'ಲಕ ಲಕ ಲ್ಯಾಂಬರ್ಗಿನಿ'ಯಲ್ಲಿ ರಚಿತಾ ರಾಮ್: ಹೊಸ ವರ್ಷಕ್ಕೆ ಹೊಸ ಹಾಡು!
ಸ್ಯಾಂಡಲ್‌ವುಡ್ ಸಂಗೀತ ನಿರ್ದೇಶಕ, ಸಿಂಗರ್, ರ್ಯಾಪರ್ ಚಂದನ್ ಶೆಟ್ಟಿ ಸದ್ಯ ಹೊಸ ಆಲ್ಬಮ್ ಹಾಡೊಂದು ತಯಾರಾಗಿದೆ. ಹೊಸ ವರ್ಷ ಬಂತು ಅಂದ್ರೆ ಸಾಕು ಚಂದನ್ ಶೆಟ್ಟಿ ಅವರ ಹಾಡೊಂದು ರಿಲೀಸ್ ಆಗುತ್ತದೆ.
ಹೊಸ ವರ್ಷದ ಪಾರ್ಟಿ ರಂಗು ಹೆಚ್ಚಿಸಲು ಪ್ರತೀ ಬಾರಿ ವಿಭಿನ್ನ ಹಾಡಿನೊಂದಿಗೆ ಚಂದನ್ ಶೆಟ್ಟಿ ಎಂಟ್ರಿ ಕೊಡ್ತಾರೆ. ಅಂತೆಯೇ ಈ ಬಾರಿಯೂ ಚಂದನ್ ಶೆಟ್ಟಿ ಯಾವ ಹಾಡಿನ ಮೂಲಕ ಎಂಟ್ರಿ ಕೊಡ್ತಾರೆ ಅಂತ ಎಲ್ಲರೂ ಊಹಿಸುತ್ತಿದ್ದರು. ಇದೀಗ ಆ ಎಲ್ಲಾ ಕುತೂಹಲಗಳಿಗೆ ಬ್ರೇಕ್ ಬಿದ್ದಿದೆ.
ಚಂದನ್ ಶೆಟ್ಟಿ ಈ ಬಾರಿ ಕನ್ನಡದ ಲಕ್ಕಿ ಚಾರ್ಮ್ ನಟಿ ರಚಿತಾ ರಾಮ್ ಮೊರೆ ಹೋಗಿದ್ದಾರೆ. ಚಂದನ್ ಶೆಟ್ಟಿ ಪಾರ್ಟಿ ಹಾಡಿಗೆ ಈ ಬಾರಿ ನಟಿ ರಚಿತಾ ರಾಮ್ ಹೆಜ್ಜೆ ಹಾಕಿದ್ದಾರೆ. ಈ ವಿಚಾರವನ್ನು ಚಂದನ್ ಶೆಟ್ಟಿ ಅಧಿಕೃತವಾಗಿ ರಿವೀಲ್ ಮಾಡಿದ್ದಾರೆ.
ಹೊಸ ವರ್ಷಕ್ಕೆ ಚಂದನ್ ಶೆಟ್ಟಿ-ರಚಿತಾ ರಾಮ್ ಸರ್ಪ್ರೈಸ್!
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಚಂದನ್ ಶೆಟ್ಟಿ ಹೊಸ ವರ್ಷಕ್ಕಾಗಿ ಹೊಸ ಹಾಡೊಂದನ್ನು ಮಾಡಿದ್ದಾರೆ. ವಿಶೇಷ ಅಂದರೆ ಪ್ರತಿ ಬಾರಿ ಚಂದನ್ ಶೆಟ್ಟಿ ಹಾಡಿನಲ್ಲಿ ನಾಯಕಿಯರು ಗಮನ ಸೆಳೆಯುತ್ತಿದ್ದರು. ಅಂತೆಯೇ ಈ ಬಾರಿ ಚಂದನ್ ಶೆಟ್ಟಿ ಜೊತೆಗೆ ನಟಿ ರಚಿತಾಮ್ ಪಾರ್ಟಿ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ಹಾಡಿನ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಅಧಿಕೃತ ಮಾಹಿತಿ ಹೊರ ಹಾಕಿದ್ದಾರೆ ಚಂದನ್ ಶೆಟ್ಟಿ. ಪೋಸ್ಟರ್‌ನಲ್ಲಿ ಚಂದನ್ ಶೆಟ್ಟಿ ರಾಕ್‌ಸ್ಟಾರ್ ಅವತಾರ ತಾಳಿದರೆ, ನಟಿ ರಚಿತಾ ರಾಮ್ ಹಾಟ್ ಬ್ಯುಟಿಯ ಲುಕ್‌ನಲ್ಲಿ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ಗ್ಲ್ಯಾಮರಸ್ ಲುಕ್‌ನಲ್ಲಿ ರಚಿತಾರಾಮ್ ಡಾನ್ಸ್!
ಚಂದನ್ ಶೆಟ್ಟಿ ಮತ್ತು ರಚಿತಾ ರಾಮ್ ಕಾಂಬಿನೇಷನ್ ಒಂದು ರೀತಿ ವಿಭಿನ್ನ ಎನಿಸುತ್ತದೆ. ಯಾಕೆಂದರೆ ಚಂದನ್ ಶೆಟ್ಟಿ ಇಲ್ಲಿ ತನಕ ಸಾಕಷ್ಟು ಆಲ್ಬಂ ಹಾಡುಗಳಲ್ಲಿ ಕನ್ನಡದ ನಟಿಯರ ಜೊತೆಗೆ ಡಾನ್ಸ್ ಮಾಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ರಚಿತಾ ರಾಮ್ ಚಂದನ್ ಶೆಟ್ಟಿ ಆಲ್ಬಂ ಸಾಂಗ್‌ನಲ್ಲಿ ಡಾನ್ಸ್ ಮಾಡುತ್ತಲಿದ್ದಾರೆ.
ಆಲ್ಬಂ ಹಾಡೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಕನ್ನಡ ಸ್ಟಾರ್ ನಟಿ ರಚಿತಾ ಅಂದ್ರೆ ತುಂಬಾ ಅಲ್ಲಿ ವಿಶೇಷತೆ ಇದ್ದೆ ಇರುತ್ತೆ. ಅದೇ ರೀತಿ ವಿಶೇಷವಾದ ಹಾಡೊಂದನ್ನು ಚಂದನ್ ಶೆಟ್ಟಿ ರೆಡಿ ಮಾಡಿದ್ದಾರೆ. ಇದೀಗ ಆ ಹಾಡಿನ ತುಣುಕು ಎಲ್ಲೆಡೆ ವೈರಲ್ ಆಗುತ್ತಿದೆ.
ಈ ಹಾಡಿಗೆ ' ಅಲೆಲೆಲೇಲೆ ಇವಳು ಚೆಂದಾಗವ್ಳೆ' ಎನ್ನುವ ಸಾಹಿತ್ಯ ಇದೆ. ಈ ರೀತಿಯಾ ಟ್ರೆಂಡಿ ಲಿರಿಕ್ಸ್ ಇದೆ. ಆದರೆ ಪೂರ್ತಿ ಹಾಡು ರಿಲಿಸ್ ಆಗುವವರೆಗೂ ಕಾಯಬೇಕು ಅಷ್ಟೇ. ಜೊತೆಗೆ ರಚಿತಾ ರಾಮ್ ಸ್ಟೈಲಿಶ್ ಆಗಿ ಮೈ ಬಳುಕಿಸಿದ್ದರೆ. ರಚಿತಾರಾಮ್ ಲುಕ್ ಕೂಡ ಹೆಚ್ಚು ಗಮನ ಸೆಳೆದಿದೆ.

ಕುತೂಹಲ ಮೂಡಿಸಿದ ಚಂದನ್-ರಚಿತಾ ಕಾಂಬಿನೇಷನ್!
ರಚಿತಾ ರಾಮ್ ಮೊದಲ ಬಾರಿಗೆ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಲಿದ್ದಾರೆ ಎನ್ನುವುದು ಒಂದು ಕಡೆ ಆದರೆ. ಮತ್ತೊಂದು ಕಡೆ ಚಂದನ್ ಶೆಟ್ಟಿಯ ಹಾಡುಗಳ ಮೇಲು ನಿರೀಕ್ಷೆ ಇದೆ. ಹಾಗಾಗಿ ಈ ಬಾರಿಯ ಹೊಸ ವರ್ಷವನ್ನು ಇದೇ ಹಾಡಿನೊಂದಿಗೆ ಬರ ಮಾಡಿಕೊಳ್ಳ ಬಹುದಾಗಿದೆ.
ಚಂದನ್ ಶೆಟ್ಟಿ ನಿರ್ದೇಶನ ಮಾಡಿದ ಕೊನೆಯ ಆಲ್ಬಂ ಹಾಡು 'ಪಾರ್ಟಿ ಫ್ರಿಕ್' ಈ ಹಾಡಿನಲ್ಲಿ ನಟಿ ನಿಶ್ವಿಕಾ ನಾಯ್ಡು, ಚಂದನ್ ಶೆಟ್ಟಿ ಜೊತೆಗೆ ಚಂದನ್ ಪತ್ನಿ ನಿವೇದಿತಾ ಗೌಡ ಕೂಡ ಕಾಣಿಸಿ ಕೊಂಡಿದ್ದರು. ಇದೀಗ ರಚಿತಾ ರಾಮ್ ಜೊತೆಗೆ ನಟ ಚಂದನ್ ಶೆಟ್ಟಿ ಕೈಜೋಡಿಸಿದ್ದಾರೆ. ಈ ಹಾಡು ಪಾರ್ಟಿ ಪ್ರಿಯರಿಗೆ ಬಿಗ್‌ಗಿಫ್ಟ್ ಆಗುವ ಎಲ್ಲಾ ಸಾಧ್ಯತೆ ಇದೆ.

ನಂದಕಿಶೋರ್ ನಿರ್ದೇಶನದಲ್ಲಿ 'ಲಕ ಲಕ ಲ್ಯಾಂಬರ್ಗಿನಿ'!
ಈ ಹಾಡನ್ನು ನಿರ್ದೇಶಕ ನಂದ ಕಿಶೋರ್ ಡೈರೆಕ್ಟ್ ಮಾಡಿದ್ದಾರೆ. ಜೊತೆಗೆ ಮುರುಳಿ ಮಾಸ್ಟರ್ ಕ್ಯಾಮಾರಾ ಹಿಡಿದಿದ್ದಾರೆ. ಈ ಪೋಸ್ಟರ್‌ನಲ್ಲೇ ಹಾಡಿನ ಅದ್ಧೂರಿತನ ಕಾಣುತ್ತಿದೆ. ಇನ್ನು ಈ ಹಿಂದೆ ಈ ಹಾಡಿನ ಸಣ್ಣ ತುಣುಕು ಒಂದನ್ನು ನಟಿ ರಚಿತಾ ರಾಮ್ ಹಂಚಿಕೊಂಡಿದ್ದರು. ಅದು ಕೂಡ ಹಾಡಿನ ಮೇಲೆ ನಿರೀಕ್ಷೆ ಹುಟ್ಟಲು ಕಾರಣ ಆಗಿದೆ.


Click it and Unblock the Notifications











