For Quick Alerts
  ALLOW NOTIFICATIONS  
  For Daily Alerts

  ರಕ್ಕಮ್ಮ ಹಾಡಿಗೆ ಹುಚ್ಚೆದ್ದು ಕುಣಿದ ಚಂದನ್, ನಿವೇದಿತಾ, ಆಶಿಕಾ ರಂಗನಾಥ್!

  |

  ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ರಕ್ಕಮ್ಮನದ್ದೇ ಹವಾ. ಯಾರು ನೋಡಿದರೂ ರಾ.. ರಾ.. ರಕ್ಕಮ್ಮ ಅಂತ ರಕ್ಕಮ್ಮನನ್ನು ಕರೆಯುತ್ತಿದ್ದಾರೆ. ಇದು 'ವಿಕ್ರಾಂತ್ ರೋಣ' ಚಿತ್ರದ ಹಾಡಿನ ಎಫೆಕ್ಟ್ ಅಲ್ಲದೆ ಮತ್ತೇನು ಅಲ್ಲ.

  ಈ ಹಾಡು ರಿಲೀಸ್ ಆದಾಗಿನಿಂದಲೂ ನೃತ್ಯಪ್ರಿಯರ ಕಾಲು ನೆಲದ ಮೇಲೆ ನಿಲ್ಲುತ್ತಾ ಇಲ್ಲ. ರಾ.. ರಾ.. ರಕ್ಕಮ್ಮ ಅಂತ ಸ್ಟೆಪ್ ಹಾಕಿ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಇನ್ನೂ ಈ ಹಾಡಿಗೆ ಹೆಜ್ಜೆ ಹಾಕಿದವರಲ್ಲಿ ಸಿನಿಮಾ ತಾರೆಯರೇ ಹೆಚ್ಚು.

  ವಿಕ್ರಾಂತ್ ರೋಣ' ಟ್ರೈಲರ್ ಬೆಂಕಿ: ರಿಲೀಸ್‌ಗೂ ಮೊದಲೇ ಬಂತು ವಿಮರ್ಶೆ!ವಿಕ್ರಾಂತ್ ರೋಣ' ಟ್ರೈಲರ್ ಬೆಂಕಿ: ರಿಲೀಸ್‌ಗೂ ಮೊದಲೇ ಬಂತು ವಿಮರ್ಶೆ!

  ಕಿಚ್ಚನನ್ನು ಇಷ್ಟ ಪಡುವ ಎಲ್ಲರೂ ಈ ಹಾಡಿಗೆ ಡಾನ್ಸ್ ಮಾಡಿ ಪೋಸ್ಟ್ ಹಂಚಿಕೊಳ್ಳುತ್ತಾ ಇದ್ದಾರೆ. ಸದ್ಯ ನಟಿ ಆಶಿಕಾರಂಗನಾಥ್ ಕೂಡ ರಕ್ಕಮ್ಮನ ಅವತಾರ ತಾಳಿದ್ದಾರೆ. ಯಾವೆಲ್ಲಾ ಕಲಾವಿದರು, ಕಿಚ್ಚನ ಹಾಡಿಗೆ ಹೇಗೆಲ್ಲಾ ಹೆಜ್ಜೆ ಹಾಕಿದ್ದಾರೆ ಎನ್ನುವ ವಿವರ ಇಲ್ಲಿದೆ‌. ಮುಂದೆ ಓದಿ...

  ಚಂದನ್ ಶೆಟ್ಟಿ ನಿದೇದಿತಾ ಗೌಡ ಮಸ್ತ್ ಡಾನ್ಸ್!

  ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಕೂಡ ಯಕ್ಕ ಸಕ್ಕ, ಯಕ್ಕ ಸಕ್ಕ ಅಂತ ಡ್ಯಾನ್ಸ್ ಮಾಡಿದ್ದಾರೆ. ನಿವೇದಿತಾ ಗೌಡ ಬ್ಲಾಕ್ ಅಂಡ್ ವೈಟ್ ಮತ್ತು ಚಂದನ್ ಶೆಟ್ಟಿ ಬ್ಲಾಕ್ ಅಂಡ್ ರೆಡ್ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಜೊತೆ ಜೊತೆಯಾಗಿ ಮಾಡಿದ ಈ ವಿಡಿಯೋ ಸಾಕಷ್ಟು ಮೆಚ್ಚುಗೆ ಪಡೆದು ವೈರಲ್ ಲಿಸ್ಟ್ ಸೇರಿದೆ.

  ನಟ ಸುದೀಪ್ ಮೊಟ್ಟ ಮೊದಲ ರೀಲ್ಸ್, ಹುಚ್ಚೆದ್ದು ಕುಣಿದ ಫ್ಯಾನ್ಸ್!ನಟ ಸುದೀಪ್ ಮೊಟ್ಟ ಮೊದಲ ರೀಲ್ಸ್, ಹುಚ್ಚೆದ್ದು ಕುಣಿದ ಫ್ಯಾನ್ಸ್!

  ರಮ್ಮಕ್ಕಳಾದ ಪಟಾಕಿ ಆಶಿಕಾ!

  ನಟಿ ಆಶಿಕಾ ರಂಗನಾಥ್ ರಕ್ಕಮ್ಮ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಕಿಚ್ಚ ಸುದೀಪ್ ಮಾಡಿರುವ ರೀಲ್ಸ್ ಅನುಕರಿಸಿದ್ದಾರೆ. ಸಿಂಪಲ್ ಬಿಳಿಯ ಬಣ್ಣದ ಕ್ರಾಪ್ ಟಾಪ್ ಮತ್ತು ಜೀನ್ಸ್ ತೊಟ್ಟು ಆಶಿಕಾ ಡಾನ್ಸ್ ಮಾಡಿದ್ದಾರೆ. ಆಶಿಕಾ ‌ಮಾಡಿರುವ ಈ ಡ್ಯಾನ್ಸ್ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆ ಗಳಿಸಿದೆ. ಇನ್ನೂ ಈ ಹಿಂದೆ ಆಶಿಕಾ ರಂಗನಾಥ್ 'ಕೋಟಿಗೊಬ್ಬ 3' ಸಿನಿಮಾದ ಪಟಾಕಿ ಹಾಡಿನಲ್ಲಿ‌ ಸುದೀಪ್ ಜೊತೆಗೆ ಕುಣಿದಿದ್ದರು.

  ಕಿಚ್ಚನ ಹಾಡಿಗೆ ಮಂಜು ಪಾವಗಡ ಮಸ್ತ್ ಫನ್!

  'ವಿಕ್ರಾಂತ್ ರೋಣ' ಚಿತ್ರದ ಈ ಹಾಡಿಗೆ ಸಾಕಷ್ಟು ಮಂದಿ ಹೆಜ್ಜೆ ಹಾಕಿದ್ದಾರೆ. ಅದರಲ್ಲಿ ಮಂಜು ಪಾವಗಡ ಮತ್ತು ಸಂಗೀತ ನಿರ್ದೇಶಕ ನವೀನ್ ಸಜ್ಜು ವಿಡಿಯೋ ಮಸ್ತಾಗಿದೆ‌. ಈ‌ ಜೋಡಿ ತಮ್ಮದೇ ಸ್ಟೈಲ್‌ನಲ್ಲಿ ಒಟ್ಟಾಗಿ ವಿಡಿಯೋ ಮಾಡಿದೆ. ರಕ್ಕಮ್ಮ ಹಾಡಿಗೆ ಕಾಮಿಡಿ ಫ್ಲೇವರ್ ಕೊಟ್ಟು ಡ್ಯಾನ್ಸ್ ಮಾಡಿದ್ದಾರೆ ಮಂಜು ಪಾವಗಡ ಮತ್ತು ನವೀನ್ ಸಜ್ಜು.

  ಪ್ಯಾನ್ ಇಂಡಿಯಾ ರೇಸ್‌ನಲ್ಲಿ ಕನ್ನಡ ಸ್ಟಾರ್ ನಟರು: ಓಡೋರು ಯಾರು? ಬೀಳೋರು ಯಾರು?ಪ್ಯಾನ್ ಇಂಡಿಯಾ ರೇಸ್‌ನಲ್ಲಿ ಕನ್ನಡ ಸ್ಟಾರ್ ನಟರು: ಓಡೋರು ಯಾರು? ಬೀಳೋರು ಯಾರು?

  ರಕ್ಕಮ್ಮ ಹಾಡಿಗೆ ಮಕ್ಕಳೊಂದಿಗೆ ಕುಣಿದ ಸೃಜನ್!

  ನಟ ಸೃಜನ್ ಲೋಕೇಶ್ ಕೂಡ ಈ ಹಾಡಿಗೆ ಡಾನ್ಸ್ ಮಾಡಿದ್ದಾರೆ. ಆದರೆ ಸೃಜನ್ ಇಲ್ಲೂ ತಮ್ಮ ಸೃಜನಶೀಲತೆಯನ್ನು ತೋರಿಸಿದ್ದಾರೆ. ರಾ..ರಾ.. ರಕ್ಕಮ್ಮ ಹಾಡಿಗೆ ಸೃಜನ್ ಲೋಕೇಶ್ ಮಕ್ಕಳ ಗುಂಪಿನ ಜೊತೆಗೆ ನೃತ್ಯ ಮಾಡಿದ್ದಾರೆ. ಸೃಜನ್ ಲೋಕೇಶ್ ಮತ್ತು ಮಕ್ಕಳು ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ್ದು, ವಿಡಿಯೋ ವೈರಲ್ ಆಗಿದೆ‌.

  English summary
  Chandan Shetty, Niveditha Gowda, Ashika Ranganath and many Others Dance For Vikrant Rona Rakkamma Song, Know More,
  Monday, May 30, 2022, 13:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X