'ಗೊಂಬೆ' ನಿವೇದಿತಾ ಕೊರಳಿಗೆ ಮಾಂಗಲ್ಯಧಾರಣೆ ಮಾಡಿದ ಚಂದನ್ ಶೆಟ್ಟಿ

ಇಷ್ಟು ದಿನ ಪ್ರೀತಿಯ ಅಲೆಯಲ್ಲಿ ತೇಲುತ್ತಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಪ್ರೇಮಕ್ಕೆ ಇಂದು ಅಧಿಕೃತ ಮುದ್ರೆ ಸಿಕ್ಕಿದೆ. ಕನ್ನಡ ರಾಪರ್, ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಮತ್ತು 'ಬಿಗ್ ಬಾಸ್' ಫೈನಲಿಸ್ಟ್ ನಿವೇದಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Recommended Video

ನಿವೇದಿತಾ ಕೊರಳಿಗೆ ಮಾಂಗಲ್ಯಧಾರಣೆ ಮಾಡಿದ ಚಂದನ್ ಶೆಟ್ಟಿ | Chandan Shetty | Niveditha Gowda

ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್ ನಲ್ಲಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ. ಇಂದು ಬೆಳಗ್ಗೆ 8.15 ರಿಂದ 9 ಗಂಟೆಯೊಳಗೆ ಇದ್ದ ಶುಭ ಮುಹೂರ್ತದಲ್ಲಿ ನಿವೇದಿತಾ ಗೌಡ ಕೊರಳಿಗೆ ಚಂದನ್ ಶೆಟ್ಟಿ ಮಾಂಗಲ್ಯಧಾರಣೆ ಮಾಡಿದರು.

ಮುಹೂರ್ತಕ್ಕೆ ಕೆಂಪು ಮತ್ತು ಹಸಿರು ಬಣ್ಣದ ಕಾಂಬಿನೇಶನ್ ಇರುವ ಸೀರೆಯಲ್ಲಿ ವಧು ನಿವೇದಿತಾ ಗೌಡ ಮಿರಿ ಮಿರಿ ಮಿಂಚಿದರು. ಇನ್ನೂ ಬಿಳಿ ಮತ್ತು ಗೋಲ್ಡನ್ ಬಣ್ಣದ ಕಾಂಬಿನೇಶನ್ ಇರುವ ರೇಶ್ಮೆ ಪಂಚೆ, ಶಲ್ಯ, ಪೇಟ ತೊಟ್ಟು ವರ ಚಂದನ್ ಶೆಟ್ಟಿ ಕಂಗೊಳಿಸಿದರು.

chandan-shetty-got-married-to-niveditha-gowda

ಒಕ್ಕಲಿಗ ಮತ್ತು ಶೆಟ್ಟಿ ಸಂಪ್ರದಾಯದಂತೆ ಚಂದು-ನಿವಿ ಮದುವೆ ನೆರವೇರಿದೆ. ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿವಾಹಕ್ಕೆ ಕುಟುಂಬಸ್ಥರು, ಬಂಧು-ಮಿತ್ರರು ಸಾಕ್ಷಿ ಆಗಿದ್ದಾರೆ.

ನಿನ್ನೆ ಸಂಜೆ ರಾಯಲ್ ಥೀಮ್ ನಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಆರತಕ್ಷತೆ ಜರುಗಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಧ್ರುವ ಸರ್ಜಾ, ಅಕುಲ್ ಬಾಲಾಜಿ ಸೇರಿದಂತೆ ಹಲವು ಸ್ಟಾರ್ ನಟರು ರಿಸೆಪ್ಷನ್ ನಲ್ಲಿ ಭಾಗವಹಿಸಿ ನವ ದಂಪತಿಗಳಿಗೆ ಶುಭಾಶಯ ತಿಳಿಸಿದ್ದರು.

More from Filmibeat

English summary
Kannada Rapper Chandan Shetty got married to Niveditha Gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X