ಜೀವನಾಂಶ, ಮಗು, 3ನೇ ವ್ಯಕ್ತಿಯ ಬಗ್ಗೆ ಚಂದನ್ ಶೆಟ್ಟಿ, ನಿವೇದಿತಾ ಸ್ಪಷ್ಟನೆ

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಕಾನೂನಾತ್ಮಕವಾಗಿ ಬೇರ್ಪಟ್ಟಿದ್ದಾರೆ. ಪ್ರೀತಿಸಿ ನಮದುವೆ ಆಗಿದ್ದ ಜೋಡಿ ಪರಸ್ಪರ ಒಪ್ಪಿಗೆಯಿಂದ ಡಿವೋರ್ಸ್ ಪಡೆದು ದೂರಾಗಿದ್ದಾರೆ. ಇದರ ಬಗ್ಗೆ ಅವರಿಬ್ಬರ ಡಿವೋರ್ಸ್ ವಿಚಾರದ ಬಗ್ಗೆ ಒಂದಷ್ಟು ವದಂತಿ, ಊಹಾಪೋಹ ಹರಿದಾಡಿತ್ತು. ಇಬ್ಬರೂ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯಿಸಿದ್ದಾರೆ.

ಬೇಡದ ಸುಳ್ಳು ಸುದ್ದಿಗಳನ್ನು ಕೆಲವರು ಸೃಷ್ಟಿಸಿದ್ದಾರೆ. ಅದಕ್ಕೆ ಸ್ಪಷ್ಟನೆ ನೀಡಲು ಮಾಧ್ಯಮದ ಮುಂದೆ ಬಂದಿದ್ದೇವೆ. "ನನ್ನ ಆಲೋಚನೆ, ಜೀವನಶೈಲಿ ಒಂದು ರೀತಿ ಇದ್ದರೆ, ನಿವೇದಿತಾ ಅವರದ್ದು ಬೇರೆ ರೀತಿ ಇತ್ತು. ಜೀವನ ಅಂದ್ರೆ ಏನು ಎಂದು ನಾವಿಬ್ಬರು ಅರ್ಥ ಮಾಡಿಕೊಂಡಿರುವುದು ಬೇರೆ ಬೇರೆ. ಅದು ಹೊಂದಾಣಿಕೆ ಆಗಲಿಲ್ಲ. ಹೊಂದಿಕೊಳ್ಳಲು ಪ್ರಯತ್ನಿಸಿದೆವು. ಆಗಲಿಲ್ಲ. ಪದೇ ಪದೆ ಮನಸ್ತಾಪ ಬಂದಾಗ, ಮಾನಸಿಕವಾಗಿ ನೋವು ಅನುಭವಿಸುತ್ತಾ ಒಟ್ಟಿಗೆ ಇರೋದು ಸರಿಯಲ್ಲ ಎಂದು ಒಮ್ಮತದಿಂದ ಡಿವೋರ್ಸ್ ನಿರ್ಧಾರಕ್ಕೆ ಬಂದೆವು" ಎಂದಿದ್ದಾರೆ. ಚಂದನ್ ಮಾತಿಗೆ ನಿವೇದಿತಾ ದನಿಗೂಡಿಸಿದ್ದಾರೆ.

Chandan shetty and niveditha gowda issue clarification on fake rumours after divorce

3 ವದಂತಿಗಖ ಬಗ್ಗೆ ನಾನು ಹೇಳಬೇಕು. ಮೊದಲಿಗೆ ಡಿವೋರ್ಸ್ ಬಳಿಕ ನಿವೇದಿತಾ ನನ್ನ ಬಳಿ ಕೋಟ್ಯಂತರ ರೂಪಾಯಿ ಜೀವನಾಂಶ ಕೇಳಿದ್ದಾರೆ ಅನ್ನೋದು. ಇದು ಸುಳ್ಳು. ಅವರು ಯಾವುದೇ ಜೀವನಾಂಶ, ಕೇಳಿಲ್ಲ, ನಾನು ಕೊಟ್ಟಿಲ್ಲ" ಎಂದು ಚಂದನ್ ಹೇಳಿದ್ದಾರೆ. ಮಕ್ಕಳ ವಿಚಾರಕ್ಕೆ ನಾವು ಡಿವೋರ್ಸ್ ಪಡೆದೆವು ಎನ್ನುವ ವದಂತಿ ಇದೆ. ನಾನು ಮಗು ಮಾಡಿಕೊಳ್ಳಲು ಒತ್ತಡ ಹಾಕಿದೆ. ಆಕೆ ಒಪ್ಪಲಿಲ್ಲ, ಅದಕ್ಕೆ ಡಿವೋರ್ಸ್ ಎನ್ನುತ್ತಿದ್ದಾರೆ ಅದು ಸುಳ್ಳು. ಆದರೆ ಅದು ಸುಳ್ಳು, ಯಾಕಂದರೆ ನಮಗೆ ಬೇರೆ ಬೇರೆ ಆಲೋಚನೆಗಳಿವೆ" ಎಂದಿದ್ದಾರೆ.

ಇನ್ನು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಡಿವೋರ್ಸ್‌ಗೆ ನಟ ಸೃಜನ್ ಲೋಕೇಶ್ ಕಾರಣ ಎನ್ನುವ ವದಂತೆ ಭಾರೀ ಸದ್ದು ಮಾಡಿತು. ಈ ಬಗ್ಗೆ ಮಾತನಾಡಿರುವ ಚಂದನ್ "ಮೂರನೇ ವ್ಯಕ್ತಿಯನ್ನು ನಿವೇದಿತಾ ಹೆಸರಿನ ಜೊತೆ ಸೇರಿಸಿ ಸಂಬಂಧ ಕಲ್ಪಿಸುತ್ತಿರುವುದು ನನಗೆ ಬಹಳ ಬೇಸರವಾಯಿತು. ಕಾರಣ ಆ ವ್ಯಕ್ತಿ ಮನೆಗೆ ನಾನು ಸಾಕಷ್ಟು ಬಾರ ಹೋಗಿದ್ದೇನೆ. ಅವರ ಫ್ಯಾಮಿಲಿ ಫಂಕ್ಷನ್ ಅಂದ್ರೆ ನಮಗೆ ಖುಷಿ ಆಗುತ್ತಿತ್ತು. ಆದರೆ ಆ ವ್ಯಕ್ತಿ ಜೊತೆ ನಿವೇದಿತಾಗೆ ಸಂಬಂಧ ಇದೆ ಎಂದು ಹೇಳುವ ವಿಕೃತಿ ಕನ್ನಡಿಗರಾಗಿ ನಾವು ಮಾಡಬಾರದು, ಅದು ಶೋಭೆ ಅಲ್ಲ, ಇದಕ್ಕಿಂತ ಹೆಚ್ಚು ನಿವೇದಿತಾ ಹೇಳ್ತಾರೆ" ಎಂದು ಚಂದನ್ ಹೇಳಿದ್ದಾರೆ.

ನಿವೇದಿತಾ ಮಾತನಾಡಿ "ನನಗೆ ಬೇಸರವಾಯಿತು. ನಾವು ಫ್ಯಾಮಿಲಿ ಫ್ರೆಂಡ್ಸ್. ನಮಗೆ ಅವರ ಫ್ಯಾಮಿಲಿ ಜೊತೆ ಉತ್ತಮ ಒಡನಾಟವಿದೆ. ಪ್ರತಿ ವರ್ಷ ನನ್ನ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಾರೆ. ನಾನು ಮಾಡ್ತೀನಿ. ಆದರೆ ಯಾಕೆ ಈ ವರ್ಷ ಹೀಗೆ ಆಯಿತು ಗೊತ್ತಿಲ್ಲ. ಅವರಿಗೂ ಫ್ಯಾಮಿಲಿ ಇದೆ, ಮಕ್ಕಳು ಇದ್ದಾರೆ. ಸೆಂಟಿಮೆಂಟ್ಸ್‌ನ ಹರ್ಟ್ ಮಾಡ್ಬೇಡಿ. ಅದು ಎಲ್ಲರಿಗೂ ಬಹಳ ನೋವಾಗುತ್ತೆ."

Chandan shetty and niveditha gowda issue clarification on fake rumours after divorce

ಒಂದು ಪೋಸ್ಟ್ ಮಾಡಿದ ತಕ್ಷಣ, ಯಾವುದೋ ಟ್ರೆಂಡಿಂಗ್ ಸಾಂಗ್ ಹಾಕಿದ ತಕ್ಷಣ ಲವ್ ಇದೆ ಎಂದು ಹೇಳುವುದು ತಪ್ಪು. ಕೆಲವರು ತಮಾಷೆಗೆ, ಸೋಶಿಯಲ್ ಮೀಡಿಯಾ ರೀಚ್‌ಗೆ ಮಾಡಿರಬಹುದು. ಆದರೆ ಅದರಿಂದ ಆಗುವ ನೋವು ಅಷ್ಟಿಷ್ಟಲ್ಲ. ಅವರ ಫ್ಯಾಮಿಲಿಗೆ ಎಷ್ಟು ನೋವಾಗಿರಬಹುದು. ನಾನು ಸೃಜನ್ ಹಾಗೂ ಅವರ ಪತ್ನಿಗೆ ಕರೆ ಮಾಡಿ ಮಾತನಾಡಿದೆ. ಈ ರೀತಿ ಸುದ್ದಿ ಆಗ್ತಿದೆ ಬೇಸರ ಮಾಡಿಕೊಳ್ಳಬೇಡಿ ಅಂತ. ಅವರು ಬೆಂಬಲಿಸಿದರು. ಸುಳ್ಳು ವದಂತಿ ಹಬ್ಬಸಿದರೆ ಬಹಳ ಬೇಸರವಾಗುತ್ತದೆ" ಎಂದು ನಿವೇದಿತಾ ಹೇಳಿದ್ದಾರೆ.

ಪ್ರಶಾಂತ್ ಸಂಬರಗಿ ಹೇಳಿಕೆ ಬಗ್ಗೆ ಚಂದನ್ ಶೆಟ್ಟಿ ಮಾತನಾಡಿದ್ದಾರೆ. "ಒಬ್ಬ ವ್ಯಕ್ತಿ ಏನೋ ಹೇಳಿಕೆ ಕೊಟ್ಟಿದ್ದಾರೆ. ಅವರು ನನಗೆ ಬಹಳ ಆತ್ಮೀಯ ಸ್ನೇಹಿತ ಎಂದು ಹೇಳಿಕೊಂಡಿದ್ದಾರೆ. ಆದರೆ ಅವರು ಹೇಳುವಂತೆ 6 ತಿಂಗಳ ಹಿಂದೆ ನಮ್ಮಿಬ್ಬರ ನಡುವೆ ಯಾವುದೇ ಮಾತುಕತೆ ಆಗಿಲ್ಲ. ನನಗೂ ಅವರ ಮಾತು ಕೇಳಿ ಶಾಕ್ ಆಯಿತು. ಹೈದರಾಬಾದ್‌ನಲ್ಲಿ ನಿವೇದಿತಾಗೆ ಒಬ್ಬ ಹುಡುಗನ ಜೊತೆ ಸಂಬಂಧ ಇದೆ ಅಂತೆ ಅದಕ್ಕೆ ಹೋಗ್ತಾರಂತೆ ಎಂದು ಹೇಳಿದ್ದಾಗಿ ಯಾವುದೇ ಮಾತುಕತೆ ನಮ್ಮಿಬ್ಬರ ನಡುವೆ ನಡೆದಿಲ್ಲ" ಎಂದು ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

"ನಾವಿಬ್ಬರು ಒಂದು ಸಿನಿಮಾದಲ್ಲಿ ನಟಿಸುತ್ತಿದ್ದೇವೆ. ಸಿನಿಮಾ ಚಿತ್ರೀಕರಣದ ವೇಳೆ ಮಾತನಾಡಿದ್ದೀವಿ ಅಷ್ಟೆ. ಬೇರೆ ಯಾವುದೇ ಮಾತುಕತೆ ಆಗಲಿಲ್ಲ. ಅವರು ಸುಳ್ಳು ಹೇಳಿಕೆ ಯಾಕೆ ಕೊಟ್ಟರು ಗೊತ್ತಿಲ್ಲ. ಬೇರೆಯವರ ವೈಯಕ್ತಿಕ ಜೀವನದ ಬಗ್ಗೆ ಅವರಿಗೆ ಏನು ಕುತೂಹಲ ಗೊತ್ತಿಲ್ಲ. ನಾವು ಪೋಷಕರಿಗೆ ನಮ್ಮ ವಿಚ್ಛೇದನ ಬಗ್ಗೆ ಹೇಳಿದಾಗ ಅವರು ಒಪ್ಪಿದರು. ನಿಮಗೆ ಎಲ್ಲಾ ಗೊತ್ತು, ನೀವೇ ನಿರ್ಧಾರ ತಗೊಳಿ ಎಂದರು. ಆದರೆ ಯಾರ್ ಯಾರೋ ಏನೋನೊ ಮಾತನಾಡುತ್ತಿದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

More from Filmibeat

English summary
Chandan shetty and niveditha gowda called press meet;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X