ಚಂದನ್ ಶೆಟ್ಟಿ-ನಿವೇದಿತಾಗೆ 'ಅಕ್ಟೋಬರ್ 15' ಮರೆಯಲಾಗದ ದಿನ ಆಗೋಯ್ತು.!
Recommended Video

Rap ಸಿಂಗರ್ ಚಂದನ್ ಶೆಟ್ಟಿ ಮತ್ತು 'ಗೊಂಬೆ' ಖ್ಯಾತಿ ನಿವೇದಿತಾ ಗೌಡ ಅವರಿಬ್ಬರ ಸ್ನೇಹ ಎಲ್ಲರಿಗೂ ಗೊತ್ತಿರೋದೇ. ಆದ್ರೆ, ಇವರಿಬ್ಬರು ಲವ್ ಮಾಡ್ತಿದ್ದಾರೆ, ಮದುವೆ ಆಗ್ತಾರೆ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ.
ಆದ್ರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಚಂದನ್ ಮತ್ತು ನಿವೇದಿತಾ ಆರಾಮಾಗಿ ಟೈಂ ಪಾಸ್ ಮಾಡ್ತಿದ್ದಾರೆ. ಬರ್ತಡೇ, ಸ್ಟೇಜ್ ಶೋ, ಟಿವಿ ಶೋಗಳಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಇದು ಸಹಜವಾಗಿ ಚಂದು ಮತ್ತು ಗೊಂಬೆಗೆ ಖಾಸಗಿಯಾಗಿ ಕಿರಿಕಿರಿ ಎನಿಸಿದರೂ, ಎಲ್ಲಿಯೂ ಈ ಬಗ್ಗೆ ಸ್ಪಷ್ಟನೆ ನೀಡುವ ಮತ್ತು ಅದರ ಬಗ್ಗೆ ಮಾತನಾಡುವ ನಿರ್ಧಾರ ಮಾಡಿಲ್ಲ. ಇಷ್ಟು ಬೆಳವಣಿಗೆಗಳ ಮಧ್ಯೆ ಅಕ್ಟೋಬರ್ 15 ನೇ ತಾರೀಖು ಬಂದೇ ಬಿಟ್ಟಿದೆ. ಈ ದಿನಾಂಕ ಇವರಿಬ್ಬರ ಜೀವನದಲ್ಲಿ ಮರೆಯಲಾಗದ ದಿನವಾಗಿದೆ. ಅಷ್ಟಕ್ಕೂ ಏನದು.? ಮುಂದೆ ಓದಿ.....

ಭೇಟಿಯಾಗಿ ಒಂದು ವರ್ಷ
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಪರಿಚಯವಾಗಿ ಅಕ್ಟೋಬರ್ 15ಕ್ಕೆ ಒಂದು ವರ್ಷ ಆಗಿದೆ. ಈ ಸಂಭ್ರಮವನ್ನ ಪರಸ್ಪರ ಇಬ್ಬರು ಸೆಲೆಬ್ರೇಟ್ ಮಾಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಇಬ್ಬರು ತಮ್ಮ ಸ್ನೇಹದ ಬಗ್ಗೆ ಮಾತನಾಡಿದ್ದಾರೆ.

ನಿವೇದಿತಾ ಹೇಳಿರುವುದೇನು.?
'ನಾನು ನಿನ್ನನ್ನು ಭೇಟಿಯಾಗಿ ಇವತ್ತಿಗೆ ಒಂದು ವರ್ಷ ಆಯ್ತು. ಬಿಗ್ ಬಾಸ್ ನಲ್ಲಿ ನಾನು ನಿನ್ನನ್ನು ಭೇಟಿಯಾಗಿದ್ದು, ದಿನದಿಂದ ದಿನಕ್ಕೆ ನಮ್ಮ ಸ್ನೇಹ ಹೆಚ್ಚಾಗ್ತಾನೇ ಇದೆ. ಪ್ರಪಂಚ ನಮ್ಮ ಸಂಬಂಧದ ಬಗ್ಗೆ ಏನೇ ಹೇಳಿದ್ರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನೇನು ಹಾಗೂ ನೀನೇನು ಅನ್ನೋದು ನಮಗೆ ಗೊತ್ತು' ಎಂದು ನಿವೇದಿತಾ ಹೇಳಿದ್ದಾರೆ.

ಚಂದನ್ ಏನೆಂದು ಬರೆದುಕೊಂಡಿದ್ದಾರೆ
'ರಿಯಲ್ ಫ್ರೆಂಡ್ ಶಿಫ್ ಯಾವತ್ತೂ ದೂರ ಆಗಲ್ಲ. ನೀನು ನನ್ನ ಬೆಸ್ಟ್ ಫ್ರೆಂಡ್ ಅಂತ ಹೇಳಿ ಕೊಳ್ಳಲು ನನಗೆ ತುಂಬಾ ಖುಷಿಯಾಗುತ್ತೆ'' ಎಂದು ಚಂದನ್ ಶೆಟ್ಟಿ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಗೂ ಒಂದು ವರ್ಷ ಆಯ್ತು
ಅಂದ್ಹಾಗೆ, ಇವರಿಬ್ಬರು ಭೇಟಿಯಾಗಿದ್ದ ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ. ಕಳೆದ ಅಕ್ಟೋಬರ್ 15 ರಂದು ಬಿಗ್ ಬಾಸ್ 5ನೇ ಆವೃತ್ತಿ ಆರಂಭವಾಗಿತ್ತು. ಆ ದಿನವೇ ಚಂದನ್ ಮತ್ತು ನಿವೇದಿತಾ ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿದ್ದರು. ಈಗ ಆರನೇ ಆವೃತ್ತಿ ಬರ್ತಿದೆ. ಅಕ್ಟೋಬರ್ 21 ರಂದು ಆರಂಭವಾಗ್ತಿದೆ.


Click it and Unblock the Notifications











