ನಿವೇದಿತಾ ಗೌಡ ಹುಟ್ಟು ಹಬ್ಬ, ಚಂದನ್ ಶೆಟ್ಟಿ ಕೊಟ್ರು ಬಿಗ್ ಸರ್ಪ್ರೈಸ್!

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಸಿನಿಮಾರಂಗದಲ್ಲಿ ತಮ್ಮದೇ ಆದ ಪಯಣ ಬೆಳೆಸಿದ್ದಾರೆ. ವೃತ್ತಿ ಜೀವನ ಮಾತ್ರವಲ್ಲ ತಮ್ಮ ವೈಯಕ್ತಿಕ ಬದುಕಿನ ವಿಚಾರದಲ್ಲೂ ಕೂಡ ಈ ಜೋಡಿ ಸದಾ ಸದ್ದು ಮಾಡುತ್ತಾ ಇರುತ್ತೆ. ಅದರಲ್ಲೂ ಚಂದನ್ ಮತ್ತು ನಿವೇದಿತಾ ಗೌಡ ಮದುವೆ ಆದಮೇಲೆ ಸಿಕ್ಕಾ ಪಟ್ಟೆ ಖ್ಯಾತಿ ಗಳಿಸಿದ್ದರೆ. ಸದ್ಯ ನಿವೇದಿತಾ ತಮ್ಮ ಹುಟ್ಟು ಹಬ್ಬದ ಮೂಲಕ ಸುದ್ದಿ ಆಗಿದ್ದಾರೆ.

ನಿವೇದಿತಾಗೆ ಸರ್ಪ್ರೈಸ್ ಎಂದರೆ ಬಹಳ ಇಷ್ಟ ಆಗುತ್ತೆ ಎಂದು ಚಂದನ್ ಶೆಟ್ಟಿ ಸದಾ ಹೇಳುತ್ತಾ ಇರುತ್ತಾರೆ. ಹಾಗಾಗಿ ನಿವೇದಿತಾ ಹುಟ್ಟು ಹಬ್ಬಕ್ಕೆ ಚಂದನ್ ಶೆಟ್ಟಿ ಯಾವ ಸರ್ಪ್ರೈಸ್ ಕೊಡುತ್ತಾರೆ ಎನ್ನುವ ಬಗ್ಗೆ ಕುತೂಹಲ ಇತ್ತು. ವಿಡಿಯೋ ಹಂಚಿಕೊಳ್ಳುವ ಮೂಲಕ ನಿವೇದಿತಾ ಗೌಡ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ.

ನಿವೇದಿತಾ ಗೌಡ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಕುಟುಂಬಸ್ಥರ ಸಮ್ಮುಖದಲ್ಲಿ ನಿವೇದಿತಾ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ ನಿವೇದಿತಾ ಮತ್ತು ಚಂದನ್ ಶೆಟ್ಟಿ.

ಬರ್ತ್ ಡೇ ವಿಡಿಯೋ ಹಂಚಿಕೊಂಡ ನಿವೇದಿತಾ!

ನಿವೇದಿತಾ ಹುಟ್ಟು ಹಬ್ಬದ ಸಂಭ್ರದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೇಕ್ ಕಟ್ ಮಾಡಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಹಳದಿ ಬಣ್ಣದ, ಕಸ್ಟಂ ಕೇಕ್ ಕತ್ತರಿಸಿದ್ದಾರೆ ನಿವೇದಿತಾ. ಈ ವಿಡಿಯೋದಲ್ಲಿ ನಿವಿ ಜಿನ್ಸ್ ಮತ್ತು ಪಿಂಕ್ ಕ್ರಾಪ್ ಟಾಪ್ ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಪತ್ನಿಗೆ ಸರ್ಪ್ರೈಸ್ ಕೊಟ್ಟ ಚಂದನ್ ಶೆಟ್ಟಿ!

ಇನ್ನು ನಿವೇದಿತಾ ಹುಟ್ಟು ಹಬ್ಬಕ್ಕೆ ಚಂದನ್ ಕೊಟ್ಟ ಸರ್ಪ್ರೈಸ್ ಇದೆ. ಚಂದನ್ ಇಡಿ ಕುಟುಂಬದ ಜೊತೆಗೆ ನಿವೇದಿತಾ ಹುಟ್ಟು ಹಬ್ಬವನ್ನು ಏರ್ಪಡಿದ್ದರು. ಇದನ್ನು ಕಂಡು ನಿವೇದಿಯಾ ಬೆರಗಾಗಿ ಖುಷಿ ವ್ಯಕ್ತಪಡಿಸಿದ್ದಾರೆ. ಪೋಸ್ಟ್ ಹಂಚಿಕೊಂಡ ಚಂದನ್ ಶೆಟ್ಟಿ "ನಿನಗೆ ನನ್ನ ಪ್ರೀತಿಯ ಹುಟ್ಟು ಹಬ್ಬ, ನಿನ್ನ ಕನಸುಗಳು ನನಸಾಗಲಿ, ಮತ್ತಷ್ಟು ಯಶಸ್ಸು ಸಿಗಲಿ ಎಂದು ಬಯಸುತ್ತೇನೆ. ಐ ಲವ್ ಯು ಸೋ ಮಚ್ ಎಂದು ಬರೆದುಕೊಂಡಿದ್ದಾರೆ." ಇದೇ ವಿಡಿಯೋವನ್ನು ನಿವೇದಿತಾ ಹಂಚಿಕೊಂಡಿದ್ದಾರೆ.

ಕ್ಯಾಟ್ ವಾಕ್ ಕಲಿಯುತ್ತಿದ್ದಾರೆ ನಿವೇದಿತಾ!

ಮಿಸೆಸ್ ಇಂಡಿಯಾ ಆಗಲು ನಿವೇದಿತಾ ತಯಾರಿ ನಡೆಸಿದ್ದಾರೆ. ಸದ್ಯ ಕ್ಯಾಟ್ ವಾಕ್ ಹೇಗೆ ಮಾಡುವುದು ಎನ್ನುವುದರ ಕುರಿತು ಟ್ರೈನಿಂಗ್ ಪಡೆಯುತ್ತಿದ್ದು, ಆ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಿಸೆಸ್ ಇಂಡಿಯಾ ಆಗಲು ಟ್ರೈನಿಂಗ್ ಪಡೆಯುತ್ತಿದ್ದಾರಂತೆ. ಮುಂದಿನ ದಿನಗಳಲ್ಲಿ ಮಿಸೆಸ್​ ಇಂಡಿಯಾ ಸ್ಪರ್ಧೆಯಲ್ಲೂ ನಿವೇದಿತಾ ಭಾಗಿಯಾಗಲಿದ್ದಾರೆ.

ಸಿನಿಮಾ ಹೀರೊ ಆದರು ಚಂದನ್ ಶೆಟ್ಟಿ!

ಇನ್ನು ಚಂದನ್ ಶೆಟ್ಟಿ ಮ್ಯೂಸಿಕ್ ಜೊತೆಗೆ ಹೊಸ ಹೆಜ್ಜೆಯನ್ನು ಇಟ್ಟಿದ್ದಾರೆ. ನಟನೆಗೆ ಇಳಿದ ಚಂದನ್ ಶೆಟ್ಟಿ ನಾಯಕನಾಗಿ ಸಿನಿಮಾ ಮಾಡುತ್ತಿದ್ದಾರೆ. 'ಎಲ್ರ ಕಾಳಿತದೆ ಕಾಲ' ಎನ್ನುವ ಚಿತ್ರದಲ್ಲಿ ನಾಯಕ ಆಗಿದ್ದಾರೆ. ಈ ಚಿತ್ರದಲ್ಲಿ ಚಂದನ್ ಶೆಟ್ಟಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಾರೆ. ಅವರ ಲುಕ್ ಈಗಾಗಲೇ ವೈರಲ್ ಆಗಿದೆ.

More from Filmibeat

English summary
Chandan Shetty Give Big Surprise Gift To Niveditha Gowda On Her Birthday, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X