'ಇದು ಎಂಗೇಜ್ ಮೆಂಟ್ ಅಲ್ಲ': ಲವ್ ಪ್ರಪೋಸ್ ಕುರಿತು ಚಂದನ್ ಶೆಟ್ಟಿ ಸ್ಪಷ್ಟನೆ

Recommended Video

ದಸರಾ ನೋಡಲು ಬಂದ ಅಭಿಮಾನಿಗಳಿಗೆ ಶಾಕ್ ನೀಡಿದ ಚಂದನ್ ಶೆಟ್ಟಿ | FILMIBEAT KANNADA

ಯುವ ದಸರಾ ವೇದಿಕೆಯಲ್ಲಿ ನಿವೇದಿತಾ ಗೌಡ ಅವರಿಗೆ ಗಾಯಕ ಚಂದನ್ ಶೆಟ್ಟಿ ಲವ್ ಪ್ರಪೋಸ್ ಮಾಡಿದ್ದರು. ಸಹಜವಾಗಿ ಇದು ನೆರೆದಿದ್ದವರಿಗೆ ಸರ್ಪ್ರೈಸ್ ಆಗಿತ್ತು. ಆದರೆ, ನಾಡಹಬ್ಬ ನಡೆಯುತ್ತಿರುವ ಯುವ ದಸರಾ ವೇದಿಕೆಯಲ್ಲಿ ಈ ಪ್ರಪೋಸ್ ಬೇಡವಾಗಿತ್ತು ಎಂಬ ವಿರೋಧ ವ್ಯಕ್ತವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿರುದ್ಧ ಜನರು ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಮೈಸೂರು ದಸರಾ ಉಸ್ತುವಾರಿ ಸಚಿವ ಸೋಮಣ್ಣ ಕೂಡ ಚಂದನ್ ಶೆಟ್ಟಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಯುವ ದಸರಾ ವೇದಿಕೆಯನ್ನ ದುರ್ಬಳಕೆ ಮಾಡಿಕೊಳ್ಳಲಾಗಿದೆ, ಹೀಗಾಗಿ ಯುವ ದಸರಾ ಸಮಿತಿ ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಒತ್ತಾಯವೂ ಹೆಚ್ಚಿದೆ. ಈ ಬೆಳವಣಿಗೆಗೆ ಸಂಬಂಧಪಟ್ಟಂತೆ ಸ್ವತಃ ಚಂದನ್ ಶೆಟ್ಟಿ ಅವರೇ ಸ್ಪಷ್ಟನೆ ನೀಡಿದ್ದಾರೆ. ಯಾಕೆ ಯುವ ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿದ್ದು ಎಂದು ತಿಳಿಸಿದ್ದಾರೆ. ಮುಂದೆ ಓದಿ....

ಇದು ಸ್ವತಃ ನನ್ನ ನಿರ್ಧಾರವಾಗಿತ್ತು

ಇದು ಸ್ವತಃ ನನ್ನ ನಿರ್ಧಾರವಾಗಿತ್ತು

''ಯುವ ದಸರಾ ವೇದಿಕೆಯಲ್ಲಿ ನಿವೇದಿತಾ ಅವರಿಗೆ ಪ್ರಪೋಸ್ ಮಾಡುವುದು ಕೇವಲ ನನ್ನ ವೈಯಕ್ತಿಕ ನಿರ್ಧಾರವಾಗಿತ್ತು. ಈ ಕುರಿತು ಯುವ ದಸರಾ ಸಮಿತಿಯ ಯಾರೊಂದಿಗೆ ನಾನು ಚರ್ಚೆ ಮಾಡಿರಲಿಲ್ಲ. ಈ ಬಗ್ಗೆ ಏನೇ ಹೇಳುವುದಿದ್ದರೂ ನಾನು ಮಾತ್ರ ಹೊಣೆಯಾಗಿರುತ್ತೇನೆ'' ಎಂದು ಚಂದನ್ ಶೆಟ್ಟಿ ತಿಳಿಸಿದರು.

ಈ ಪ್ಲಾನ್ ಬಂದಿದ್ದು ಆಕ್ಮಸಿಕ

ಈ ಪ್ಲಾನ್ ಬಂದಿದ್ದು ಆಕ್ಮಸಿಕ

''ಯುವ ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಬೇಕು ಎಂದುಕೊಂಡಿದ್ದ ಆಕಸ್ಮಿಕ. ಬೆಳಗ್ಗೆಯಷ್ಟೆ ಈ ಯೋಚನೆ ಬಂದಿತ್ತು. ಯುವ ದಸರಾ ಅಂದ್ರೆ ಯುವಕರ ಸಂಭ್ರಮ. ತಾಯಿ ಚಾಮುಂಡೇಶ್ವರಿಯ ಆಶೀರ್ವಾದ. ಇದು ಉತ್ತಮ ವೇದಿಕೆ ಎಂಬ ಕಾರಣಕ್ಕೆ ಅಲ್ಲಿ ಪ್ರಪೋಸ್ ಮಾಡಿದೆ. ಈ ವಿಚಾರವನ್ನ ಯಾರಿಗೂ ಹೇಳಿರಲಿಲ್ಲ. ಸ್ವತಃ ನಿವೇದಿತಾ ಗೌಡ ಅವರಿಗೂ ಗೊತ್ತಿರಲಿಲ್ಲ. ಇದು ಸುಮಾರು ಹತ್ತು ವರ್ಷದ ನನ್ನ ಕನಸಿನ ವೇದಿಕೆ. ನನ್ನನ್ನು ಪ್ರೀತಿಸಿದವರು ಅಲ್ಲಿದ್ದರು. ಹಾಗಾಗಿ, ಆ ಪ್ರಪೋಸ್ ಮಾಡಿದ್ದು ಅಷ್ಟೇ. ಆ ವೇದಿಕೆಯನ್ನ ನಾನು ದುರ್ಬಳಕೆ ಮಾಡಿಕೊಂಡಿಲ್ಲ'' ಎಂದು ಚಂದನ್ ಕಾರಣ ಬಹಿರಂಗಪಡಿಸಿದ್ದರು.

ಇದು ಎಂಗೇಜ್ ಮೆಂಟ್ ಅಲ್ಲ

ಇದು ಎಂಗೇಜ್ ಮೆಂಟ್ ಅಲ್ಲ

''ಯುವ ದಸರಾ ವೇದಿಕೆಯಲ್ಲಿ ಆಗಿದ್ದು ಎಂಗೇಜ್ ಮೆಂಟ್ ಅಲ್ಲ. ಪರಸ್ಪರ ಇಬ್ಬರು ಮೊದಲೇ ನಿರ್ಧರಿಸಿ, ವೇದಿಕೆಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳೋಣ ಎಂದಿದ್ದರೆ ಅದು ಎಂಗೇಜ್ ಮೆಂಟ್. ನಿವೇದಿತಾ ಅವರು ನನಗೆ ವಾಪಸ್ ರಿಂಗ್ ಹಾಕಿದ್ರೆ ಎಂಗೇಜ್ ಮೆಂಟ್. ನಮ್ಮಿಬ್ಬರ ಮಧ್ಯೆ ರಿಲೇಶನ್ ಷಿಪ್ ಇದೆ ಎಂಬ ಸುದ್ದಿ ಇತ್ತು. ಈ ವದಂತಿಗಳಿಗೆ ಅಧಿಕೃತವಾಗಿ ಸ್ಪಷ್ಟನೆ ನೀಡಿದ್ದು ಅಷ್ಟೆ'' ಎಂದು ಚಂದನ್ ಶೆಟ್ಟಿ ಸಮರ್ಥಿಸಿಕೊಂಡರು.

ನಾವು ಮಾಡಿದ್ದು ಮನರಂಜನೆ ದೃಷ್ಟಿಯಿಂದ

ನಾವು ಮಾಡಿದ್ದು ಮನರಂಜನೆ ದೃಷ್ಟಿಯಿಂದ

''ನಾನು ಈ ಪ್ರಪೋಸ್ ಮಾಡಿದ್ದು ಕೇವಲ ಮನರಂಜನೆ ದೃಷ್ಟಿಯಿಂದ. ಯುವ ದಸರಾ ಕಾರ್ಯಕ್ರಮಕ್ಕೆ ನಮ್ಮನ್ನು ನೋಡಲು ಬಂದಿದ್ದ ಜನರಿಗೆ, ನಾವು ಮದುವೆಯಾಗಬೇಕೆಂದುಕೊಂಡಿದ್ದೇವೆ ಎಂಬ ಸುದ್ದಿ ಹೇಳಿದರೆ ಖುಷಿ ಪಡುತ್ತಾರೆ ಎಂಬ ಕಾರಣಕ್ಕಾಗಿ ಹೇಳಿದ್ದು ಅಷ್ಟೆ'' ಎಂದು ಚಂದನ್ ತಿಳಿಸಿದರು.

ಸರ್ಕಾರದ ಕ್ಷಮೆ ಕೇಳುತ್ತೇನೆ

ಸರ್ಕಾರದ ಕ್ಷಮೆ ಕೇಳುತ್ತೇನೆ

''ಈ ವಿಚಾರವಾಗಿ ನಾನು ಸರ್ಕಾರಕ್ಕೆ ಮತ್ತು ಸೋಮಣ್ಣ ಅವರಿಗೆ ಕ್ಷಮೆ ಕೇಳುತ್ತೇನೆ. ಬಹುಶಃ ನಾನು ಮೊದಲೇ ಹೇಳಬೇಕಾಗಿತ್ತು ಅನ್ಸುತ್ತೆ. ಆದರೆ, ಯಾರಿಗೂ ಹೇಳದೆ ಈ ಪ್ರಪೋಸ್ ಮಾಡಿದ್ದು ತಪ್ಪಾಗಿರಬಹುದು. ಇದಕ್ಕೆ ನಾನು ಯುವ ದಸರಾ ಸಮಿತಿ ಹಾಗೂ ಸರ್ಕಾರ ಬಳಿ ಕ್ಷಮೆ ಕೇಳುತ್ತೇನೆ'' ಎಂದು ಸ್ಪಷ್ಟನೆ ನೀಡಿದ್ದಾರೆ.

More from Filmibeat

English summary
Rap Singer Chandan Shetty clarifies why he proposed in yuva dasara. earlier he proposed his love to niveditha gowda in yuva dasara stage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X