Just In
Don't Miss!
- Education
DFCCIL Recruitment 2021: 1099 ಜ್ಯೂನಿಯರ್ ಮ್ಯಾನೇಜರ್ ಮತ್ತು ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- News
ಕೆಜಿಎಫ್ನಲ್ಲಿ ಮಹದೇವಪುರ ಸಬ್ ಇನ್ಸ್ಪೆಕ್ಟರ್ಗೆ ಚಾಕು ಇರಿತ
- Sports
ಭಾರತ vs ಇಂಗ್ಲೆಂಡ್: ಧೋನಿ ದಾಖಲೆ ಸರಿದೂಗಿಸಿದ ವಿರಾಟ್ ಕೊಹ್ಲಿ
- Lifestyle
ಈ 7 ಬಗೆಯ ಆಹಾರಗಳು ಕೂದಲು ಉದುರುವ ಸಮಸ್ಯೆ ಹೆಚ್ಚಿಸುವುದು
- Automobiles
ಬಿಡುಗಡೆಯ ನಂತರ ಎರಡನೇ ಬಾರಿಗೆ ಬೆಲೆ ಹೆಚ್ಚಳ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್
- Finance
ಚಿನ್ನದ ಬೆಲೆ ಇಳಿಕೆ: ಗರಿಷ್ಠ ಮಟ್ಟಕ್ಕಿಂತ 11,500 ರೂ. ಕಡಿಮೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
SDM ಕಾಲೇಜಿನಲ್ಲಿ ಅಂಜನಿಪುತ್ರನ 'ಹೆಂಡ್ತಿ' ಹವಾ ಬಲು ಜೋರು ಮಾರ್ರೆ.!
ಇತ್ತೀಚಿನ ದಿನಗಳಲ್ಲಿ ಹಿಟ್ ಆದ ಸಿನಿಮಾದ ಹಾಡಿನ ನೃತ್ಯವನ್ನ ತಮ್ಮದೇ ಸ್ಟೈಲ್ ನಲ್ಲಿ ಪ್ರೆಸೆಂಟ್ ಮಾಡೋದು ಸರ್ವೆ ಸಾಮಾನ್ಯ ಆಗಿದೆ. ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ ಮೋಹನ್ ಲಾಲ್ ನಟನೆಯ 'ವೆಲಿಪಾಡಿಂಡೆ ಪುಸ್ತಕಮ್' ಚಿತ್ರದ 'ಜಿಮ್ಕಿ ಕಮಲ್' ಹಾಡು.
ಇದೀಗ 'ಜಿಮ್ಕಿ ಕಮಲ್' ಹಾಡಿನ ದಾಖಲೆ ಮುರಿಯಲು ಸಜ್ಜಾಗಿದ್ದು, ನಮ್ಮ ಕನ್ನಡದ ಹಾಡು 'ಚಂದ ಚಂದ ನನ್ ಹೆಂಡ್ತಿ'. ಹೌದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು 'ಕಿರಿಕ್ ಬೆಡಗಿ' ರಶ್ಮಿಕಾ ಮಂದಣ್ಣ ಒಂದಾಗಿ ಕಾಣಿಸಿಕೊಂಡಿದ್ದ 'ಅಂಜನೀಪುತ್ರ' ಚಿತ್ರದ ಈ ಹಾಡು ಸಖತ್ ವೈರಲ್ ಆಗಿದೆ. ಕುಂದಾಪುರ ಭಾಷೆಯಲ್ಲಿರುವ 'ನನ್ ಹೆಂಡ್ತಿ' ಹಾಡಿಗೆ ಇದೀಗ ಉಜಿರೆ ಎಸ್.ಡಿ.ಎಮ್ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಮಾಡಿದ್ದು, ಫೇಸ್ ಬುಕ್‍ನಲ್ಲಿ 7 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋ ನೋಡುವ ಮೂಲಕ ಚಿಂದಿ ಉಡಾಯಿಸಿದೆ.
ಪಕ್ಕಾ ಸಂಪ್ರದಾಯಬದ್ಧವಾಗಿ ಮಾಡಿರುವ ಈ ಡ್ಯಾನ್ಸ್ ನೋಡಿದ ಅಪ್ಪು ಅಭಿಮಾನಿ ಬಳಗದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಿಫರೆಂಟ್ ಕಾಸ್ಟ್ಯೂಮ್, ಹಾಡಿಗೆ ತಕ್ಕಂತೆ ಲಯಬದ್ಧವಾಗಿ ಹಾಕಿರುವ ಸ್ಟೆಪ್ಸ್, ಕಲರ್ ಫುಲ್ ಸೆಟ್ ಹಾಕಿ 'ನನ್ ಹೆಂಡ್ತಿ' ಹಾಡಿಗೆ ಉಜಿರೆ ಎಸ್.ಡಿ.ಎಮ್ ಕಾಲೇಜಿನ ತಂಡ ನರ್ತಿಸಿದ್ದು, ಒಂದೊಳ್ಳೆ ಪ್ರಯತ್ನ ಅಂತ ಎಲ್ಲರಿಂದ ಭೇಷ್ ಎನಿಸಿಕೊಂಡಿದೆ. ಈ ನೃತ್ಯದಲ್ಲಿ ವಿದ್ಯಾರ್ಥಿಗಳ ಜೊತೆ ಶಿಕ್ಷಕಿಯೊಬ್ಬರು ಕುಣಿದು ಕುಪ್ಪಳಿಸಿದ್ದು ವಿಶೇಷ ಆಕರ್ಷಣೆ.
ರವಿ ಬಸ್ರೂರು ಮ್ಯೂಸಿಕ್ ಕಂಪೋಸ್ ಮಾಡಿ, ಹಾಡಿರುವ 'ನನ್ ಹೆಂಡ್ತಿ' ಹಾಡು ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಈ ಸೂಪರ್ ಹಿಟ್ ಸಾಂಗ್ ಗೆ ಉಜಿರೆ ಎಸ್.ಡಿ.ಎಮ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಶಿಕ್ಷಕಿ ಶ್ರುತಿ ಜೈನ್ ಮತ್ತು ವಿದ್ಯಾರ್ಥಿಗಳಾದ ಪ್ರತೀಕ್, ಪ್ರಣೀತ್, ಪ್ರಜ್ವಲ್, ಕಿಶೋರ್, ಅನ್ವಿತಾ, ಚೈತ್ರಾ ಮತ್ತು ಶುಭಲತಾ ಇವರೆಲ್ಲಾ ಸೇರಿಕೊಂಡು ನೃತ್ಯ ಮಾಡಿ ಗೆಲುವಿನ ನಗೆ ಬೀರಿದ್ದಾರೆ.
'ಎಸ್.ಡಿ.ಎಮ್ ಮಲ್ಟಿಮೀಡಿಯಾ ಸ್ಟುಡಿಯೊ' ಬ್ಯಾನರ್ ಅಡಿಯಲ್ಲಿ ಮೂಡಿ ಬಂದ ಈ ಹೊಸ ಪ್ರೊಡಕ್ಷನ್ ಗೆ ಸಹಾಯಕ ಪ್ರಾಧ್ಯಾಪಕ ಸುನಿಲ್ ಹೆಗ್ಡೆ ಮತ್ತು ಶ್ರುತಿ ಜೈನ್ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದು, ಮಾಧವ ಹೊಳ್ಳ ಮತ್ತು ಸಂದೀಪ್ ಅವರು ಕ್ಯಾಮೆರಾ ಕೈ ಚಳಕ ತೋರಿದ್ದಾರೆ. ವಿದ್ಯಾರ್ಥಿಗಳಾದ ಲೋಯ್ಡ್ ಡಯಾಸ್ ಮತ್ತು ಅಭಿನಂದನ್ ಜೈನ್ ಸಹ ಛಾಯಾಗ್ರಾಹಕರಾಗಿ ದುಡಿದಿದ್ದಾರೆ.
ಎಸ್.ಡಿ.ಎಂ ಕಲಾ ಕೇಂದ್ರದ ನಾಟಕ ನಿರ್ದೇಶಕ ಹಾಗೂ ಪ್ರಾಧ್ಯಾಪಕ ಶಿವಶಂಕರ್ ನಿನಾಸಂ ಅವರ ಕಲ್ಪನೆಯಲ್ಲಿ ಕಲರ್ ಫುಲ್ ಸೆಟ್ ಅದ್ಭುತವಾಗಿ ಮೂಡಿ ಬಂದಿದ್ದು, ಥೇಟ್ ಸಿನಿಮಾದಲ್ಲಿದ್ದ ಸೆಟ್ ಅನ್ನೇ ಸ್ವಲ್ಪ ಹೋಲುತ್ತಿತ್ತು ಅಂದರೂ ತಪ್ಪಾಗ್ಲಿಕ್ಕಿಲ್ಲ. ಈ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.....