For Quick Alerts
  ALLOW NOTIFICATIONS  
  For Daily Alerts

  ಮದುವೆ ಆಗ್ಬಿಟ್ರಾ ಚಂದನ್.! ಫೋಟೋ ನೋಡಿ ಫುಲ್ ಕನ್ಫ್ಯೂಷನ್

  |

  Recommended Video

  ಕಿರುತೆರೆ ನಟ, ಬಿಗ್ ಬಾಸ್ ಖ್ಯಾತಿಯ ಚಂದನ್ ಫೋಟೋದಿಂದ ಫುಲ್ ಕನ್ಫ್ಯೂಷನ್ | Oneindia Kannada

  'ಲಕ್ಷ್ಮಿ ಬಾರಮ್ಮ' ಹಾಗೂ 'ಬಿಗ್ ಬಾಸ್' ಖ್ಯಾತಿಯ ನಟ ಚಂದನ್ 'ಪ್ರೇಮ ಬರಹ' ಸಿನಿಮಾದ ನಂತರ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಈ ಕಡೆ ಚಂದನ್ ಅಭಿನಯಿಸುತ್ತಿರುವ 'ಸರ್ವಮಂಗಳ ಮಾಂಗಲ್ಯೆ' ಧಾರಾವಾಹಿಯ ಸಹ ನಟಿ ಐಶ್ವರ್ಯ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.

  ಈ ಸರ್ಪ್ರೈಸ್ ಸುದ್ದಿ ಬೆನ್ನಲ್ಲೆ ಈಗ ಇನ್ನೊಂದು ಅಚ್ಚರಿ ವಿಷ್ಯ ಚರ್ಚೆಯಾಗ್ತಿದೆ. ಹೌದು, ಸರ್ವಮಂಗಳ ಮಾಂಗಲ್ಯೆ ಧಾರಾವಾಹಿಯಲ್ಲಿ ನಟಿಸುತ್ತಿರುವ ಚಂದನ್ ಕೂಡ ಮದುವೆ ಆಗಿಬಿಟ್ಟಿದ್ದಾರೆ ಎಂಬ ಅನುಮಾನ, ಕುತೂಹಲ ಈಗ ಹುಟ್ಟಿಕೊಂಡಿದೆ.

  'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿಯ ನಟಿ ಐಶ್ವರ್ಯಾಗೆ ಕೂಡಿ ಬಂತು ಕಂಕಣ ಭಾಗ್ಯ 'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿಯ ನಟಿ ಐಶ್ವರ್ಯಾಗೆ ಕೂಡಿ ಬಂತು ಕಂಕಣ ಭಾಗ್ಯ

  ಇದಕ್ಕೆ ಕಾರಣ, ಸ್ವತಃ ಚಂದನ್ ಅವರು ಪೋಸ್ಟ್ ಮಾಡಿರುವ ಫೋಟೋ. ಈ ಫೋಟೋದಲ್ಲಿ ಅಯೇಶಾ ಎಂಬ ನಟಿಯ ಜೊತೆ ಮದುವೆ ಆಗಿರುವ ಸ್ಟೈಲ್ ನಲ್ಲಿ ಚಂದನ್ ನಿಂತು ಫೋಸ್ ಕೊಟ್ಟರುವುದು ಇಂತಹದೊಂದು ಪ್ರಶ್ನೆ ಉದ್ಭವಿಸಲು ಕಾರಣವಾಗಿದೆ. ಅಷ್ಟಕ್ಕೂ, ಈ ಫೋಟೋ ಯಾವುದು? ನಿಜಕ್ಕೂ ಮದುವೆ ಆದ್ರಾ ಚಂದನ್? ಮುಂದೆ ಓದಿ.....

  ಮದುವೆ ನಿಜ, ಆದ್ರೆ....

  ಮದುವೆ ನಿಜ, ಆದ್ರೆ....

  ನಟ ಚಂದನ್ ಮದುವೆ ಆಗಿರುವುದು ನಿಜ. ಆದ್ರೆ, ಇದು ನಿಜ ಜೀವನದಲ್ಲಲ್ಲ. ಬದಲಾಗಿ ಚಂದನ್ ಅಭಿನಯಿಸುತ್ತಿರುವ ಹೊಸ ತೆಲುಗು ಧಾರಾವಾಹಿಯಲ್ಲಿ. ಸಹ ನಟಿ ಆಯೇಶಾ ಜೊತೆ ನಟಿಸುತ್ತಿರುವ ಚಂದನ್, ಈ ಸಿರೀಯಲ್ ನಲ್ಲಿ ಗಂಡ-ಹೆಂಡತಿ ಪಾತ್ರ ಮಾಡುತ್ತಿದ್ದಾರೆ.

  'ಬಾಹುಬಲಿ' ಪ್ರಭಾಸ್ ಜೊತೆಯಲ್ಲಿ ಕನ್ನಡ ನಟ ಚಂದನ್!'ಬಾಹುಬಲಿ' ಪ್ರಭಾಸ್ ಜೊತೆಯಲ್ಲಿ ಕನ್ನಡ ನಟ ಚಂದನ್!

  ಕನ್ ಫ್ಯೂಸ್ ಆದ ಫ್ಯಾನ್ಸ್

  ಕನ್ ಫ್ಯೂಸ್ ಆದ ಫ್ಯಾನ್ಸ್

  ಚಂದನ್ ಈ ಫೋಟೋ ಹಾಕಿ ಇದು ''ಸಾವಿತ್ರಮ್ಮಗಾರಿ ಅಬ್ಬಾಯಿ'' ಧಾರಾವಾಹಿಯ ಮೊದಲ ಫೋಟೋ ಎಂದು ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ. ಅದ್ರೆ, ಅದನ್ನ ಅರ್ಥೈಸಿಕೊಳ್ಳದ ಕೆಲವು ಫ್ಯಾನ್ಸ್ ಚಂದನ್ ಮದುವೆ ಆಗಿದ್ದಾರೆ ಎಂದು ನಂಬಿ ಇಬ್ಬರಿಗೂ ಶುಭಕೋರಿದ್ದಾರೆ. ಅದಕ್ಕೆ ಮತ್ತೆ ಕೆಲವರು ಪ್ರತಿಕ್ರಿಯಿಸಿ, ಇದು ನಿಜ ಅಲ್ಲ, ಧಾರಾವಾಹಿ ಎಂದು ಸ್ಪಷ್ಟನೆ ನೀಡಿದ್ದಾರೆ.

  ಬಿಗ್ ಬಾಸ್ ಮನೆಯಿಂದ ಹೊರಬಂದ ಚಂದನ್ ಈಗೇನ್ಮಾಡ್ತಿದ್ದಾರೆಬಿಗ್ ಬಾಸ್ ಮನೆಯಿಂದ ಹೊರಬಂದ ಚಂದನ್ ಈಗೇನ್ಮಾಡ್ತಿದ್ದಾರೆ

  ಸಾವಿತ್ರಮ್ಮಗಾರಿ ಅಬ್ಬಾಯಿ

  ಸಾವಿತ್ರಮ್ಮಗಾರಿ ಅಬ್ಬಾಯಿ

  ಕನ್ನಡದಲ್ಲಿ ಲಕ್ಷ್ಮಿ ಬಾರಮ್ಮ, ರಾಧಾ ಕಲ್ಯಾಣ, ಸರ್ವಮಂಗಳ ಮಾಂಗಲ್ಯೆ ಅಂತಹ ಧಾರಾವಾಹಿಯಲ್ಲಿ ನಟಿಸಿರುವ ಚಂದನ್ ಈಗ ತೆಲುಗು ಕಿರುತೆರೆಗೂ ಕಾಲಿಟ್ಟಿದ್ದಾರೆ. 'ಸಾವಿತ್ರಮ್ಮಗಾರಿ ಅಬ್ಬಾಯಿ' ಮೊದಲ ತೆಲುಗು ಧಾರಾವಾಹಿಯಾಗಿದ್ದು, ಚಂದನ್ ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

  ಯಾವ ಸಿನಿಮಾ ಮಾಡ್ತಿದ್ದಾರೆ?

  ಯಾವ ಸಿನಿಮಾ ಮಾಡ್ತಿದ್ದಾರೆ?

  'ಪ್ರೇಮ ಬರಹ' ಮುಗಿದ ಮೇಲೆ ಧಾರಾವಾಹಿಗೆ ಮರಳಿರುವ ಚಂದನ್, ಕನ್ನಡ ಮೆಗಾ ಸಿನಿಮಾ 'ಕುರುಕ್ಷೇತ್ರ'ದಲ್ಲಿ ಸಹದೇವನ ಪಾತ್ರ ಮಾಡಿದ್ದಾರೆ. ಆ ಸಿನಿಮಾ ಬಿಡುಗಡೆಯಾಗಬೇಕಿದೆ. ಬಹುಭಾಷೆಯಲ್ಲೂ ಚಂದನ್ ಮಿಂಚುತ್ತಿದ್ದು ಅಧಿಕೃತವಾಗಿ ಯಾವ ಚಿತ್ರವನ್ನ ಘೋಷಣೆ ಮಾಡಿಲ್ಲ.

  English summary
  Kannada actor chandan kumar shares his marriage photo from savitramma gari abbayi set. its first telugu serial of him. he is playing lead role in that serial.
  Friday, May 10, 2019, 12:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X