ಅಭಿಮಾನಿಗಳ ಮುಂದೆ ಎಂಗೇಜ್ ಆದ ಚಂದನ್ ಶೆಟ್ಟಿ - ನಿವೇದಿತಾ ಗೌಡ : ಸದ್ಯದಲ್ಲೇ ಮದುವೆ

Recommended Video

ದಸರಾ ನೋಡಲು ಬಂದ ಅಭಿಮಾನಿಗಳಿಗೆ ಶಾಕ್ ನೀಡಿದ ಚಂದನ್ ಶೆಟ್ಟಿ | FILMIBEAT KANNADA

ಕನ್ನಡ Rapper, ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ನಿಶ್ಚಿತಾರ್ಥ ಮೈಸೂರಿನಲ್ಲಿ ನಡೆದಿದೆ. ನಿನ್ನೆ (ಅಕ್ಟೋಬರ್ 4) ಅಭಿಮಾನಿಗಳ ಮುಂದೆ ಚಂದನ್ ಹಾಗೂ ನಿವೇದಿತಾ ಎಂಗೇಜ್ ಆಗಿದ್ದಾರೆ.

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಪ್ರತಿ ಸೀಸನ್ ನಲ್ಲಿಯೂ ಸಾಕಷ್ಟು ಜೋಡಿಗಳು ಹುಟ್ಟುಕೊಳ್ಳುತ್ತಾರೆ. ಕಾರ್ಯಕ್ರಮದಲ್ಲಿ ಪ್ರೇಮಪಕ್ಷಿಗಳ ಹಾಗೆ ಜೊತೆ ಜೊತೆಗೆ ಓಡಾಡುವ, ಜೋಡಿಗಳು ಕಾರ್ಯಕ್ರಮ ಮುಗಿದ ಮೇಲೆ ಮರೆಯಾಗುತ್ತಾರೆ. ಆದರೆ, ಚಂದನ್ ಮತ್ತು ನಿವೇದಿತಾ ಈಗ ನಿಜ ಜೀವನದಲ್ಲಿ ಒಂದಾಗಿದ್ದು, ಹೊಸ ಬದುಕಿನ ಕಾಲಿಟ್ಟಿದ್ದಾರೆ.

ತಮ್ಮ ಪ್ರಿಯತಮೆ ನಿವೇದಿತಾಗೆ ಚಂದನ್ ಶೆಟ್ಟಿ ದೊಡ್ಡ ಸರ್ ಪ್ರೈಸ್ ನೀಡಿದ್ದಾರೆ. ಅಭಿಮಾನಿಗಳ ಮುಂದೆ ಆಕೆಯ ಕೈಗೆ ಉಂಗುರ ಹಾಕಿದ್ದಾರೆ.

ಯುವ ದಸರಾ ಕಾರ್ಯಕ್ರಮದಲ್ಲಿ ಪ್ರಪೋಸ್

ಯುವ ದಸರಾ ಕಾರ್ಯಕ್ರಮದಲ್ಲಿ ಪ್ರಪೋಸ್

ನಿನ್ನೆ (ಅಕ್ಟೋಬರ್ 4) ಯುವ ದಸರಾದಲ್ಲಿ ಚಂದನ್ ಶೆಟ್ಟಿ ಸಂಗೀತ ಕಾರ್ಯಕ್ರಮ ನೀಡಿದರು. ಇದೇ ಕಾರ್ಯಕ್ರಮದಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದಾರೆ. ಆಕೆಯ ಕೈಗೆ ಉಂಗುರ ತೊಡಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವೇದಿಕೆ ಮೇಲೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದರ ಮೂಲಕ ನಿವೇದಿತಾಗೆ ಸರ್ ಪ್ರೈಸ್ ನೀಡಿದ್ದಾರೆ.

ಓ ಮೈ ಗಾಡ್ ಎಂದ ನಿವೇದಿತಾ

ಓ ಮೈ ಗಾಡ್ ಎಂದ ನಿವೇದಿತಾ

''ನನಗೆ ತುಂಬ ಶಾಕ್ ಆಗುತ್ತಿದೆ. ಐ ಲವ್ ಯೂ ಸೋ ಮಚ್. ಬಿಗ್ ಬಾಸ್ ಮನೆಯಲ್ಲಿ ನಾವು 105 ದಿನ ಜೊತೆಯಲಿ ಇದ್ವಿ. ಹೊರಗೆ ಬಂದ ಮೇಲೆ ಒಳ್ಳೆಯ ಫ್ರೆಂಡ್ಸ್ ಆದ್ವಿ. ನಂತರ ಬೆಸ್ಟ್ ಫ್ರೆಂಡ್ಸ್ ಆದ್ವಿ. ಆಮೇಲೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡ್ವಿ. ಈ ತರ ಪ್ರಪೋಸ್ ಬಂದರೆ, ಓ ಮೈ ಗಾಡ್.'' ಎಂದು ನಿವೇದಿತಾ ಸಂತಸ ಹಂಚಿಕೊಂಡರು

ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದ್ರು ಚಂದನ್

ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದ್ರು ಚಂದನ್

ವೇದಿಕೆ ಮೇಲೆ ನಿವೇದಿತಾಗೆ ರಿಂಗ್ ಹಾಕಿದ ಚಂದನ್ ನಂತರ ತಮ್ಮ ಅಭಿಮಾನಿಗಳ ಜೊತೆಗೆ ಮಾತನಾಡಿದರು. ''ಈ ದಿನ ನಾನು ಪ್ರಪೋಸ್ ಮಾಡುತ್ತಾನೆ ಎಂದು ತಿಳಿದಿರಲಿಲ್ಲ. ಆದರೆ, ನಿಮ್ಮೆಲ್ಲರ ಮುಂದೆ ನಿವೇದಿತಾಗೆ ಪ್ರಪೋಸ್ ಮಾಡಿದ್ದೇನೆ. ಸದ್ಯದಲ್ಲಿಯೇ ನಾವು ಮದುವೆ ಆಗುತ್ತಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲೆ ಇರಲಿ.'' ಎಂದು ಹೇಳಿದ್ದಾರೆ.

ಅಧಿಕೃತವಾಯ್ತು ಚಂದನ್ - ನಿವೇದಿತಾ ಲವ್ ಸ್ಟೋರಿ

ಅಧಿಕೃತವಾಯ್ತು ಚಂದನ್ - ನಿವೇದಿತಾ ಲವ್ ಸ್ಟೋರಿ

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಇತ್ತೀಚಿಗೆ ಬಹಳ ಕ್ಲೋಸ್ ಆಗಿದ್ದರು. ಹೆಚ್ಚು ಹೆಚ್ಚು ಭೇಟಿ ಆಗುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಇಬ್ಬರು ಜೊತೆಗಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದವರಿಗೆ ಇಬ್ಬರ ನಡುವೆ ಪ್ರೀತಿ ಇರಬಹುದು ಎನ್ನುವ ಕುತೂಹಲ ಇತ್ತು. ಅದೇ ರೀತಿ ಇದೀಗ ಅಧಿಕೃತವಾಗಿ ಚಂದನ್ ಹಾಗೂ ನಿವೇದಿತಾ ಎಂಗೇಜ್ ಆಗಿದ್ದಾರೆ. ಇವರ ಪ್ರೀತಿಗೆ ಮನೆಯವರ ಒಪ್ಪಿಗೆಯೂ ಸಿಕ್ಕಿದೆ.

More from Filmibeat

English summary
Bigg Boss 5 winner, kannada rapper Chandan Shetty got engaged with Niveditha Gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X