್ಲಾಧಿಕಾರಿ ಡಿಕೆ ರವಿ ಅವರ ಜೀವನಾಧಾರಿತ ಸಿನಿಮಾನ ಎನ್ನುವ ಕುತೂಹಲ ಮೂಡಿದೆ.

ಸಿನಿಮಾದಲ್ಲಿ ಸತೀಶ್ ನೀನಾಸಂ ಜಿಲ್ಲಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಸತೀಶ್ ಲುಕ್, ಕಾಸ್ಟೂಮ್, ಅವರ ಮ್ಯಾನರಿಸಂ ಎಲ್ಲವೂ ಡಿಕೆ ರವಿ ಅವರನ್ನು ಹೋಲುತ್ತಿದೆ. ಅದರಲ್ಲಿಯೂ ಕರಗ ಹೊತ್ತಿರುವ ಸ್ಟೈಲ್ ನೋಡಿದಾಗ ಇದು ರವಿ ಅವರ ಲೈಫ್ ಸ್ಟೋರಿ ಸಿನಿಮಾ ಇರಬೇಕು ಎಂಬ ಅನುಮಾನ ಮೂಡುತ್ತದೆ.

chambal kannada movie trailer released

'ಚಂಬಲ್' ಸತ್ಯ ಫಟನೆಗಳ ಮೇಲೆ ಹೆಣೆಯಲಾದ ಕಥೆಯ ಸಿನಿಮಾವಾಗಿದೆ ಎಂದು ಹೇಳಿರುವ ಚಿತ್ರತಂಡ ಡಿಕೆ ರವಿ ಅವರ ಸಿನಿಮಾನ ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ. ಆದರೆ, ಟ್ರೇಲರ್ ರಿಲೀಸ್ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ.

ಸಿನಿಮಾದ ಟ್ರೇಲರ್ ಗೆ ದೊಡ್ಡ ಮಟ್ಟದ ಪ್ರಶಂಸೆ ಸಿಕ್ಕಿದೆ. ಸದ್ಯ ಟ್ರೇಲರ್ ಯೂ ಟ್ಯೂಬ್ ನಲ್ಲಿ ನಂಬರ್ 2 ಟ್ರೆಂಡಿಂಗ್ ವಿಡಿಯೋ ಆಗಿದೆ. 'ಪೃಥ್ವಿ' ಹಾಗೂ 'ಸವಾರಿ' ಸಿನಿಮಾಗಳ ಖ್ಯಾತಿಯ ಜೇಕಬ್ ವರ್ಗಿಸ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಸತೀಶ್ ನೀನಾಸಂ, ಸೋನು ಗೌಡ, ಪವನ್ ಕುಮಾರ್, ಕಿಶೋರ್ ಸೇರಿದಂತೆ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ.

More from Filmibeat

English summary
Actor Sathish Ninasam's 'Chambal' kannada movie trailer released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X