ಚಂದನ್ ಶೆಟ್ಟಿ-ನಿವೇದಿತಾ ಗೌಡ ಮದುವೆ ದಿನಾಂಕ ನಿಗದಿ: ಎಲ್ಲಿ, ಯಾವಾಗ.?

ಕೇವಲ ಮೂರೇ ಮೂರು ವರ್ಷಗಳ ಹಿಂದೆ ನಿವೇದಿತಾ ಗೌಡ ಯಾರು ಅನ್ನೋದು ಚಂದನ್ ಶೆಟ್ಟಿಗೆ ಗೊತ್ತೇ ಇರಲಿಲ್ಲ. ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಪರಿಚಯ ಆಗಿದ್ದು 'ಬಿಗ್ ಬಾಸ್' ಮನೆಯೊಳಗೆ.! 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ ಇವರಿಬ್ಬರು, 'ಬಿಗ್ ಬಾಸ್' ಮನೆಯಲ್ಲಿ ಇದ್ದಾಗಲೇ ಕ್ಲೋಸ್ ಫ್ರೆಂಡ್ಸ್ ಆಗಿದ್ದರು.

'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ ಮೇಲೆ ಆಗಾಗ ಭೇಟಿ ಮಾಡುತ್ತಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮಧ್ಯೆ ಪ್ರೀತಿ ಯಾವಾಗ ಮೊಳಕೆಯೊಡೆಯಿತೋ, ಗೊತ್ತಿಲ್ಲ. ಇಷ್ಟದ 'ನಿವಿ'ಗೆ ಚಂದನ್ ಶೆಟ್ಟಿ ಬಹಿರಂಗವಾಗಿಯೇ ಪ್ರಪೋಸ್ ಮಾಡಿ ಕೈಗೆ ಉಂಗುರ ತೊಡಿಸಿಬಿಟ್ಟರು.

ಇದಾದ ಮೇಲೆ ಕುಟುಂಬದವರ ಸಮ್ಮತಿಯೊಂದಿಗೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಿಶ್ಚಿತಾರ್ಥ ಮಾಡಿಕೊಂಡರು. 'ಮದುವೆ ಇನ್ನೂ ಲೇಟ್' ಎನ್ನುತ್ತಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಈಗ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. 'ಬಿಗ್ ಬಾಸ್' ಪ್ರೇಮ ಪಕ್ಷಿಗಳ ಮದುವೆ ದಿನಾಂಕ ನಿಗದಿ ಆಗಿದೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ ಓದಿರಿ...

ಚಂದನ್ ಶೆಟ್ಟಿ-ನಿವೇದಿತಾ ಗೌಡ ಮದುವೆ ಯಾವಾಗ.?

ಚಂದನ್ ಶೆಟ್ಟಿ-ನಿವೇದಿತಾ ಗೌಡ ಮದುವೆ ಯಾವಾಗ.?

'ಬಿಗ್ ಬಾಸ್' ಕಾರ್ಯಕ್ರಮದಿಂದ ಪರಿಚಯವಾಗಿ, ಪ್ರೇಮಿಗಳಾಗಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮದುವೆ ದಿನಾಂಕ ಫಿಕ್ಸ್ ಆಗಿದೆ. ಮುಂದಿನ ತಿಂಗಳು... ಅಂದ್ರೆ ಫೆಬ್ರವರಿ 25 ಮತ್ತು 26 ರಂದು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿವಾಹ ಮಹೋತ್ಸವ ನಡೆಯಲಿದೆ.

ಮದುವೆ ಎಲ್ಲಿ.?

ಮದುವೆ ಎಲ್ಲಿ.?

ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್ ನಲ್ಲಿ ದಾಂಪತ್ಯ ಜೀವನಕ್ಕೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಕಾಲಿಡಲಿದ್ದಾರೆ. ಚಂದನ್ ಶೆಟ್ಟಿ ಆಸೆಯಂತೆ, ನಿವೇದಿತಾ ಗೌಡ ಕನಸಿನಂತೆ ಮದುವೆ ಗ್ರ್ತಾಂಡ್ ಆಗಿ ನಡೆಯಲಿದೆ. ಮದುವೆ ತಯಾರಿಯಲ್ಲಿ ಇಬ್ಬರ ಕುಟುಂಬದವರೂ ಬಿಜಿಯಾಗಿದ್ದಾರೆ.

ಭಾವಿ ಪತ್ನಿಗೆ ಸರ್ಪ್ರೈಸ್ ಕೊಟ್ಟಿದ್ದ ಚಂದನ್ ಶೆಟ್ಟಿ

ಭಾವಿ ಪತ್ನಿಗೆ ಸರ್ಪ್ರೈಸ್ ಕೊಟ್ಟಿದ್ದ ಚಂದನ್ ಶೆಟ್ಟಿ

ಹೊಸ ವರ್ಷದಂದು ನಿವೇದಿತಾ ಗೌಡ ಜೊತೆಗೆ ಚಂದನ್ ಶೆಟ್ಟಿ ಇರಲಿಲ್ಲ. ಕೆನಡಾಗೆ ಹಾರಿದ್ದ ಚಂದನ್ ಶೆಟ್ಟಿ, ಅಲ್ಲಿ ಸ್ನೋ ಏಂಜಲ್ ತಯಾರಿಸಿ ಭಾವಿ ಪತ್ನಿ ನಿವೇದಿತಾ ಗೌಡಗೆ ಸರ್ಪ್ರೈಸ್ ನೀಡಿದ್ದರು.

ವಯಸ್ಸಿನ ಅಂತರ

ವಯಸ್ಸಿನ ಅಂತರ

ಕನ್ನಡ ರಾಪರ್ ಚಂದನ್ ಶೆಟ್ಟಿಗೆ 30 ವರ್ಷ. ಇನ್ನೂ 20ರ ಆಸುಪಾಸಿನಲ್ಲಿದ್ದಾರೆ ನಿವೇದಿತಾ ಗೌಡ. ಇಬ್ಬರ ನಡುವೆ ಸುಮಾರು 10 ವರ್ಷಗಳ ವಯಸ್ಸಿನ ಅಂತರವಿದೆ. ವಯಸ್ಸಿನ ಗ್ಯಾಪ್ ಬಗ್ಗೆ ಯಾರು ಏನೇ ಟ್ರೋಲ್ ಮಾಡಿದರೂ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ತಲೆ ಕೆಡಿಸಿಕೊಂಡಿಲ್ಲ. ಪ್ರೀತಿಯ ಅಲೆಯಲ್ಲಿ ತೇಲುತ್ತಿರುವ ಈ ಜೋಡಿ ಇನ್ನೊಂದು ತಿಂಗಳಲ್ಲಿ ದಂಪತಿಗಳಾಗಲಿದ್ದಾರೆ.

More from Filmibeat

English summary
Chandan Shetty and Niveditha Gowda to get married on Feb 25th and 26th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X