For Quick Alerts
  ALLOW NOTIFICATIONS  
  For Daily Alerts

  ಪತ್ನಿ ನಿವೇದಿತಾ ಗೆ ಸರ್ಪ್ರೈಸ್ ಉಡುಗೊರೆ ಕೊಟ್ಟ ಚಂದನ್ ಶೆಟ್ಟಿ

  By ಫಿಲ್ಮೀಬೀಟ್ ಡೆಸ್ಕ್‌
  |

  ಬಿಗ್‌ಬಾಸ್ ಜೋಡಿ ಚಂದನ್ ಶೆಟ್ಟಿ-ನಿವೇದಿತಾ ಗೌಡ ಮದುವೆಯಾಗಿ ಒಂಬತ್ತು ತಿಂಗಳಾಗುತ್ತಾ ಬಂತು. ಇಬ್ಬರೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯರಾಗಿದ್ದು, ಸಂತಸದ ಕ್ಷಣಗಳನ್ನು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

  ಇಬ್ಬರೂ ಸಹ ತಮಾಷೆಯ ವಿಡಿಯೋಗಳು, ಹಾಡು, ಕುಣಿತ ಇನ್ನಿತರೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

  ಮುದ್ದು ಹುಡುಗಿ ನಿವೇದಿತಾ ಗೆ ಆಗಾಗ್ಗೆ ಸರ್ಪೈಸ್ ಉಡುಗೊರೆಗಳನ್ನು ಚಂದನ್ ತಂದುಕೊಡುತ್ತಿರುತ್ತಾರೆ. ಹಾಗೆಯೇ ಕೆಲ ದಿನಗಳ ಹಿಂದಷ್ಟೆ ಬಹಳ ದೊಡ್ಡದಾದ ಸರ್ಪ್ರೈಸ್ ಉಡುಗೊರೆಯನ್ನು ತಂದುಕೊಟ್ಟಿದ್ದಾರೆ ಚಂದನ್. ಉಡುಗೊರೆ ನೋಡಿ ನಿವೇದಿತಾ ಸಖತ್ ಥ್ರಿಲ್ ಆಗಿದ್ದಾರೆ.

  ಸರ್ಪ್ರೈಸ್ ಆಗಿ ಉಡುಗೊರೆ ತಂದುಕೊಟ್ಟಿದ್ದಾರೆ ಚಂದನ್

  ಸರ್ಪ್ರೈಸ್ ಆಗಿ ಉಡುಗೊರೆ ತಂದುಕೊಟ್ಟಿದ್ದಾರೆ ಚಂದನ್

  ಇನ್ನೂ 20 ವರ್ಷದ ನಿವೇದಿತಾ ಗೌಡ, ಮದುವೆಯಾದರೂ ಸಣ್ಣ ಮಗುವಂತೆ ವರ್ತಿಸುತ್ತಾರೆ. ಬಹುಷಃ ಇದು ಚಂದನ್‌ ಗೆ ಇಷ್ಟವೂ ಹೌದು. ಹಾಗಾಗಿಯೇ ನಿವೇದಿತಾ ಗೆ ಆಗಾಗ್ಗೆ ಸರ್ಪ್ರೈಸ್ ಆಗಿ ಉಡುಗೊರೆಗಳನ್ನು ತಂದುಕೊಟ್ಟು, ನಿವೇದಿತಾ ರ ಪ್ರತಿಕ್ರಿಯೆ ನೋಡುತ್ತಾರೆ.

  ಭಾರಿ ದೊಡ್ಡ ಟೆಡ್ಡಿ ಬೇರ್ ಕೊಟ್ಟಿದ್ದಾರೆ ಚಂದನ್

  ಭಾರಿ ದೊಡ್ಡ ಟೆಡ್ಡಿ ಬೇರ್ ಕೊಟ್ಟಿದ್ದಾರೆ ಚಂದನ್

  ಈ ಬಾರಿ ನಿವೇದಿತಾ ಗೆ ಇಷ್ಟವೆಂದು ಬಹಳ ದೊಡ್ಡ ಆಕಾರದ ಟೆಡ್ಡಿಬೇರ್ ಅನ್ನು ಆರ್ಡರ್ ಕೊಟ್ಟು ತಯಾರು ಮಾಡಿಸಿ ನಿವೇದಿತಾ ಗೆ ಕೊಟ್ಟಿದ್ದಾರೆ. ಬೊಂಬೆಯನ್ನು ಟಾಟಾ ಏಸ್ ವಾಹನದಲ್ಲಿ ತೆಗೆದುಕೊಂಡು ಹೋಗಿದ್ದಾರೆ ಚಂದನ್, ಅಷ್ಟು ದೊಡ್ಡದಾಗಿದೆ ಆ ಟೆಡ್ಡಿ ಬೇರ್.

  ಕುಣಿದು ಕುಪ್ಪಳಿಸಿದ ನಿವೇದಿತಾ

  ಕುಣಿದು ಕುಪ್ಪಳಿಸಿದ ನಿವೇದಿತಾ

  ಟೆಡ್ಡಿ ಬೇರ್ ಅನ್ನು ನೋಡುತ್ತಿದ್ದಂತೆ ಕುಣಿದು ಕುಪ್ಪಳಿಸಿದ್ದಾರೆ ನಿವೇದಿತಾ. ಟೆಡ್ಡಿ ಬೇರ್ ಗೆ ಮುತ್ತು ಕೊಟ್ಟು, ಅದರ ಮಡಿಲಲ್ಲಿ ಮಲಗಿದ್ದಾರೆ. ನಿವೇದಿತಾ ರ ಪ್ರತಿಕ್ರಿಯೆಯನ್ನು ಮೊಬೈಲ್ ನಲ್ಲಿ ಸೆರೆಹಿಡಿದಿರುವ ಚಂದನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  'Nodidavaru Enantare' ಹೊಸದೆಲ್ಲ ಆಚೆ ಬರ್ಬೇಕು | SriMurali | Filmibeat Kannada
  ಚಂದನ್ ಅನ್ನು ಹುಡುಕಿಬಂದ ವಿವಾದಗಳು

  ಚಂದನ್ ಅನ್ನು ಹುಡುಕಿಬಂದ ವಿವಾದಗಳು

  ಚಂದನ್-ನಿವೇದಿತಾ ಫೆಬ್ರವರಿ 25 ರಂದು ಮದುವೆಯಾಗಿದ್ದಾರೆ. ಚಂದನ್-ನಿವೇದಿತಾಗೆ ಯುವ ದಸರಾ ವೇದಿಕೆ ಮೇಲೆ ಪ್ರೊಪೋಸ್ ಮಾಡಿದ್ದು ವಿವಾದ ಎಬ್ಬಿಸಿತ್ತು. ನಂತರ ಚಂದನ್ ಅವರ ರ್ಯಾಪ್ ಹಾಡು ಸಹ ವಿವಾದ ಸೃಷ್ಟಿಸಿತ್ತು. ಇದೀಗ ಅವರ ಸಂಗೀತ ನಿರ್ದೇಶನದ 'ಪೊಗರು' ಸಿನಿಮಾ ಬಿಡುಗಡೆಗೆ ತಯಾರಿದೆ. ಜೊತೆಗೆ ದುಬಾರಿ ಸಿನಿಮಾಕ್ಕೆ ಸಂಗೀತ ನಿರ್ದೇಶನಕ್ಕೆ ಅವರಿಗೆ ಅವಕಾಶ ದೊರೆತಿದೆ.

  English summary
  Raper Chandan Shetty gave surprise gift to his wife Niveditha Gowda. He gave a giant teddy bear.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X