ಹನಿಮೂನ್‌ ಗೆ ಅಡ್ಡಿಪಡಿಸಿದ ಕೊರೊನಾ ಬಗ್ಗೆ ಚಂದನ್-ನಿವೇದಿತ ಗೌಡ ಹಾಡು

ಮದುವೆಯಾಗಿ ಹನಿಮೂನ್‌ ಗೆ ಹೋಗಿದ್ದ ಚಂದನ್ ಶೆಟ್ಟಿ-ನಿವೇದಿತಾ ಗೌಡ ಅವರು ತಮ್ಮ ಪ್ರವಾಸವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ವಾಪಸ್ಸಾಗುವಂತೆ ಮಾಡಿತು ಕೊರೊನಾ ಭೀತಿ.

ಇದೀಗ ಈ ಯುವ ಜೋಡಿ ಮನೆಯಲ್ಲೇ ಇದ್ದು, ಕ್ವಾಲಿಟಿ ಟೈಂ ಕಳೆಯುತ್ತಿದ್ದಾರೆ. ಇದೇ ಸಮಯದಲ್ಲಿ ಚಂದನ್ ಶೆಟ್ಟಿ-ನಿವೇದಿತ ಗೌಡ ಅವರು ಕೊರೊನಾ ಬಗ್ಗೆ ಹಾಡೊಂದನ್ನು ಹಾಡಿದ್ದಾರೆ.

ರ್ಯಾಪರ್ ಆಗಿರುವ ಚಂದನ್ ಶೆಟ್ಟಿ ಕೊರೊನಾ ಬಗ್ಗೆ ತಮ್ಮದೇ ಶೈಲಿಯಲ್ಲಿ ಹಾಡು ಹಾಡಿದ್ದು, ನಿವೇದಿತಾ ಗೌಡ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಕುಡುಕ್ರಿಗೆ ಸಾಂತ್ವನ ಹೇಳಿರುವ ಚಂದನ್ ಶೆಟ್ಟಿ

ಕುಡುಕ್ರಿಗೆ ಸಾಂತ್ವನ ಹೇಳಿರುವ ಚಂದನ್ ಶೆಟ್ಟಿ

''ಎಣ್ಣೆ ಸಪ್ಲೈ ಮಾಡ್ಬೋದೇನೋ ಕುಡುಕ್ರು ಸ್ವಲ್ಪ ತಡ್ಕಳಿ, ಪೊಲೀಸರ ಲಾಠಿ ತಿಂದೋರು, ನೋವಿಗೆ ಮುಲಾಮು ಹಚ್ಕೊಳಿ..'' ಎಂದು ಹಾಡಿನ ಮೂಲಕ ಸಾಂತ್ವನ ಹೇಳಿದ್ದಾರೆ ಚಂದನ್ ಶೆಟ್ಟಿ.

ಮನೇಲಿರಿ, ಇಲ್ಲ ಸ್ಮಶಾನ ಸೇರಿ

ಮನೇಲಿರಿ, ಇಲ್ಲ ಸ್ಮಶಾನ ಸೇರಿ

''ನಾವೆಲ್ಲಾ ಮನೇಲಿ ಇರೋಣ, ಹೊರಗ್ಬಂದ್ರೆ ಸ್ಮಶಾನ, ಎರಡ್‌ ಸಲ ಮಾಡ್ಕಳಿ ಸ್ನಾನ, ತುಂಬಾ ಡೇಂಜರ್ರು ಕಣ್ರೊ ಈ ಕೊರೊನಾ'' ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ ಚಂದನ್ ಶೆಟ್ಟಿ.

ಕ್ಯೂಟ್ ಆಗಿ ಹೆಜ್ಜೆ ಹಾಕಿದ್ದಾರೆ ನಿವೇದಿತಾ ಗೌಡ

ಚಂದನ್ ಶೆಟ್ಟಿ ಹಾಡಿರುವ ಹಾಡಿಗೆ ಪಕ್ಕದಲ್ಲೇ ನಿಂತು ಕ್ಯೂಟ್ ಆಗಿ ಹೆಜ್ಜೆ ಹಾಕಿದ್ದಾರೆ ಪತ್ನಿ ನಿವೇದಿತಾ ಗೌಡ. ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿರುವ ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ.

ಹನಿಮೂನ್ ಅರ್ಧಕ್ಕೆ ಮೊಟಕುಗೊಳಿಸಿ ಬಂದ ಜೋಡಿ

ಹನಿಮೂನ್ ಅರ್ಧಕ್ಕೆ ಮೊಟಕುಗೊಳಿಸಿ ಬಂದ ಜೋಡಿ

ಚಂದನ್-ನಿವೇದಿತಾ ಗೌಡ ಅವರುಗಳು ಕೊರೊನಾ ಭೀತಿ ವಿಶ್ವಕ್ಕೆ ಹರಡುವ ವೇಳೆಯಲ್ಲಿಯೇ ಹನಿಮೂನ್‌ ಗೆಂದು ತೆರಳಿದ್ದರು. ಅವರು ಆಮ್‌ಸ್ಟರ್‌ಡಾಮ್‌ ಗೆ ಹೋಗಿ ಅಲ್ಲಿಂದ ಇಟಲಿಗೆ ಪ್ರವಾಸ ಹೋಗುವ ಯೋಜನೆಯಲ್ಲಿದ್ದರು. ಆದರೆ ಅವರು ಇಟಲಿಗೆ ಹೋಗುವ ಮುನ್ನವೇ ಅಲ್ಲಿ ಕೊರೊನಾ ಕಾಣಿಸಿಕೊಂಡ ಕಾರಣ ಆಮ್‌ಸ್ಟರ್‌ಡಾಂ ನಿಂದ ವಾಪಸ್ ಆದರು.

More from Filmibeat

English summary
Chandan Shetty sang a song about Coronavirus and Niveditha Gowda dances for the song. Video went viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X