ಮದುವೆಯ ಬಗ್ಗೆ ಮನಸ್ಸಿನ ಮಾತನ್ನು ಹಂಚಿಕೊಂಡ ಚಂದನ್
ಬಿಗ್ -ಬಾಸ್ 5 ಕಾರ್ಯಕ್ರಮದ ವಿನ್ನರ್ ಚಂದನ್ ಶೆಟ್ಟಿ ಮದುವೆ ಆಗುತ್ತಾರೆ. ಇದೇ ತಿಂಗಳು ನಿಶ್ಚಿತಾರ್ಥ ಎನ್ನುವ ಸುದ್ದಿಗಳು ಹರಿದಾಡಿತ್ತು. ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಮನೆ ಮಾತಾಗಿರುವ ನಟಿ ವೈಷ್ಣವಿ ಅವರನ್ನ ಚಂದನ್ ಮದುವೆ ಆಗುತ್ತಾರೆ ಎಂದು ಗಾಸಿಪ್ ಆಗಿತ್ತು.
ಫೇಸ್ ಬುಕ್ ನಲ್ಲಿ ನಾನು ಮದುವೆ ಆಗುತ್ತೇನೆ ಎಂದು ವೈಷ್ಣವಿ ಸ್ಟೇಟಸ್ ಹಾಕಿಕೊಂಡಿರುವ ರೀತಿಯಲ್ಲಿ ಯಾರೋ ಗ್ರಾಫಿಕ್ಸ್ ಮಾಡಿ ಎಲ್ಲೆಡೆ ಪ್ರಚಾರ ಮಾಡಿದ್ದರು. ಈ ಸುದ್ದಿ ಕೇಳಿ ಸ್ವತಃ ಚಂದನ್ ಹಾಗೂ ವೈಷ್ಣವಿ ಅವರೇ ಆಶ್ವರ್ಯ ಪಟ್ಟುಕೊಂಡಿದ್ದರು.
ಕಲಾವಿದರು, ಸೆಲಬ್ರೆಟಿಗಳು ಅಂದ ಮೇಲೆ ಇಂತಹ ಗಾಸಿಪ್ ಗಳು ಕಾಮನ್. ಇಂತಹ ಸುದ್ದಿಗಳಿಗೆ ತೆರೆ ಎಳೆಯಬೇಕು ಅನ್ನೋ ನಿಟ್ಟಿನಲ್ಲಿ ಚಂದನ್ ಶೆಟ್ಟಿ ಫೇಸ್ ಬುಕ್ ಲೈವ್ ನಲ್ಲಿ ತಮ್ಮ ಮದುವೆ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.ಮುಂದೆ ಓದಿ

ಚಂದನ್ ಜೊತೆ ಬಂದರು ಸ್ಪೆಷಲ್ ಫ್ರೆಂಡ್
ಚಂದನ್ ಮದುವೆ ವಿಚಾರವಾಗಿ ಮಾತನಾಡಿದ್ದಾರೆ. ಕಿರಿಕ್ ಕೀರ್ತಿ ಜೊತೆ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಚಂದನ್ ನಾನು ಮದುವೆ ಆಗುತ್ತಿಲ್ಲ ಎನ್ನುವುದನ್ನು ಈ ಮೂಲಕ ಖಚಿತ ಪಡಿಸಿದ್ದಾರೆ.

ಧಾರಾವಾಹಿಯಲ್ಲಿ ಮಾತ್ರ ನೋಡಿದ್ದೇನೆ
ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಚಂದನ್ ಶೆಟ್ಟಿ, ವೈಷ್ಣವಿ ಅವರನ್ನ ಎರಡು ಭಾರಿ ಧಾರಾವಾಹಿಯಲ್ಲಿ ನೋಡಿದ್ದೇನೆ. ಅವರ ಪರಿಚಯ ಕೂಡ ನನಗಿಲ್ಲ. ಇನ್ನೂ ಮದುವೆಯ ಮಾತು ಎಲ್ಲಿಂದ ಬರುತ್ತೆ ಎಂದಿದ್ದಾರೆ.

ಮದುವೆಗೂ ಮುಂಚೆ ಸಾಧನೆ ಮುಖ್ಯ
ಬಿಗ್ -ಬಾಸ್ 5 ಗೆದ್ದಿರುವ ಖುಷಿ ಇದೆ, ಜವಾಬ್ದಾರಿ ಹೆಚ್ಚಾಗಿದೆ. ಆದ್ದರಿಂದ ಮದುವೆಯ ಯೋಚನೆ ಸದ್ಯಕ್ಕೆ ಇಲ್ಲ. ಈಗ ಇರುವ ಯಶಸ್ಸನ್ನ ತುಂಬಾ ಚೆನ್ನಾಗಿ ಬಳಸಿಕೊಳ್ಳುತ್ತೇನೆ. ನಂತರ ಮದುವೆ ಯೋಚನೆ ಎಂದಿದ್ದಾರೆ.

ಧಾರಾವಾಹಿ- ರಿಯಾಲಿಟಿ ಶೋನಲ್ಲಿ ಬ್ಯುಸಿ
ನಟಿ ವೈಷ್ಣವಿ ಮದುವೆಯ ಗಾಸಿಪ್ ವಿಚಾರದ ಬಗ್ಗೆ ತಮ್ಮ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ್ದಾರೆ. ನನ್ನ ಫೇಸ್ ಬುಕ್ ಅಕೌಂಟ್ ಇಲ್ಲ, ನನ್ನ ಹೆಸರಿನಲ್ಲಿ ಯಾರೋ ಅಕೌಂಟ್ ಕ್ರಿಯೆಟ್ ಮಾಡಿದ್ದಾರೆ. ನನಗೂ ಅದಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ.


Click it and Unblock the Notifications











