ತಪ್ಪು ಮಾಡೋದು ಸಹಜ, ಆದರೆ ಕ್ಷಮೆ ಕೇಳಿದ್ಮೇಲೂ ಜಿದ್ದು ಸಾಧಿಸಿದರೆ ನೋವಾಗುತ್ತೆ ; ಚಂದನ್ ಶೆಟ್ಟಿ ಭಾವುಕ ನುಡಿಯ ಮರ್ಮವೇನು ?

ಒಮ್ಮೊಮ್ಮೆ ಎಲ್ಲರ ಕಣ್ಣಿಗೆ ಕಾಮಿಡಿ ಪೀಸುಗಳಂತೆ ಕಾಣುತ್ತಿದ್ದವರು. ನೋಡ ನೋಡುತ್ತಿದ್ದಂತೇ ಹೇಳಿಮಾಡಿಸಿದಂತಾ ಬದುಕನ್ನು ರೂಪಿಸಿಕೊಂಡು, ಲೇವಡಿ ಮಾಡೋರ ಮುಂದೆ ಗೆದ್ದು ಬೀಗುತ್ತಾರೆ. ಇನ್ನೂ ಕೆಲವೊಮ್ಮೆ ತುಂಬಾನೇ ಇಷ್ಟ ಪಟ್ಟು ಮದುವೆಯಾದವರು, ಒಬ್ಬರನ್ನು ಬಿಟ್ಟು ಒಬ್ಬರು ಉಸಿರಾಡಲೂ ಸಾಧ್ಯವಿಲ್ಲ ಅಂದುಕೊಂಡವರು, ವಿರೋಧಗಳನ್ನು ಧಿಕ್ಕರಿಸಿ ಮದುವೆಯಾದವರು, ಜೊತೆಗೂಡಿದ ಕೆಲವೇ ದಿನಗಳಲ್ಲಿ ದೂರವಾಗುತ್ತಾರೆ. ಇದಕ್ಕೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅತ್ಯುತ್ತಮ ಉದಾಹರಣೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಮನ:ಪೂರ್ವಕವಾಗಿ ಮದುವೆಯಾಗಿ ಮನ:ಪೂರ್ವಕವಾಗಿಯೇ ದೂರವಾದ ಇಬ್ಬರು ಈಗ ತಮ್ಮ ತಮ್ಮ ಬದುಕಿನ ಸಂತೆಯಲ್ಲಿ ನೆಮ್ಮದಿ ಹುಡುಕುತ್ತಿದ್ದಾರೆ. ವಿಚ್ಚೇದನದ ನಂತರ ನಿವೇದಿತಾ ಗೌಡ ರೀಲ್ಸು ಪಾಲ್ಸು ಎಂದು ಮತ್ತೆ ಬ್ಯುಸಿಯಾದರೆ, ಚಂದನ್ ಶೆಟ್ಟಿ ಸಂಗೀತ-ಸಾಹಿತ್ಯ ಎಂದು ತಲೆ ಕೆಡಿಸಿಕೊಂಡಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಅಲ್ಲ ಬದಲಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕು, ಬೆಳೆಯಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ.

Chandan Shetty Breaks Silence on Nivedita Gowda and Life s Hardest Lessons

ಇದರ ನಡುವೆ ಸಮಯ ಬಿಡುವು ಮಾಡಿಕೊಂಡು ಆಗಾಗ ಇಬ್ಬರು ಹಲವರಿಗೆ ಸಂದರ್ಶನ ನೀಡುತ್ತಲೇ ಬರುತ್ತಿದ್ದಾರೆ. ಹೀಗೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಚಂದನ್ ಶೆಟ್ಟಿ ತಪ್ಪು, ಕ್ಷಮೆಯ ಕುರಿತು ಮಾತನಾಡಿದ್ದಾರೆ. ನಿವೇದಿತಾ ಗೌಡ ಜೊತೆ ಈಗಲೂ ಸಂಪರ್ಕದಲ್ಲಿದ್ದಾರಾ ..? ಎನ್ನುವ ಪ್ರಶ್ನೆಗೆ ಕೂಡ ಉತ್ತರ ನೀಡಿದ್ದಾರೆ.

ಈ ಕುರಿತು ''ರ್‍ಯಾಪಿಡ್ ರಶ್ಮಿ'' ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಚಂದನ್ ಶೆಟ್ಟಿ, ''ನೀವೇನೋ ಒಂದು ತಪ್ಪು ಮಾಡಿರುತ್ತೀರಾ, ಆ ಪಾಪಪ್ರಜ್ಞೆ ನಿಮ್ಮನ್ನು ಕಾಡುತ್ತಿರುತ್ತೆ. ಎದುರುಗಡೆ ವ್ಯಕ್ತಿಗೆ ನೀವು ನೋವುಂಟು ಮಾಡಿದ ಹಿನ್ನೆಲೆ ಅವರಲ್ಲಿ ನೀವು ಕ್ಷಮೆ ಕೇಳಬೇಕು, ಇನ್ನು ಕ್ಷಮೆ ಕೇಳುವುದು ಮುಖ್ಯ ಅಲ್ಲ, ಎದುರುಗಡೆ ಇರುವ ವ್ಯಕ್ತಿ ನಿಮ್ಮನ್ನು ಕ್ಷಮಿಸಿದೀನಿ ಎನ್ನಬೇಕು, ಆಗ ನಿಮ್ಮ ಮನಸ್ಸು ಹಗುರವಾಗುತ್ತೆ'' ಎಂದು ಹೇಳಿದ್ದಾರೆ.

ಮುಂದುವರೆದು ಹಲವು ಬಾರಿ ಈ ಕ್ಷಮೆ ಕೇಳುವಲ್ಲಿ ಅಹಂಕಾರ ನಮ್ಮ ನಡುವೆ ಬರುತ್ತೆ, ನ್ಯಾನ್ಯಾಕೇ ಕ್ಷಮೆ ಕೇಳಬೇಕು ಎಂಬ ಅಹಂಕಾರ ಅದು, ಬಹುತೇಕರ ಸಂಬಂಧ ಅಂತ್ಯವಾಗುವುದು ಹೀಗೆಯೇ, ಇನ್ನು ತಪ್ಪು ಮಾಡಿದವರು ಸಾರಿ ಕೇಳಿದಾಗ ಕ್ಷಮಿಸ್ಬೇಕು ಅನ್ನೋದು ಯೂನಿವರ್ಸಲ್ ನಿಯಮ, ಆದರೆ ನಮ್ಮ ಎದುರುಗಡೆ ಇರುವ ವ್ಯಕ್ತಿ ನಮ್ಮ ತಪ್ಪನ್ನು ಕ್ಷಮಿಸದೇ, ಜಿದ್ದಿಗೆ ಬಿದ್ದರೆ, ರಿಜೆಕ್ಟ್ ಮಾಡಿದರೆ, ತುಂಬಾ ನೋವಾಗುತ್ತೆ ಎಂದು ಹೇಳಿರುವ ಚಂದನ್ ಶೆಟ್ಟಿ ಹೀಗಾದಾಗ ನಾವು ದೇವರಲ್ಲಿ ಕ್ಷಮೆ ಕೇಳುತ್ತೇವೆ, ಆ ಸಮಯದಲ್ಲಿ ಎಷ್ಟು ಆಳವಾಗಿ ಕ್ಷಮೆ ಕೇಳ್ಬೇಕು ಅಂದ್ರೆ ನೀವು ಅಳಬೇಕು ಎಂದು ಭಾವುಕರಾಗಿದ್ದಾರೆ.

ಸದ್ಯ ಚಂದನ್ ಅವರ ಈ ಮಾತುಕೇಳಿ ಹಲವರಿಗೆ ನಿವೇದಿತಾ ಗೌಡ ಮುಂದೆ ಚಂದನ್ ಕ್ಷಮೆ ಕೇಳಿದ್ರೂ ನಿವೇದಿತಾ ಕ್ಷಮಿಸಲಿಲ್ಲವಾ ..? ಹೇಗೆ..? ಎನ್ನುವ ಪ್ರಶ್ನೆ ಕಾಡುತ್ತಿದೆ. ಮತ್ತೂ ಕೆಲವರಿಗೆ ಅಷ್ಟಕ್ಕೂ ಚಂದನ್ ಮಾಡಿದ ತಪ್ಪಾದರೂ ಏನಿರಬಹುದು..? ಚಂದನ್ ಈ ಸಂದರ್ಶನದಲ್ಲಿ ತಪ್ಪು ಮತ್ತು ಕ್ಷಮೆ ಕುರಿತು ಮಾತನಾಡಲು ಕಾರಣವೇನು..? ಎನ್ನುವ ಪ್ರಶ್ನೆ ಕಾಡುತ್ತಿದೆ.

chandan-shetty-breaks-silence-on-nivedita-gowda-and-life-s-hardest-lessons

ಇನ್ನು ಇದೇ ಸಂದರ್ಶನದಲ್ಲಿ ಡಿವೋರ್ಸ್ ನಂತರ ನಮ್ಮ ನಡುವೆ ಯಾವ ಸಂಬಂಧ ಇಲ್ಲ ಎನ್ನುವುದನ್ನು ಕೂಡ ಸ್ಪಷ್ಟ ಪಡಿಸಿರುವ ಚಂದನ್ ಶೆಟ್ಟಿ, ಸಂಬಂಧ ಮುರಿದು ಬೀಳಬೇಕು ಅಂತ ಯಾರು ಬಯಸುವುದಿಲ್ಲ, ಕೆಲವೊಮ್ಮೆ ಪರಿಸ್ಥಿತಿ ಹಾಗಾಗುತ್ತೆ ಎಂದು ಹೇಳಿದ್ದಾರೆ. ಬೇಸರ ಇದೆ ಆದರೆ ಜೀವನ ಬಂದಂತೆ ಸ್ವೀಕರಿಸಬೇಕು, ಮುನ್ನಡೆಯಬೇಕು ಎಂದಿದ್ದಾರೆ.

ಇಷ್ಟೇ ಅಲ್ಲದೇ ಪರಸ್ಪರ ನಾವು ಕೆಸರೆರಚಿಕೊಂಡಿಲ್ಲ ಎಂದು ಕೂಡ ಹೇಳಿರುವ ಚಂದನ್ ಶೆಟ್ಟಿ, ಇಷ್ಟು ದಿನ ಬದುಕಿನ ಪ್ರಯಾಣದಲ್ಲಿ ಜೊತೆ ನಡೆದಿದ್ದಕ್ಕೆ ಥ್ಯಾಂಕ್ಸ್, ಚೆನ್ನಾಗಿರು ಅಂತ ಹೇಳಿ ದೂರ ಆದೆವು ಎಂದಿದ್ಧಾರೆ.

English summary
Chandan Shetty speaks out on his relationship with Nivedita Gowda, sharing hard-hitting lessons on forgiving mistakes based on his own life experiences.
Read more about: chandan shetty niveditha gowda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X