ದರ್ಶನ್-ಸುದೀಪ್ ಸ್ನೇಹವನ್ನ ಒಂದಾಗಿಸಲು ಇರುವ ಮಾರ್ಗಗಳು
Recommended Video
ಒಂದು ಕಾಲದ ಕುಚಿಕೂ ಗೆಳೆಯರಾದ ದರ್ಶನ್ ಮತ್ತು ಸುದೀಪ್ ಈಗ ನಾನೊಂದು ತೀರಾ....ನೀನೊಂದು ತೀರಾ ಎಂಬಂತಾಗಿದ್ದಾರೆ. ಸದ್ಯದ ಬೆಳವಣಿಗೆಗಳನ್ನ ಗಮನಿಸಿದರೆ ಈ ಜನ್ಮದಲ್ಲಿ ಇವರಿಬ್ಬರು ಒಂದಾಗಲ್ಲ ಎಂದು ಹೇಳುವವರೆ ಹೆಚ್ಚು.
ದಚ್ಚು-ಕಿಚ್ಚ ಇಬ್ಬರನ್ನ ಒಂದಾಗಿಸಲು ಇದ್ದ ಒಂದೇ ಒಂದು ನಿರೀಕ್ಷೆ ರೆಬೆಲ್ ಸ್ಟಾರ್ ಅಂಬರೀಶ್. ಅಂಬಿ ಇಲ್ಲದಿರುವುದು ಕೂಡ ಈ ಇಬ್ಬರು ಒಂದಾಗುವುದರ ಮೇಲೆ ಅನುಮಾನ ಮೂಡಿಸಿದೆ. ಪಾಸಿಟೀವ್ ಆಗಿ ನೋಡಿದ್ರೆ ಇವರಿಬ್ಬರ ಸ್ನೇಹದ ಮೇಲೆ ಇನ್ನು ನಂಬಿಕೆ ಇದೆ.
'ಆಗಲ್ಲ' ಎನ್ನುವುದು ಪಕ್ಕಕ್ಕೆ ಇಟ್ಟು ಏನು ಮಾಡಿದ್ರು ಆಗುತ್ತೆ ಎನ್ನುವುದನ್ನ ಯೋಚಿಸಿದಾಗ ಡಿ ಬಾಸ್ ಮತ್ತು ಸುದೀಪ್ ಒಂದಾಗಬಹುದು ಎಂಬ ಸಣ್ಣ ಆಸೆ ಜೀವಂತವಾಗಿ ಉಳಿದುಕೊಂಡಿದೆ. ಅಷ್ಟಕ್ಕೂ, ಆ ಮಾರ್ಗಗಳು ಏನದು?

ಅಭಿಮಾನಿಗಳು ಸುಮ್ಮನಾಗಬೇಕು
ದರ್ಶನ್ ಮತ್ತು ಸುದೀಪ್ ಒಂದಾಗಬೇಕು ಅಂದ್ರೆ ಎರಡು ಕಡೆಯ ಅಭಿಮಾನಿಗಳು ಪಾಸಿಟೀವ್ ಆಗ್ಬೇಕು. ಮೊದಲು ಅಭಿಮಾನಿಗಳು ಒಟ್ಟಾಗಬೇಕು. ಇಬ್ಬರು ನಟರ ಚಿತ್ರಗಳನ್ನ ನೋಡುವುದು, ಪ್ರಚಾರ ಮಾಡುವುದು, ಮಾಡಬೇಕಿದೆ. ಅಭಿಮಾನಿಗಳಲ್ಲಿ ಸಂಘರ್ಷ ಇಲ್ಲದೆ ಹೋದರೆ ಸಹಜವಾಗಿ ದರ್ಶನ್ ಮತ್ತು ಸುದೀಪ್ ಕೂಡ ಕೂಲ್ ಆಗಿರ್ತಾರೆ. ಹೆಚ್ಚು ಅಭಿಮಾನಿಗಳಿಗೆ ಇವರಿಬ್ಬರು ಒಂದಾಗಬೇಕು ಎಂಬುದೆ ಬೇಕಾಗಿದೆ. ಆದರೆ, ಕೆಲವರು ಮಾಡುವ ಕೆಲಸಗಳಿಂದ ಇಡೀ ಅಭಿಮಾನಿ ಬಳಗವೂ ವಿರೋಧಿಗಳಂತೆ ಕಿತ್ತಾಡುವ ಸನ್ನಿವೇಶಗಳು ನಿರ್ಮಾಣವಾಗಿದೆ.

ಒಬ್ಬರಿಗೊಬ್ಬರು ಪಾಸಟೀವ್ ಆಗ್ಬೇಕು
ಸುದೀಪ್ ಮತ್ತು ದರ್ಶನ್ ಅಭಿಮಾನಿಗಳು ನಾವು ಒಂದೇ ಎಂದು ಹೇಳಿದ್ಮೇಲೆ ಇವರಿಬ್ಬರು ಎಷ್ಟು ದಿನಗಳ ಕಾಲ ದೂರ ಇರಲು ಸಾಧ್ಯ. ನಿಧಾನವಾಗಿ ಇಬ್ಬರ ಕೋಪ ಕಮ್ಮಿಯಾಗಬಹುದು. ಒಬ್ಬರ ಬಗ್ಗೆ ಇನ್ನೊಬ್ಬರು ಪಾಸಿಟೀವ್ ಆಗಬಹುದು. ಅಭಿಮಾನಿಗಳು ಒಂದಾದರೆ ಎರಡನೇ ಹಂತವಾಗಿ ಸ್ಟಾರ್ ನಟರು ಕೂಡ ಪಾಸಿಟೀವ್ ಆಗಬೇಕಿದೆ.

ಮೂರನೇ ವ್ಯಕ್ತಿಗಳನ್ನ ದೂರವಿಡಬೇಕು
ದರ್ಶನ್ ಮತ್ತು ಸುದೀಪ್ ದೂರವಾದ್ಮೇಲೂ ಮತ್ತೆ ಒಂದಾಗುತ್ತಾರೆ ಎಂಬ ನಂಬಿಕೆ ಇತ್ತು. ಆದರೆ, ಮೂರನೇ ವ್ಯಕ್ತಿಗಳು ಕೆಲವು ವಿಚಾರಗಳಲ್ಲಿ ಹುಳಿ ಹಿಂಡಿರುವ ಕಾರಣ ಇಬ್ಬರ ಸ್ನೇಹ ಮತ್ತಷ್ಟು ಮುರಿದು ಬೀಳಬೇಕಾಯಿತು ಎನ್ನುವುದು ಅವರಿಬ್ಬರ ಸುತ್ತಮುತ್ತಾ ಇರುವ ಆಪ್ತರ ಅಭಿಪ್ರಾಯ. ಹಾಗಾಗಿ, ದರ್ಶನ್ ಮತ್ತು ಸುದೀಪ್ ಇಬ್ಬರು ಕೂಡ ಈ ವಿಚಾರದಲ್ಲಿ ಮೂರನೇ ವ್ಯಕ್ತಿಗಳನ್ನ ನಂಬಬಾರದು. ಅಂತವರಿಂದ ಸ್ವಲ್ಪ ಅಂತರಾ ಕಾಯ್ದುಕೊಳ್ಳುವುದು ಉತ್ತಮ.

ಪ್ರಭಾವಿಗಳು ಒಂದಾಗಿಸುವ ಪ್ರಯತ್ನ ಮಾಡಬೇಕು
ದರ್ಶನ್ ಮತ್ತು ಸುದೀಪ್ ವಿಚಾರದಲ್ಲಿ ಅಂಬರೀಶ್ ಅವರ ಮಧ್ಯಸ್ಥಿಕೆ ಬೇಕಿತ್ತು. ಈಗ ಅದು ಸಾಧ್ಯವಿಲ್ಲ. ಆದರೂ ಇಬ್ಬರಿಗೂ ಆತ್ಮೀಯವಾಗಿರುವ ಕೆಲವು ವ್ಯಕ್ತಿಗಳಿದ್ದಾರೆ. ಅಂತವರು ಇವರಿಬ್ಬರನ್ನ ಒಟ್ಟಾಗಿಸಲು ಮನಸ್ಸು ಮಾಡಬೇಕು. ಇದು ಕೆಲವು ನಿರ್ಮಾಪಕರಿಂದ ಸಾಧ್ಯ.


Click it and Unblock the Notifications











