ನಿಶ್ಚಿತಾರ್ಥ ಉಂಗುರ ಬದಲಿಸಿಕೊಂಡ ಚಂದನ್ ಕುಮಾರ್-ಕವಿತಾ ಗೌಡ ಜೋಡಿ

'ಲಕ್ಷ್ಮಿ ಬಾರಮ್ಮ' ಖ್ಯಾತಿಯ ನಟ ಚಂದನ್ ಕುಮಾರ್ ಮತ್ತು ನಟಿ ಕವಿತಾ ಗೌಡ ಎಂಗೇಂಜ್‌ಮೆಂಟ್ ಮಾಡಿಕೊಂಡಿದ್ದಾರೆ. ಏಪ್ರಿಲ್ 1 ರಂದು ನಿಶ್ಚಿತಾರ್ಥ ಮಾಡಿಕೊಳ್ಳುವುದಾಗಿ ತಿಳಿಸಿದ್ದ ಜೋಡಿ ಹೇಳಿದಂತೆ ಎಂಗೇಜ್ ಆಗಿದ್ದಾರೆ.

Recommended Video

Chandan & Kavitha Engaged : ಉಂಗುರ ಬದಲಿಸಿಕೊಂಡ ಚಂದನ್ ಮತ್ತು ಕವಿತಾ ಗೌಡ | Filmibeat Kannada

ಬೆಂಗಳೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಪರಸ್ಪರ ಉಂಗುರ ಬದಲಿಸಿಕೊಂಡಿದ್ದಾರೆ.

''We are getting fooled on April first'' ಎಂದು ಇನ್ಸ್ಟಾಗ್ರಾಂನಲ್ಲಿ ಇತ್ತೀಚಿಗಷ್ಟೆ ಪೋಸ್ಟ್ ಹಾಕಿದ್ದ ಚಂದನ್ ಕುಮಾರ್, ಗೆಳತಿ ಕವಿತಾ ಗೌಡ ಜೊತೆಗಿನ ಫೋಟೋ ಹಂಚಿಕೊಂಡಿದ್ದರು. ಈಗ ಕವಿತಾ ಗೌಡ ನಿಶ್ಚಿತಾರ್ಥ ಉಂಗುರ ಬದಲಿಸಿಕೊಂಡಿರುವ ವಿಡಿಯೋ ಶೇರ್ ಮಾಡಿದ್ದಾರೆ.

Chandan kumar and Kavitha gowda Engagement

'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಸಮಯದಿಂದಲೂ ಉತ್ತಮ ಸ್ನೇಹಿತರಾಗಿದ್ದ ಈ ಜೋಡಿ ಕಳೆದ ಕೆಲವು ತಿಂಗಳಿಂದ ಪ್ರೀತಿಯಲ್ಲಿದ್ದರು. ಇದೀಗ, ಎರಡು ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನ ಆರಂಭಿಸಲು ನಿರ್ಧರಿಸಿದ್ದಾರೆ.

ಸದ್ಯ ನಿಶ್ಚಿತಾರ್ಥ ಮಾಡಿಕೊಂಡಿರುವ ಕವಿತಾ-ಚಂದನ್ ಜೋಡಿ ಮೇ ತಿಂಗಳಲ್ಲಿ ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನುಳಿದಂತೆ ಚಂದನ್ ಕುಮಾರ್ ಕನ್ನಡ ಮತ್ತು ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಬಿರಿಯಾನಿ ಹೋಟೆಲ್ ಉದ್ಯಮ ಸಹ ಪ್ರಾರಂಭಿಸಿದ್ದಾರೆ. ಈ ಕಡೆ ಬಿಗ್ ಬಾಸ್ ಕನ್ನಡ ಆರನೇ ಆವೃತ್ತಿಯಲ್ಲಿ ಕವಿತಾ ಗೌಡ ಸ್ಪರ್ಧಿಯಾಗಿ ಭಾಗವಹಿಸಿದ್ದರು.

More from Filmibeat

English summary
Actor Chandan Kumar and actress Kavitha Gowda engagement took place today in Bangalore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X