ಚಂದನ್ ಶೆಟ್ಟಿ-ನವೀನ್ ಸಜ್ಜು ಕಾಂಬಿನೇಶನ್ ನಲ್ಲಿ ಮೂಡಿಬರಲಿದೆ 'ಎಣ್ಣೆ ಸಾಂಗು'.!

Recommended Video

ಒಂದಾದ್ರು ಚಂದನ್ ಶೆಟ್ಟಿ, ನವೀನ್ ಸಜ್ಜು..! | FILMIBEAT KANNADA

''ಮೂರೇ ಮೂರು ಪೆಗ್ ಗೆ...'', ''ಚಾಕಲೇಟ್ ಗರ್ಲ್..'', ''ಟಕಿಲ...'', 'ಫೈಯರ್..'' ಮುಂತಾದ ಹಾಡುಗಳಿಂದ ಕನ್ನಡ ಸಂಗೀತ ಪ್ರಿಯರ ಮನ ಗೆದ್ದಿರುವ ರಾಪರ್ ಚಂದನ್ ಶೆಟ್ಟಿ.

ಇನ್ನೂ ''ಎಣ್ಣೆ ನಮ್ದು.. ಊಟ ನಿಮ್ದು..'', 'ಜಮ್ಮ.. ಜಮ್ಮ...'' ಸೇರಿದಂತೆ ಹಲವು ಗೀತೆಗಳಿಂದ ಕನ್ನಡಿಗರ ಹೃದಯ ಕದ್ದಿರುವ ಗಾಯಕ ಕಮ್ ಸಂಗೀತ ಸಂಯೋಜಕ ನವೀನ್ ಸಜ್ಜು.

ಅಪ್ಪಟ ಕನ್ನಡ ಪ್ರತಿಭೆಗಳಾಗಿರುವ ಇವರಿಬ್ಬರು ಈಗಾಗಲೇ 'ಬಿಗ್ ಬಾಸ್' ಮನೆಯಲ್ಲಿ ತಮ್ಮ ಪ್ರತಿಭೆಯ ಜೊತೆಗೆ ವ್ಯಕ್ತಿತ್ವವನ್ನೂ ಹೊರಹಾಕಿದ್ದಾರೆ. ಚಂದನ್ ಶೆಟ್ಟಿ 'ಬಿಗ್ ಬಾಸ್ ಕನ್ನಡ-5' ವಿನ್ನರ್ ಆದರೆ, ನವೀನ್ ಸಜ್ಜು 'ಬಿಗ್ ಬಾಸ್ ಕನ್ನಡ-6' ರನ್ನರ್ ಅಪ್.

ಈ ಎರಡು ಅದ್ಭುತಗಳು ಸದ್ಯ ಒಂದಾಗಲು ಮನಸ್ಸು ಮಾಡಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಒಂದಾದ ಚಂದನ್ ಶೆಟ್ಟಿ-ನವೀನ್ ಸಜ್ಜು

ಒಂದಾದ ಚಂದನ್ ಶೆಟ್ಟಿ-ನವೀನ್ ಸಜ್ಜು

ಒಂದು ಹಾಡಿಗಾಗಿ ಚಂದನ್ ಶೆಟ್ಟಿ ಮತ್ತು ನವೀನ್ ಸಜ್ಜು ಒಂದಾಗಿದ್ದಾರೆ. ಹೇಳಿ ಕೇಳಿ... ಇಬ್ಬರೂ ಜನಪ್ರಿಯತೆ ಪಡೆದಿದ್ದೇ 'ಮೂರು ಪೆಗ್ಗು...', 'ಎಣ್ಣೆ ನಮ್ದು...' ಎಂದುಕೊಂಡು. ಹೀಗಾಗಿ, ಇಬ್ಬರೂ ಸೇರಿ ಒಂದೊಳ್ಳೆ 'ಎಣ್ಣೆ ಸಾಂಗ್' ರೆಡಿ ಮಾಡಲು ಮುಂದಾಗಿದ್ದಾರೆ.

ಮಾತುಕತೆ ನಡೆದಿದೆ.!

ಮಾತುಕತೆ ನಡೆದಿದೆ.!

ಈಗಾಗಲೇ ಚಂದನ್ ಶೆಟ್ಟಿ ಮತ್ತು ನವೀನ್ ಸಜ್ಜು ಭೇಟಿ ಆಗಿ 'ಎಣ್ಣೆ ಸಾಂಗ್' ಮಾಡುವ ಕುರಿತು ಮಾತುಕತೆ ನಡೆಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸಾಹಿತ್ಯ ರಚನೆ, ಸಾಂಗ್ ರೆಕಾರ್ಡಿಂಗ್ ಶುರು ಆಗಲಿದೆ.

ಚಂದನ್ ಶೆಟ್ಟಿ ಬಿಜಿ

ಚಂದನ್ ಶೆಟ್ಟಿ ಬಿಜಿ

ಇತ್ತ ಚಂದನ್ ಶೆಟ್ಟಿ ಕೂಡ ಆಲ್ಬಂ ಒಂದನ್ನು ಸಿದ್ಧಪಡಿಸುವ ಕೆಲಸದಲ್ಲಿ ಬಿಜಿಯಾಗಿದ್ದಾರೆ. 'ಬಿಗ್ ಬಾಸ್' ವಿನ್ನರ್ ಆದ್ಮೇಲೆ ಚಂದನ್ ಶೆಟ್ಟಿ ಅದೃಷ್ಟ ಖುಲಾಯಿಸಿದೆ. ಚಂದನ್ ಶೆಟ್ಟಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

ನವೀನ್ ಸಜ್ಜು ಗೆ ಆಫರ್ಸ್ ಸುರಿಮಳೆ

ನವೀನ್ ಸಜ್ಜು ಗೆ ಆಫರ್ಸ್ ಸುರಿಮಳೆ

ಇನ್ನೂ ನವೀನ್ ಸಜ್ಜು ರವರಿಗೂ ಸ್ಯಾಂಡಲ್ ವುಡ್ ಹೊಸದೇನೂ ಅಲ್ಲ. ಅದ್ರಲ್ಲೂ, 'ಬಿಗ್ ಬಾಸ್' ಮನೆಗೆ ಹೋಗಿ ಬಂದ್ಮೇಲೆ ನವೀನ್ ಗೆ ಗಾಂಧಿನಗರದಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ಈ ನಡುವೆ ಚಂದನ್ ಶೆಟ್ಟಿ ಜೊತೆ ಸೇರಿ 'ಎಣ್ಣೆ ಸಾಂಗ್' ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

More from Filmibeat

English summary
Chandan Shetty and Naveen Sajju have decided to compose a song together.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X