»   » ಟಿಕೆಟ್ ಖರೀದಿಸಿ 'ಚಂಡ'ನೋಡಿ ಕೊಂಡಾಡಿದ ವಿಜಯ್!

ಟಿಕೆಟ್ ಖರೀದಿಸಿ 'ಚಂಡ'ನೋಡಿ ಕೊಂಡಾಡಿದ ವಿಜಯ್!

Subscribe to Filmibeat Kannada


ಬೆಂಗಳೂರು, ನ.17 : ಚಂಡ ಚಿತ್ರ ಶನಿವಾರ ಬಿಡುಗಡೆಯಾಗಿದೆ. ವಿಶೇಷವೆಂದರೆ ಬಿಡುಗಡೆಗೆ ತಕರಾರು ಮಾಡಿದ್ದ ಚಿತ್ರದ ನಾಯಕ ನಟ ವಿಜಯ್, ಚಿತ್ರವನ್ನು ನರ್ತಕಿ ಚಿತ್ರಮಂದಿರದಲ್ಲಿ ಪ್ರೇಕ್ಷಕರ ನಡುವೆ ಕೂತು ಇಂದು(ನ.17) ವೀಕ್ಷಿಸಿದರು.

ಸಾಮಾನ್ಯ ಪ್ರೇಕ್ಷಕರಂತೆಯೇ ನರ್ತಕಿ ಚಿತ್ರಮಂದಿರಕ್ಕ ಬಂದು, ಸರದಿ ಸಾಲಲ್ಲಿ ನಿಂತು ವಿಜಯ್ ಟಿಕೆಟ್ ಪಡೆದರು. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾರಾಯಣ್ ಚಿತ್ರವನ್ನು ಚೆನ್ನಾಗಿ ಮಾಡಿದ್ದಾರೆ. ನನ್ನಿಂದ ಒಳ್ಳೆಯ ಅಭಿನಯ ತೆಗೆದಿದ್ದಾರೆ ಎಂದರು.

ಚಂಡ ಚಿತ್ರಕ್ಕೆ ರಾಜ್ಯದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರೇಕ್ಷಕರು ನಾರಾಯಣ್ ಮತ್ತು ವಿಜಯ್ ನಡುವಿನ ಜಗಳದ ಬಗ್ಗೆ ತಲೆಕೆಡಿಸಿಕೊಳ್ಳದೇ ಚಿತ್ರ ವೀಕ್ಷಣೆಗೆ ಮುಂದಾಗಿರುವಂತೆ ಕಂಡುಬಂದಿದೆ. ವಿಜಯ್ ಪಾತ್ರಕ್ಕೆ ಸುದರ್ಶನ್ ಅವರಿಂದ ನಾರಾಯಣ್ ಡಬ್ಬಿಂಗ್ ಮಾಡಿಸಿದ್ದಾರೆ. ಯುಗ ಮತ್ತು ಚಂಡ ಚಿತ್ರಗಳ ಬಿಡುಗಡೆ ಸಂಬಂಧದ ವಿವಾದ ಸೃಷ್ಟಿಯಾಗಿತ್ತು. ಆ ಪರಿಣಾಮ ವಿಜಯ್ ಅವರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಒಂದು ವರ್ಷ ಅಮಾನತುಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

(ದಟ್ಸ್ ಕನ್ನಡ ವಾರ್ತೆ)

ಚಂಡ ಚಿತ್ರದ ಗ್ಯಾಲರಿ
ಚಂಡ ಚಿತ್ರದ ನಾಯಕಿ ಶುಭಾ ಪೂಂಜಾ ಚಿತ್ರಪಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada