ಇಂದು ನಡೆಯಲಿದೆ ಚಂದನ್ ಶೆಟ್ಟಿ-ನಿವೇದಿತಾ ನಿಶ್ಚಿತಾರ್ಥ
Recommended Video
ಗಾಯಕ ಚಂದನ್ ಶೆಟ್ಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ನಿಶ್ಚಿತಾರ್ಥ ಇಂದು (ಸೋಮವಾರ) ನಡೆಯಲಿದೆ. ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ.
ಯುವ ದಸರಾ ವೇದಿಕೆ ಮೇಲೆ ತಮ್ಮ ಹಾಡಿನ ನಂತರ ನಿವೇದಿತಾ ಗೌಡಗೆ ಚಂದನ್ ಪ್ರಪೋಸ್ ಮಾಡಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣ ಆಗಿತ್ತು. ಸರ್ಕಾರಿ ಕಾರ್ಯಕ್ರಮವನ್ನು ಖಾಸಗಿ ವಿಷಯಕ್ಕೆ ಬಳಸಿಕೊಂಡ ಬಿಗ್ ಬಾಸ್ ಜೋಡಿ, ಮುಂದೆ ದೊಡ್ಡ ವಿರೋಧ ಎದುರಿಸಬೇಕಾಗಿ ಬಂತು. ತಿಳಿಯದೆ ಈ ರೀತಿ ಮಾಡಿದೆ ಎಂದು ಚಂದನ್ ಶೆಟ್ಟಿ ಕ್ಷಮೆ ಹೇಳಿದ್ದು, ಒಂದೆರಡು ದಿನಗಳ ನಂತರ ಆ ವಿವಾದ ತಣ್ಣಗೆ ಆಯ್ತು.
ಅಂದಹಾಗೆ, ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 5ರ ಸ್ಪರ್ಧಿ ಆಗಿದ್ದರು. ಇಲ್ಲೇ ಮೊದಲ ಬಾರಿಗೆ ಈ ಇಬ್ಬರು ಭೇಟಿಯಾಗಿದ್ದರು. ಕಾರ್ಯಕ್ರಮದಲ್ಲಿ ಸ್ನೇಹಿತರಾಗಿದ್ದ ಈ ಜೋಡಿ, ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ಪ್ರೇಮಿಗಳಾದರು. ಇವರ ಪ್ರೀತಿಗೆ ಇಬ್ಬರ ಮನೆಯಲ್ಲಿಯೂ ಒಪ್ಪಿಗೆ ಸಿಕ್ಕಿದ್ದು, ಇದೀಗ ನಿಶ್ಚಿತಾರ್ಥಕ್ಕೆ ಸಜ್ಜಾಗಿದ್ದಾರೆ.

ಚಂದನ್ ಶೆಟ್ಟಿ ಸದ್ಯ ತಮ್ಮ ರಾಂಪ್ ಹಾಡುಗಳು ಹಾಗೂ ಸಿನಿಮಾ ಹಾಡುಗಳಲ್ಲಿ ಬ್ಯುಸಿ ಇದ್ದಾರೆ. ನಿವೇದಿತಾ ಗೌಡ ಇತ್ತೀಚಿಗೆ 'ಕಾಮಿಡಿ ಕಂಪನಿ' ಕಾರ್ಯಕ್ರಮದ ತೀರ್ಪುಗಾರರಾಗಿದ್ದರು.


Click it and Unblock the Notifications











