''ತೌಬಾ ತೌಬಾ'' ಎಂದು ಕುಣಿದ ಚಂದನ್ ಶೆಟ್ಟಿ, ಹೊಸ ಅಧ್ಯಾಯ ಶುರು ಎಂದ ಅಭಿಮಾನಿಗಳು..!
ನಿವೇದಿತಾ ಗೌಡ ಅವರಿಗೆ ರೀಲ್ಸ್ ಮಾಡುವುದು ದಿನ ನಿತ್ಯದ ಅಭ್ಯಾಸ. ಆದರೆ, ಚಂದನ್ ಶೆಟ್ಟಿಗೆ ಅದು ಹವ್ಯಾಸ. ಇದಕ್ಕೆ ಸಾಕ್ಷಿ ಎಂಬಂತೆ ನಿವೇದಿತಾ ಗೌಡ ಜೊತೆ ಇದ್ದಾಗ ಅಪರೂಪಕ್ಕೆ ಚಂದನ್ ರೀಲ್ಸ್ ಮಾಡುತ್ತಿದ್ದರು. ಬಾಕಿ ಸಮಯದಲ್ಲಿ ಸಾಮಾಜಿಕ ಜಾಲತಾಣದಿಂದ ಅಂತರ ಕಾಪಾಡಿಕೊಂಡು ಕೆಲಸದ ಕಡೆ ಗಮನ ಕೊಡ್ತಿದ್ದರು.
ಆದರೆ ಈಗ ಚಂದನ್ ಶೆಟ್ಟಿ ಬದುಕು ಬದಲಾಗಿದೆ. ಕಳೆದ ಎರಡು ತಿಂಗಳಿಂದ ಚಂದನ್ ಶೆಟ್ಟಿ ಸಿನಿಮಾ ಕೆಲಸದಲ್ಲಿಯೇ ಮುಳುಗಿ ಹೋಗಿದ್ದಾರೆ. ನಾಯಕನಾಗಿ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದಾರೆ. ಇನ್ನೂ ಈ ಎರಡು ತಿಂಗಳಿನಲ್ಲಿ ಚಂದನ್ ತಮ್ಮ ಅಭಿಮಾನಿಗಳ ಜೊತೆ ನಿತ್ಯ ಸಂಪರ್ಕದಲ್ಲಿಯೂ ಇದ್ದಾರೆ. ಹಿಂದಿಕ್ಕಿಂತಲೂ ತುಸು ಹೆಚ್ಚೇ ಸಕ್ರಿಯರಾಗಿದ್ದಾರೆ. ರೀಲ್ಸ್ ಮಾಡುವ ಹವ್ಯಾಸವನ್ನೂ ಕೂಡ ಮುಂದುವರೆಸಿದ್ದಾರೆ.

ಹೌದು, ಇದು ಸಹವಾಸ ದೋಷವಾ ಗೊತ್ತಿಲ್ಲ. ಆದರೆ ನಿವೇದಿತಾ ಗೌಡ ಅವರ ಪ್ರಭಾವಳಿಯಿಂದ ರೀಲ್ಸ್ ಪ್ರಪಂಚಕ್ಕೆ ಧುಮುಕಿದ್ದ ಚಂದನ್ ಸದ್ಯಕ್ಕೆ ಹಿಂದಿಯ ಬ್ಯಾಡ್ ನ್ಯೂಸ್ ಚಿತ್ರದ ಚಾರ್ಟ್ ಬಸ್ಟರ್ ಹಾಡು ತೌಬಾ ತೌಬಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಸದ್ಯಕ್ಕೆ ಚಂದನ್ ಶೆಟ್ಟಿ ಅವರ ಈ ಹೆಜ್ಜೆಗೆ ಅನೇಕರು ಮನ ಸೋತಿದ್ದಾರೆ. ಇದು ಚೆನ್ನಾಗಿರುವುದು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಚಂದನ್ ನೀವು ಯಾವತ್ತು ಹೀಗೆ ನಗು ನಗುತ್ತಾ ಇರಿ ಎಂದಿದ್ದಾರೆ. ಅಣ್ಣನ ಹೊಸ ಅಧ್ಯಾಯ ಶುರು ಎಂದು ಕೂಡ ಹೇಳಿದ್ದಾರೆ.
ಇನ್ನೂ, ನಿವೇದಿತಾ ಗೌಡ ಅವರಿಂದ ದೂರವಾದ ನಂತರ ಚಂದನ್ ಸಂಪೂರ್ಣ ಸ್ವಾತಂತ್ರ್ಯರಾಗಿದ್ದಾರೆ. ಬ್ಯಾಚುಲರ್ ಜೀವನಕ್ಕೆ ಮರಳಿದ್ದಾರೆ. ಅನು ದಿನ ಅನು ಕ್ಷಣ ಖುಷಿ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ಇದಕ್ಕೆ ಇನ್ನೊಂದು ಪುರಾವೆ ಎನ್ನುವಂತೆ ಚಂದನ್ ಅಡುಗೆಯನ್ನು ಮಾಡಿದ್ದಾರೆ.ಕಿರಿಕ್ ಕೀರ್ತಿ ಈ ವಿಡಿಯೋ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಕೂಡ ವೈರಲ್ ಆಗಿದೆ.
ಏನು ಮಾಡ್ತಿದ್ದೀರಾ ಚಂದನ್ ಎಂದು ಕೇಳುವ ಕೀರ್ತಿ, ಆ ನಂತರ ಚಂದನ್ ಉತ್ತರಕ್ಕೂ ಕಾಯದೇ ಯಾವೇ ಚಿತ್ರಾನ್ನ ಎಂದಿದ್ದಾರೆ. ಬ್ಯಾಚ್ಯುಲರ್ ಚಿತ್ರಾನ್ನ ಎಂದು ಹೆಸರಿಸಿದ್ದಾರೆ. ಇದಕ್ಕೆ ನಗುವ ಚಂದನ್ ಆ ನಂತರ ಒಗ್ಗರಣೆ ಅನ್ನ ಹಾಕಿ ಚಿತ್ರಾನ್ನ ಮಾಡಿದ್ದಾರೆ. ರಾತ್ರಿ ಉಳಿದ ಅನ್ನ...ಬೆಳಗ್ಗೆ ಪರಮಾನ್ನ.. ಎಂಬ ಶೀರ್ಷಿಕೆಯನ್ನು ಈ ವಿಡಿಯೋಗೆ ನೀಡಿದ್ದಾರೆ.
ಚಂದನ್ ಶೆಟ್ಟಿ ಅವರ ಈ ಅಡುಗೆ ಕಲೆಯನ್ನು ಕಣ್ತುಂಬಿಕೊಂಡ ಅನೇಕರು ಅವರ ಅವರ ಮನದ ಮಾತು ಹಂಚಿಕೊಂಡಿದ್ಧಾರೆ. ಬ್ಯಾಚುಲರ್ ಚಿತ್ರಾನ್ನ ಅಂದ್ರೆ ಬೆಸ್ಟ್ ಬಿಡ್ರಿ. ಅದರಲ್ಲಿ ಪ್ರೀತಿ ಸ್ನೇಹ ಮಮತೆ ಎಲ್ಲ ಜಾಸ್ತಿ ಇರುತ್ತೆ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ಇಬ್ಬರಿಗೂ ಫುಲ್ ಫ್ರೀಡಂ ಸಿಕ್ಕಿದೆ. ಇವಾಗ ಇಬ್ಬರ ಮುಖದಲ್ಲೂ ಬೇಕಾದಷ್ಟು ನಗು ಕಾಣಬಹುದು ಹೀಗೆ ನಗುತ್ತೀರಿ ಎಂದಿದ್ಧಾರೆ. ಮತ್ತೊಬ್ಬರು ಅವರದ್ದೇ ಒಂದು ಸಂಘ open ಆದ್ರೂ ಅಶ್ಚರ್ಯ ಇಲ್ಲ ಎಂದಿದ್ದಾರೆ.


Click it and Unblock the Notifications











