ಮದ್ವೆಗೆ 60 ಲಕ್ಷ ಖರ್ಚು ಮಾಡಿ ತಪ್ಪು ಮಾಡಿದೆ - ಚಂದನ್ ಶೆಟ್ಟಿ ...!
ಒಮ್ಮೊಮ್ಮೆ ಎಲ್ಲರ ಕಣ್ಣಿಗೆ ಕಾಮಿಡಿ ಪೀಸುಗಳಂತೆ ಕಾಣುತ್ತಿದ್ದವರು. ನೋಡ ನೋಡುತ್ತಿದ್ದಂತೇ ಹೇಳಿಮಾಡಿಸಿದಂತಾ ಬದುಕನ್ನು ರೂಪಿಸಿಕೊಂಡು, ಲೇವಡಿ ಮಾಡೋರ ಮುಂದೆ ಗೆದ್ದು ಬೀಗುತ್ತಾರೆ. ಇನ್ನೂ ಕೆಲವೊಮ್ಮೆ ತುಂಬಾನೇ ಇಷ್ಟ ಪಟ್ಟು ಮದುವೆಯಾದವರು, ಒಬ್ಬರನ್ನು ಬಿಟ್ಟು ಒಬ್ಬರು ಉಸಿರಾಡಲೂ ಸಾಧ್ಯವಿಲ್ಲ ಅಂದುಕೊಂಡವರು, ವಿರೋಧಗಳನ್ನು ಧಿಕ್ಕರಿಸಿ ಮದುವೆಯಾದವರು, ಜೊತೆಗೂಡಿದ ಕೆಲವೇ ದಿನಗಳಲ್ಲಿ ದೂರವಾಗುತ್ತಾರೆ. ಇದಕ್ಕೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅತ್ಯುತ್ತಮ ಉದಾಹರಣೆ.
ಮನ:ಪೂರ್ವಕವಾಗಿ ಮದುವೆಯಾಗಿ ಮನ:ಪೂರ್ವಕವಾಗಿಯೇ ದೂರವಾದ ಇಬ್ಬರು ಈಗ ತಮ್ಮ ತಮ್ಮ ಬದುಕಿನ ಸಂತೆಯಲ್ಲಿ ನೆಮ್ಮದಿ ಹುಡುಕುತ್ತಿದ್ದಾರೆ. ವಿಚ್ಚೇದನದ ನಂತರ ನಿವೇದಿತಾ ಗೌಡ ರೀಲ್ಸು ಪಾಲ್ಸು ಎಂದು ಮತ್ತೆ ಬ್ಯುಸಿಯಾದರೆ, ಚಂದನ್ ಶೆಟ್ಟಿ ಸಂಗೀತ-ಸಾಹಿತ್ಯ ಎಂದು ತಲೆ ಕೆಡಿಸಿಕೊಂಡಿದ್ದಾರೆ. ಇದರ ನಡುವೆ ಸಮಯ ಬಿಡುವು ಮಾಡಿಕೊಂಡು ತಮ್ಮ ವ್ಯೆಯಕ್ತಿಕ ಬದುಕಿನ ಏರಿಳಿತದ ಬಗ್ಗೆ ಮಾತನಾಡಿದ್ದಾರೆ. ಪಶ್ಚಾತಾಪದ ಮಾತುಗಳನ್ನೂ ಆಡಿದ್ಧಾರೆ

ಹೌದು, ರ್‍ಯಾಪಿಡ್ ರಶ್ಮಿ ಎದುರು ಕುಳಿತು ತಮ್ಮ ಬದುಕಿನ ಪುಟಗಳನ್ನು ಮೆಲುಕು ಹಾಕಿರುವ ಚಂದನ್ ಶೆಟ್ಟಿ, ಒಂದು ಹಾಡು ಕೇವಲ ಒಬ್ಬನಿಂದ ಮಾತ್ರ ಗೆಲ್ಲಲ್ಲ. ಅದರ ಹಿಂದೆ ಹಲವರ ಶ್ರಮ ಇರುತ್ತೆ ಎಂದಿದ್ದಾರೆ. ಅಹಂಕಾರ ನನಗೆ ಇಲ್ಲ ಎಂದು ಹೇಳಿದ್ದಾರೆ.
ಇನ್ನೂ.. ಚಂದನ್ ಶೆಟ್ಟಿ ಬದುಕು ಬದಲಾಗಿದ್ದು 2015ರ ಆಚೀಚೆ. ಆಗ ಸಂಗೀತ ಪ್ರಿಯರ ಬಾಯಲ್ಲಿ ಇವರ ಹಾಡು ನಲಿಯುತ್ತಿತ್ತು. ಇವರ ಹೆಸರಿಗೆ ಚಿನ್ನದ ಬೆಲೆ ಬಂದಿತ್ತು. ಸಹಜವಾಗಿ ಹಣದ ಮಳೆ ಕೂಡ ಆಗ್ತಿತ್ತು. ಜೀವನ ಶೈಲಿ ಬದಲಾದಂತೆ ಖರ್ಚು-ವೆಚ್ಚ ಕೂಡ ಹೆಚ್ಚಾಗಿತ್ತು. ಇದಕ್ಕೆ ಒಂದು ಉದಾಹರಣೆ ಎಂಬಂತೆ ಗೆಜೆಟ್‌ಗಳನ್ನು ವಿಪರೀತ ಖರೀದಿ ಮಾಡಲು ಚಂದನ್ ಶೆಟ್ಟಿ ಶುರು ಮಾಡಿದ್ದರು. ನಿವೇದಿತಾ ಗೌಡ ಜೊತೆ ಮದ್ವೆ ಕೂಡ ಆದರು. ಇವರ ಮದ್ವೆಯಲ್ಲಿ ಅದ್ಧೂರಿತನ ಎಷ್ಟರ ಮಟ್ಟಿಗೆ ಹಾಸು ಹೊಕ್ಕಿತ್ತು ಅಂದರೆ ಮದುವೆಗೆ ಐವತ್ತರಿಂದ ಅರವತ್ತು ಲಕ್ಷ ರೂಪಾಯಿ ಖರ್ಚು ಆಗಿತ್ತು. ಖುದ್ದು ಚಂದನ್ ಶೆಟ್ಟಿ ಸಂದರ್ಶನದಲ್ಲಿ ಮದ್ವೆಯ ಖರ್ಚು-ವೆಚ್ಚದ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.
ಆದರೆ, ಬದುಕು ಅಂದುಕೊಂಡಂತೇ ನಡೆದುಬಿಡೋದಿಲ್ಲ. ಹೀಗೇ ನಡೆಯುತ್ತದೆ ಅಂತಾ ಯಾರೂ ಅಂದಾಜಿಸಲೂ ಆಗುವುದಿಲ್ಲ. ಇದಕ್ಕೆ ಮತ್ತೊಂದು ಪುರಾವೆ ಎಂಬಂತೆ ಎಲ್ಲವೂ ಸರಿದಾರಿಯಲ್ಲಿಯೇ ಸಾಗುತ್ತಿದೆ ಎಂದು ಚಂದನ್ ಶೆಟ್ಟಿ ಅಂದುಕೊಂಡಾಗ್ಲೇ ಕೊರೊನಾ ಎಂಬ ಮಹಾಮಾರಿ ವಕ್ಕರಿಸಿತು. ಮದುವೆಯಾದ ಒಂದು ವಾರಕ್ಕೆ ಲಾಕ್ ಡೌನ್ ಆಯಿತು. ಅಚಾನಕ್ಕಾಗಿ ಬಂದೇರಗಿದ ಈ ಕೊರೊನಾದಿಂದ ಜನಸಾಮಾನ್ಯರಂತೆ ಚಂದನ್ ಶೆಟ್ಟಿ ಕೂಡ ಹೈರಾಣಾಗಿದ್ದರು. ಒದ್ದಾಡಿದ್ದರು. ಹಣದ ಮಹತ್ವ ಚಂದನ್ ಶೆಟ್ಟಿಗೆ ಗೊತ್ತಾಗಿದ್ದು ಇಲ್ಲಿಯೇ.
ಇದಕ್ಕೆ ಪೂರಕವಾಗಿ ಮದುವೆಯಾಗುತ್ತಲೇ ಕೋವಿಡ್ ಬಂತು. ಹಣದ ಕೊರತೆ ಉಂಟಾಗಿ ಇದೆಲ್ಲಾ ನನಗೆ ಬೇಕಿತ್ತಾ ಎಂದು ಎನ್ನಿಸಿತು. ತುಂಬಾ ಕಷ್ಟಪಟ್ಟುಬಿಟ್ಟೆ. ಕೊನೆಗೆ ನಿಧಾನವಾಗಿ ಮೇಲಕ್ಕೆ ಬಂದೆ ಎಂದು ಅಂದಿನ ದಿನಗಳನ್ನು ರ್‍ಯಾಪಿಡ್ ರಶ್ಮಿ ಅವರಿಗೆ ನೀಡಿದ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ ಚಂದನ್ ಶೆಟ್ಟಿ .ಇನ್ನೂ ಯಾವ ಹಾಡುಗಳು ಫ್ಲಾಪ್ ಆಗುತ್ತವೆ, ಯಾವುದು ಹಿಟ್ ಆಗುತ್ತದೆ ತಿಳಿಯುವುದಿಲ್ಲ, ಯಾವಾಗ ಏನು ಆಗುತ್ತದೆ ಎನ್ನುವುದು ಗೊತ್ತಾಗುವುದಿಲ್ಲ ಎಂದಿದ್ದಾರೆ ಚಂದನ್ ಶೆಟ್ಟಿ.


Click it and Unblock the Notifications











