For Quick Alerts
  ALLOW NOTIFICATIONS  
  For Daily Alerts

  ಪೊಗರು ನಂತರ ಮತ್ತೆ ಒಂದಾದ ಧ್ರುವ ಸರ್ಜಾ ಮತ್ತು ಚಂದನ್ ಶೆಟ್ಟಿ

  |

  ಪೊಗರು ಚಿತ್ರದ ಖರಾಬು ಹಾಡು ಸೌತ್ ಇಂಡಸ್ಟ್ರಿಯಲ್ಲಿ ಸಖತ್ ಸದ್ದು ಮಾಡ್ತಿದೆ. ಕನ್ನಡ ಚಿತ್ರರಂಗ ಇತಿಹಾಸದಲ್ಲಿ ಕನ್ನಡದ ಹಾಡೊಂದು ಯ್ಯೂಟ್ಯೂಬ್‌ನಲ್ಲಿ 150 ಮಿಲಿಯನ್ ವೀಕ್ಷಣೆ ಕಂಡಿದೆ ಅಂದ್ರೆ 'ಖರಾಬು' ಹಾಡು.

  ಮತ್ತೆ ಬರಲಿದೆ ಧ್ರುವ ಸರ್ಜಾ, ಚಂದನ್ ಶೆಟ್ಟಿ ಕಾಂಬಿನೇಶನ್ ಹಾಡು | Chandan Shetty | Dubari | Dhruvasarja

  ಈ ಹಾಡನ್ನು ಹಾಡಿರುವುದು ಚಂದನ್ ಶೆಟ್ಟಿ. ಗಾಯನ ಮಾತ್ರವಲ್ಲ ಪೊಗರು ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರುವುದೇ ಚಂದನ್ ಶೆಟ್ಟಿ. ಧ್ರುವ ಸರ್ಜಾ ಮತ್ತು ಚಂದನ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಮೊದಲ ಆಲ್ಬಂ ಇದಾಗಿದ್ದು, ಚೊಚ್ಚಲ ಪ್ರಯತ್ನದಲ್ಲೇ ಸಕ್ಸಸ್ ಕಂಡಿದ್ದಾರೆ.

  ಏನೇ ಹೇಳಿ.....ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ತುಂಬಾ ಅದೃಷ್ಟ 'ರಿ'!ಏನೇ ಹೇಳಿ.....ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ತುಂಬಾ ಅದೃಷ್ಟ 'ರಿ'!

  ಸಿನಿಮಾ ಇನ್ನು ರಿಲೀಸ್ ಆಗಿಲ್ಲ. ಅಷ್ಟರಲ್ಲೇ ಚಂದನ್ ಶೆಟ್ಟಿ ಮತ್ತು ಧ್ರುವ ಸರ್ಜಾ ಮತ್ತೊಂದು ಪ್ರಾಜೆಕ್ಟ್‌ನಲ್ಲಿ ಒಂದಾಗಿದ್ದಾರೆ. ಹೌದು, ಉದಯ್ ಮೆಹ್ತಾ ನಿರ್ಮಾಣದಲ್ಲಿ 'ದುಬಾರಿ' ಎಂಬ ಚಿತ್ರವನ್ನು ಧ್ರುವ ಸರ್ಜಾ ಆರಂಭಿಸಿದ್ದಾರೆ.

  ಈ ಚಿತ್ರಕ್ಕೆ ನಂದಕಿಶೋರ್ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ ಚಂದನ್ ಶೆಟ್ಟಿ ಅವರೇ ಈ ಚಿತ್ರಕ್ಕೂ ಸಂಗೀತ ಒದಗಿಸಲಿದ್ದಾರೆ. ಪೊಗರು ಮೂಲಕ ಹಿಟ್ ಹಾಡುಗಳನ್ನು ನೀಡಿರುವ ಚಂದನ್-ಧ್ರುವ ಜೋಡಿ ದುಬಾರಿ ಚಿತ್ರದಲ್ಲೂ ಕಮಾಲ್ ಮಾಡಲು ಹೊರಟಿದೆ.

  ಅಂದ್ಹಾಗೆ, ಚಂದನ್ ಶೆಟ್ಟಿ ಮತ್ತು ಧ್ರುವ ಸರ್ಜಾ ಸಿನಿಮಾ ಇಂಡಸ್ಟ್ರಿಗೆ ಬರುವುದಕ್ಕೂ ಮುಂಚೆಯಿಂದಲೂ ಸ್ನೇಹಿತರು. ಇಬ್ಬರು ಒಟ್ಟಿಗೆ ಆಲ್ಬಂನಲ್ಲಿ ಕೆಲಸ ಸಹ ಮಾಡಿದ್ದಾರೆ.

  ಇನ್ನುಳಿದಂತೆ ದುಬಾರಿ ಚಿತ್ರ ಇಂದು ಮುಹೂರ್ತ ಮಾಡಿಕೊಂಡಿದೆ. ಪ್ರಮುಖ ಪಾತ್ರದಲ್ಲಿ ದೊಡ್ಡಣ್ಣ ಮತ್ತು ತಾರಾ ಕಾಣಿಸಿಕೊಳ್ಳಲಿದ್ದಾರೆ. ಡಿಸೆಂಬರ್ ನಂತರ ದುಬಾರಿ ಚಿತ್ರೀಕರಣ ಆರಂಭವಾಗಲಿದೆ.

  English summary
  ter Pogaru movie Music director Chandan shetty and Dhruva sarja working another project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X