''ಹುಡುಗಿಯರ ಪ್ರೈವೇಟ್‌ ಪಾರ್ಟ್‌ ಬಗ್ಗೆ ದಪ್ಪ ಆಗಿದೆ ಎಂದೆಲ್ಲ ಕಾಮೆಂಟ್ ಮಾಡ್ತಾರೆ''- ಚಂದನ್ ಶೆಟ್ಟಿ..!

ಸಂಸಾರದಲ್ಲಿ ಸಮರಸವಿದ್ದರೆ ಮಾತ್ರ ಹೊಂದಾಣಿಕೆ ಗಟ್ಟಿಯಾಗಲು ಸಾಧ್ಯ. ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಸಹಜ. ಆದರೆ ಅದನ್ನು ಮೂರನೇ ವ್ಯಕ್ತಿಯ ನಡುವೆ ತೋರಿಸಿಕೊಂಡಾಗ ಅಥವಾ ಇದರಲ್ಲಿ ಮೂರನೇ ವ್ಯಕ್ತಿ ಮೂಗು ತೂರಿಸಿದಾಗ ಚಿಕ್ಕ ಸಮಸ್ಯೆ ಕೂಡ ದೊಡ್ಡದಾಗುತ್ತೆ. ವಿಚ್ಛೇದನದ ಹಂತದವರೆಗೆ ತಲುಪುತ್ತೆ.

ಆದರೆ ಬದಲಾದ ಕಾಲದಲ್ಲಿ ಈಗ ಸಂಸಾರಕ್ಕೆ ಹುಳಿ ಹಿಂಡಲು ಯಾರೋ ಮೂರನೇ ವ್ಯಕ್ತಿ ಬೇಕು ಅಂತೇನು ಇಲ್ಲ. ಯಾಕೆಂದರೆ ಆ ಕೆಲಸವನ್ನ ಸಾಮಾಜಿಕ ಜಾಲತಾಣ ನಿಯತ್ತಾಗಿ ಮಾಡಿಕೊಂಡು ಬರುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಂಸಾರವನ್ನ ಹಾಳು ಮಾಡುವುದಲ್ಲದೇ, ಮಹಿಳೆಯರ ನೆಮ್ಮದಿ ಮತ್ತು ಸೆಲೆಬ್ರಿಟಿಗಳ ವ್ಯಯಕ್ತಿಕ ಜೀವನವನ್ನೂ ಇದೇ ಸಾಮಾಜಿಕ ಜಾಲತಾಣದ ಮೂಲಕ ಒಂದು ಬಣ ಹಾಳು ಮಾಡುತ್ತಿದೆ. ಹೀಗಾಗಿಯೇ ಸಾಮಾಜಿಕ ಜಾಲತಾಣವನ್ನ ಕ್ರೀಮಿ ಕೀಟಾಣುಗಳಿಗೆ ಹೋಲಿಸಿದ್ದಾರೆ ಚಂದನ್ ಶೆಟ್ಟಿ

chandan-shetty-ex-husband-of-niveditha-spoke-about-negative-and-sexual-comments-on-social-media

ಹೌದು, ನಿವೇದಿತಾ ಅವರಿಂದ ದೂರವಾದ ಚಂದನ್ ಶೆಟ್ಟಿ, ಸ್ಪೀಡ್ ಪ್ಲಸ್‌ ಯೂಟ್ಯೂಬ್‌ ಚಾನೆಲ್‌ಗೆ ಸಂದರ್ಶನವನ್ನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಸಾಮಾಜಿಕ ಜಾಲತಾಣವನ್ನ ಹೇಗೆಲ್ಲ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎನ್ನುವುದರ ಬಗ್ಗೆ ಮಾತನಾಡಿರುವ ಚಂದನ್ ಶೆಟ್ಟಿ, ವಾಕ್‌ ಸ್ವಾತಂತ್ರ್ಯಕ್ಕೆ ಅರ್ಥ ಏನಾದ್ರೂ ಇದೆಯಾ? ಎಂಬ ಪ್ರಶ್ನೆಯನ್ನೂ ಕೂಡ ಮಾಡಿದ್ದಾರೆ.

ಅಸಲಿಗೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ದೂರವಾಗಲು, ನಿವೇದಿತಾ ಅವರ ರೀಲ್ಸ್‌ಗಳಿಗೆ ಬರುವ ಕೆಟ್ಟಾ ಕೊಳಕು ಕಮೆಂಟ್‌ಗಳೇ ಕಾರಣ ಎಂಬ ಅಭಿಪ್ರಾಯ ಅನೇಕರಲ್ಲಿತ್ತು. ಆದರೆ ವಾಸ್ತವದಲ್ಲಿ ಇದು ಸುಳ್ಳು. ಈ ವಿಚಾರದ ಬಗ್ಗೆ ಖುದ್ದು ಸ್ಪಷ್ಟೀಕರಣ ನೀಡಿರುವ ಚಂದನ್ ಶೆಟ್ಟಿ ಸೋಶಿಯಲ್‌ ಮೀಡಿಯಾದಲ್ಲಿ ನಿವೇದಿತಾಗೆ ಬರ್ತಿದ್ದ ಕಾಮೆಂಟ್‌ ನೋಡಿ ನಾನು ಅವಳಿಂದ ದೂರ ಆದೆ ಅನ್ನೋದು ಸುಳ್ಳು ಎಂದಿದ್ದಾರೆ. ನಾನು ಆ ಬಗ್ಗೆ ಯಾವತ್ತು ತಲೆ ಕೆಡಿಸಿಕೊಂಡಿರಲಿಲ್ಲ ಅಂದಿದ್ದಾರೆ. ಆದರೆ ಇದೇ ವೇಳೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆಯನ್ನೂ ಚಂದನ್ ಶೆಟ್ಟಿ ಮಾಡಿದ್ದಾರೆ.

chandan-shetty-ex-husband-of-niveditha-spoke-about-negative-and-sexual-comments-on-social-media

ನೆಗೆಟಿವ್ ಆಗಿ ಮಾತನಾಡುವುದನ್ನ ನಾನು ಒಪ್ಪುತ್ತೇನೆ ಆದರೆ ಅಶ್ಲೀಲವಾಗಿ, ಕೆಟ್ಟದಾಗಿ ಕಾಮೆಂಟ್‌ನ ಹಾಕುವುದನ್ನು ನಾನು ಒಪ್ಪುವುದಿಲ್ಲ ಎಂದಿದ್ದಾರೆ. ಇನ್ನೂ ಸಮಾಜ ಎಷ್ಟರ ಮಟ್ಟಿಗೆ ದಾರಿ ತಪ್ಪುತ್ತಿದೆ ಅಂದರೆ ಯಾವುದೇ ಅಳುಕು ಇಲ್ಲದೇ ಹುಡುಗೀರ ಪ್ರೈವೇಟ್‌ ಪಾರ್ಟ್‌ಗಳನ್ನೇ ಗುರಿ ಮಾಡಿಕೊಂಡು ಅದರ ಬಗ್ಗೆ ಓಪನ್‌ ಆಗಿ ಕಾಮೆಂಟ್‌ ಮಾಡ್ತಾರೆ ಎಂಬ ಬೇಸರವನ್ನೂ ವ್ಯಕ್ತಪಡಿಸಿರುವ ಚಂದನ್ ಶೆಟ್ಟಿ, ಅಶ್ಲೀಲ ಕಮೆಂಟ್ ಮಾಡೋರ ಮನೆಯಲ್ಲಿ ಅವರ ಮನೆಯಲ್ಲಿ ಅವರಿಗೆ ಬುದ್ದಿ ಹೇಳೋರು ಯಾರು ಇಲ್ಲವಾ..? ಅವರ ಮನೆಯಲ್ಲಿ ಹೆಣ್ಮಕ್ಕಳು ಇರಲ್ವಾ..? ಜನರಿಗೆ ನಾಗರಿಕತೆನೇ ಇಲ್ವಾ? ಅಥವಾ ಇವರಿಗೆ ಸರಿಯಾದ ಶಿಕ್ಷಣವೇ ಸಿಕ್ಕಿಲ್ವಾ? ಎಂಬ ಪ್ರಶ್ನೆಯನ್ನೂ ಕೇಳಿದ್ದಾರೆ.

ಮುಂದುವರೆದು ಮಾತನಾಡಿರುವ ಚಂದನ್, ನಿಂದು ಹಾಗಿದೆ.. ನಿಂದು ಅಷ್ಟು ದಪ್ಪ ಇದೆ.. ಎಂದೆಲ್ಲ ಹೆಣ್ಮಕ್ಳಿಗೆ ನೇರವಾಗಿಯೇ ಹೇಳ್ತಾರೇ, ಇದನ್ನೆಲ್ಲ ನೋಡಿದರೆ ನಮ್ಮ ಸಮಾಜ ಯಾವ ಕಡೆ ಹೋಗುತ್ತಿದೆ ಎಂಬ ಆತಂಕ ಕಾಡುತ್ತೆ ಅಂದಿದ್ದಾರೆ. ಇದನ್ನೆಲ್ಲ ತಡೆಯೋರು ಯಾರಿಲ್ವಾ ಎಂಬ ಪ್ರಶ್ನೆ ಮಾಡಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅಶ್ಲೀಲ ಸಂದೇಶಗಳನ್ನ ಕಳಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಅಲ್ಲ ಎಂದಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಅರ್ಥವನ್ನೇ ಇವರು ಬದಲಿಸುತ್ತಿದ್ದಾರೆ ಎಂದಿದ್ದಾರೆ

chandan-shetty-ex-husband-of-niveditha-spoke-about-negative-and-sexual-comments-on-social-media

ಇನ್ನೂ ನಾವು ಕಲಾವಿದರು ನಿಜ. ಆದರೆ ನಮ್ಮ ಈ ಜೀವನವನ್ನೇ ಕೆಲವರು ಎಂಟರ್ಟೇನ್ಮೆಂಟ್‌ ಮಾಡ್ಕೊಂಡಿದ್ದಾರೆ. ಕೆಲವರು ನನಗೆ ಕೆಲ ಆಪ್ತರು ಒಂದಷ್ಟು ಜನ ಸ್ಕ್ರೀನ್ ಶಾಟ್ ಕಳಿಸುತ್ತಿದ್ದರು. ಆಗ ಮಾತ್ರ ಆ ಕಮೆಂಟ್‌ಗಳನ್ನ ನಾನು ನೋಡಿದ್ದೆ ಹೊರತು ಬೇರೆ ಕಮೆಂಟ್‌ಗಳನ್ನ ನೋಡಿಲ್ಲ, ನೋಡುವುದು ಇಲ್ಲ ಅಂದಿದ್ದಾರೆ. ಅವರಂತೆ ನಮಗೂ ಮಾತನಾಡೋಕೆ ಬರುತ್ತೆ. ಆದರೆ, ಅವರ ಮಟ್ಟಕ್ಕೆ ಇಳಿಯಲು ನಮ್ಮಿಂದ ಆಗಲ್ಲ ಎಂದಿದ್ದಾರೆ ಚಂದನ್ ಶೆಟ್ಟಿ

More from Filmibeat

English summary
Chandan Shetty says it is very devastating to see shameless people making comments on girls' private parts on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X