ಎರಡನೇ ಮದ್ವೆಗೆ ರೆಡಿಯಾದರಾ ಚಂದನ್ ಶೆಟ್ಟಿ ? ಯಾರು ಈ ಗುಂಗರು ಕೂದಲಿನ ಸುಂದರಿ ?

By ಫಿಲ್ಮಿಬೀಟ್ ಡೆಸ್ಕ್

ನಿವೇದಿತಾ ಗೌಡ ಅವರಿಗೆ ರೀಲ್ಸ್ ಮಾಡುವುದು ದಿನ ನಿತ್ಯದ ಅಭ್ಯಾಸ. ಆದರೆ, ಚಂದನ್ ಶೆಟ್ಟಿಗೆ ಅದು ಹವ್ಯಾಸ. ಇದಕ್ಕೆ ಸಾಕ್ಷಿ ಎಂಬಂತೆ ನಿವೇದಿತಾ ಗೌಡ ಜೊತೆ ಇದ್ದಾಗ ಅಪರೂಪಕ್ಕೆ ಆಗೊಮ್ಮೆ ಈಗೊಮ್ಮೆ ರೀಲ್ಸ್ ಮಾಡುತ್ತಿದ್ದರು ಚಂದನ್ ಶೆಟ್ಟಿ.

ಇನ್ನುಳಿದಂತೆ ಬಾಕಿ ಸಮಯದಲ್ಲಿ ಸಾಮಾಜಿಕ ಜಾಲತಾಣದಿಂದ ಅಂತರ ಕಾಪಾಡಿಕೊಂಡು ಕೆಲಸದ ಕಡೆ ಗಮನ ಕೊಡ್ತಿದ್ದ ಚಂದನ್ ಶೆಟ್ಟಿ ಅವರ ಬದುಕು ವಿಚ್ಛೇದನದ ನಂತರ ಈಗ ಬದಲಾಗಿದೆ. ಇದಕ್ಕೆ ಪುರಾವೆ ಎನ್ನುವಂತೆ ಡಿವೋರ್ಸ್ ನಂತರ ಕೆಲಸದಲ್ಲಿ ಹೆಚ್ಚೆಚ್ಚು ತಲ್ಲೀನವಾಗಿರುವ ಚಂದನ್ ಶೆಟ್ಟಿ ಸದ್ಯ ಹೊಸ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ. ಆ ಹಾಡಿನ ಹೆಸರು 'ಕಾಟನ್ ಕ್ಯಾಂಡಿ'. ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ಬಿಡುಗಡೆಯಾದ ಈ ಹಾಡಿನಲ್ಲಿ ದುಬೈನ ಮನಮೋಹಕ ದೃಶ್ಯಗಳಿವೆ. ಅದ್ಧೂರಿತನ ಹಾಡಿನಲ್ಲಿ ಹಾಸು ಹೊಕ್ಕಿದೆ. ಸಾಹಿತ್ಯ ಮತ್ತು ಸಂಗೀತ ಕೂಡ ಗಮನ ಸೆಳೆಯುವಂತಿದೆ. ಕುಂತಲ್ಲೇ ಕುಣಿಸುವಂತೆ ಇದೆ.

Chandan Shetty and Sushmitha Gopinath s photo goes viral leaving fans asking Are you in love again

ಆದರೆ ಇದ್ಯಾವುದರ ಕುರಿತು ಚರ್ಚೆಯನ್ನು ಮಾಡದ ಅನೇಕರು ಚಂದನ್ ಶೆಟ್ಟಿ ಅವರ ರಿಲೇಷನ್‌ಶಿಪ್ ಸ್ಟೇಟಸ್ ಬಗ್ಗೆ ಚರ್ಚೆಯನ್ನು ಮಾಡುತ್ತಿದ್ದಾರೆ. ನಿವೇದಿತಾ ಗೌಡ ಅವರನ್ನು ಮರೆತು ಚಂದನ್ ಶೆಟ್ಟಿ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹುಯಿಲೆಬ್ಬಿಸುತ್ತಿದ್ದಾರೆ.

ಹೌದು, ಅಸಲಿಗೆ ನಿವೇದಿತಾ ಗೌಡ ಅವರಿಂದ ದೂರವಾದ ನಂತರ ಚಂದನ್ ಶೆಟ್ಟಿ ಕ್ಯಾಂಡಿ ಕ್ರಶ್ ಹಾಡಿನಲ್ಲಿ ತಮ್ಮ ಜೊತೆ ಕುಣಿದ ಸುಶ್ಮಿತಾ ಗೋಪಿನಾಥ್ ಅವರ ಜೊತೆ ಫೋಟೊ ತೆಗೆಸಿಕೊಂಡು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಭಾರತದೆಲ್ಲೆಡೆ ಹಾಡು ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿರುವುದಕ್ಕೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

Chandan Shetty and Sushmitha Gopinath s photo goes viral leaving fans asking Are you in love again

ಆದರೆ ಇದೇ ಸಮಯದಲ್ಲಿ ಅನೇಕರಿಗೆ ಇವರಿಬ್ಬರ ನಡುವೆ ಇರುವ ಆತ್ಮೀಯತೆ ಅನುಮಾನವನ್ನು ಮೂಡಿಸಿದೆ. ಹೀಗಾಗಿಯೇ ಅನೇಕರು ಚಂದನ್ ಶೆಟ್ಟಿ ಹಂಚಿಕೊಂಡ ಫೋಟೊ ಕೆಳಗೆ ತಮ್ಮ ಮನದ ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅತ್ತಿಗೆನಾ ಅಣ್ಣ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಹೊಸ ಅತ್ತಿಗೆ ಲಕ್ಷಣವಾಗಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಚಂದನ್ ಶೆಟ್ಟಿ ಅವರಿಗೆ ಶುಭಾಶಯಗಳನ್ನು ಕೂಡ ಹೇಳುತ್ತಿದ್ದಾರೆ. ಇನ್ನು ಕೆಲವರು ಜೋಡಿ ಚೆನ್ನಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲು ಎಡವಿದಂತೆ ಮತ್ತೆ ಎಡವ ಬೇಡಿ ಬ್ರದರ್ ನಿಧಾನಕ್ಕೆ ನೋಡಿ ಅರ್ಥ ಮಾಡ್ಕೊಂಡ್ ಸಂಗಾತಿ ನಾ ಆಯ್ಕೆ ಮಾಡಿಕೊಳ್ಳಿ ಎಂಬ ಸಲಹೆಯನ್ನೆಲ್ಲ ಕೂಡ ನೀಡಿದ್ದಾರೆ ಚಂದನ್ ಶೆಟ್ಟಿ ಅವರ ಅಭಿಮಾನಿಗಳು.

ನಿಜಕ್ಕೂ ಚಂದನ್ ಶೆಟ್ಟಿ ಮತ್ತು ಸುಶ್ಮಿತಾ ಗೋಪಿನಾಥ್ ಪ್ರೀತಿಸುತ್ತಿದ್ದಾರಾ ? ನಿಜಾಂಶ ಇವರಿಬ್ಬರಿಗೆ ಗೊತ್ತಾದರೂ ಸದ್ಯಕ್ಕೆ ಜೋಡಿ ಚೆನ್ನಾಗಿದೆ ಮದ್ವೆಯಾಗಿ ಎಂದೇ ಹಲವರು ಹೇಳುತ್ತಿದ್ದಾರೆ. ಅಂದ್ಹಾಗೇ ಇವಳೇನಾ ಲಂಡನ್ ಕ್ವೀನು.. ಮಂಗಳೂರು ಬಂಗಡ ಮೀನು.. ತಾನಾಗೇ ಬುಟ್ಟಿಗೆ ಬಿತ್ತು ಎಂಬ ಸಾಲುಗಳನ್ನೆಲ್ಲ ಹೊಂದಿರುವ ಚಂದನ್ ಶೆಟ್ಟಿ ಮತ್ತು ಸುಶ್ಮಿತಾ ಗೋಪಿನಾಥ್ ಹೆಜ್ಜೆ ಹಾಕಿರುವ ಕಾಟನ್ ಕ್ಯಾಂಡಿ ಹಾಡಿಗೆ ಅನೇಕರು ಮನ ಸೋತಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಯೂಟ್ಯೂಬ್‌ನಲ್ಲಿ ಈ ಹಾಡು 24 ಗಂಟೆಯಲ್ಲಿ 1,736,530 ವೀವ್ಸ್ ಪಡೆದಿದೆ. ಇನ್ನು ಹಾಡಿನ ಕುರಿತು ಈ 24 ಗಂಟೆಯಲ್ಲಿ 2500ಕ್ಕೂ ಅಧಿಕ ಜನ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಬ್ರೇಕಪ್ ಸಾಂಗ್‌ವೊಂದು ಬೇಕೆನ್ನುವ ಬೇಡಿಕೆಯನ್ನಿಟ್ಟಿದ್ದಾರೆ. ಕೆಲ ಸಾಲುಗಳನ್ನು ನಿವೇದಿತಾ ಗೌಡ ಅವರಿಗಾಗಿಯೇ ಚಂದನ್ ಶೆಟ್ಟಿ ಬರೆದಂತೆ ಇದೆ ಎನ್ನುವ ಮಾತುಗಳನ್ನಾಡುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X