ಎರಡನೇ ಮದುವೆಗೆ ಕೊನೆಗೂ ರೆಡಿಯಾದ ಚಂದನ್ ಶೆಟ್ಟಿ..!

ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಆದರೆ ಕೆಲ ಒಮ್ಮೆ ಈ ಜೀವನದಲ್ಲಿ ತಿರುವು ಬರುತ್ತವೆ. ನಂಬಿಕೆ-ಅಪನಂಬಿಕೆ ಇತ್ಯಾದಿ ವಿಚಾರಗಳಿಂದ ಈ ಸಂಬಂಧ ಮುರಿದು ಬೀಳುತ್ತೆ. ಹಾಗಂಥ, ಜೀವನ ಮುಗಿದೇಹೋಯ್ತು ಅಂತೇನು ಇಲ್ಲ.ಕೆಲವರು ಬದುಕಿನಲ್ಲಿ ಹಳೆಯದನ್ನೆಲ್ಲ ಮರೆತು ಮುನ್ನಡೆಯುತ್ತಾರೆ. ಏಕಾಂಗಿಯಾಗಿರಲು ಬಯಸುತ್ತಾರೆ.ಮುಂದಿನ ಜೀವನವನ್ನು ಖುಷಿ ಖುಷಿಯಾಗಿ ಕಳೆಯಲು ಇಷ್ಟ ಪಡುತ್ತಾರೆ.

ಇನ್ನು ಕೆಲವರು ಸಮಯ-ಸಂದರ್ಭ ಕೂಡಿ ಬಂದಾಗ ಎರಡನೇ ಮದುವೆಯಾಗುವ ಆಲೋಚನೆ ಮಾಡುತ್ತಾರೆ. ಇಂದಲ್ಲ, ನಾಳೆ ಹೊಸ ಬದುಕು ಶುರು ಮಾಡಬೇಕೆಂಬ ನಿರ್ಧಾರವನ್ನು ಮಾಡಿರುತ್ತಾರೆ. ಸದ್ಯ ಈ ಸಾಲಿಗೆ ಈಗ ಚಂದನ್ ಶೆಟ್ಟಿ ಕೂಡ ಸೇರಿಕೊಂಡಿದ್ದಾರೆ. ಎರಡನೇ ಮದುವೆಯ ಕುರಿತು ಚಂದನ್ ಮಾತನಾಡಿದ್ದಾರೆ.

Chandan Shetty Opens Up About Second Marriage But There s a Condition

ಹೌದು, ಅಸಲಿಗೆ ನಿವೇದಿತಾ ಗೌಡ ಅವರಿಂದ ಚಂದನ್ ಶೆಟ್ಟಿ ದೂರವಾದ ನಂತರ ಅನೇಕರಿಗೆ ಚಂದನ್ ಶೆಟ್ಟಿ ಎರಡನೇ ಮದುವೆ ಕುರಿತು ಚಿಂತೆ ಶುರುವಾಗಿದೆ. ಇದಕ್ಕೆ ಪುರಾವೆ ಎನ್ನುವಂತೆ ಕಳೆದ ಹನ್ನೊಂದು ತಿಂಗಳಿನಲ್ಲಿ ತಮ್ಮ ಚಿತ್ರ ಮತ್ತು ಹಾಡುಗಳ ವಿಚಾರಗಳನ್ನು ಹಂಚಿಕೊಳ್ಳುವುದಕ್ಕಿಂತ ವಿಚ್ಛೇದನ ಮತ್ತು ಎರಡನೇ ಮದುವೆ ಕುರಿತು ಹಲವು ಬಾರಿ ಮಾತನಾಡಿದ್ದಾರೆ. ಹೋದಲ್ಲಿ ಬಂದಲ್ಲಿ ಇವರಿಗೆ ಎರಡನೇ ಮದುವೆಯ ಪ್ರಶ್ನೆಯನ್ನೇ ಕೇಳಲಾಗುತ್ತಿದೆ.

ಇನ್ನು, ಇದು ಸಾಲದು ಎನ್ನುವಂತೆ ಸಲಗ ಸುಂದರಿ ಸಂಜನಾ ಆನಂದ್ ಜೊತೆ ಕೂಡ ಚಂದನ್ ಶೆಟ್ಟಿ ಅವರ ಮದುವೆಯನ್ನು ಅನೇಕರು ಮಾಡಿಸಿದ್ದಾರೆ. ನಮ್ಮ ನಡುವೆ ಆ ತರಹದ ಸಂಬಂಧವೇನು ಇಲ್ಲ ಎಂದು ಇಬ್ಬರು ಸ್ಪಷ್ಟೀಕರಣ ನೀಡಿದರು ಕೂಡ ಇವತ್ತು ಕೂಡ ಈ ವಿಚಾರದ ಕುರಿತು ಚರ್ಚೆ ಮುಕ್ತಾಯವಾಗಿಲ್ಲ. ಹೀಗಿರುವಾಗ ಇದೀಗ ಚಂದನ್ ಶೆಟ್ಟಿ ಮತ್ತೊಮ್ಮೆ ತಮ್ಮ ಎರಡನೇ ಮದುವೆಯ ಕುರಿತು ಮಾತನಾಡಿದ್ದಾರೆ. ಮೊದಲ ಬಾರಿ ಮಾಡಿದ ತಪ್ಪನ್ನೇ ಮತ್ತೆ ಮಾಡಲು ಇಷ್ಟ ಇಲ್ಲ ಎಂದು ಹೇಳಿದ್ದಾರೆ.

ಈ ಕುರಿತು ವಿಜಯವಾಣಿ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿರುವ ಚಂದನ್ ಶೆಟ್ಟಿ ಎಲ್ಲ ತಂದೆ ತಾಯಿಯರಿಗೆ ಇರುವಂತೆ ನನ್ನ ತಂದೆ ತಾಯಿಗೆ ಕೂಡ ನನ್ನ ವಿಚಾರದಲ್ಲಿ ಕಾಳಜಿ ಇದ್ದೇ ಇದೆ, ನಾನು ಮದುವೆಯಾಗಬೇಕು, ಜೀವನದಲ್ಲಿ ಮುಂದಕ್ಕೆ ಹೋಗಬೇಕೆನ್ನುವ ಆಸೆ ಇದೆ ಎಂದು ಹೇಳಿದ್ದಾರೆ.

ಎಲ್ಲರಂತೆ ಅವರು ಕೂಡ ನಮಗೂ ವಯಸ್ಸಾಯ್ತು ಎಂಬ ಭಾವನಾತ್ಮಕವಾದ ಡೈಲಾಗ್‌ಗಳನ್ನು ಹೇಳುತ್ತಾರೆ ಎಂದಿರುವ ಚಂದನ್ ನನಗೂ ಕೂಡ ಹೀಗೆ ಏಕಾಂಗಿಯಾಗಿ ಬದುಕಲು ಇಷ್ಟ ಇಲ್ಲ ಎಂದು ಹೇಳಿದ್ದಾರೆ. ಸರಿಯಾದ ಹುಡುಗಿ ಸಿಕ್ಕರೆ ನಾನು ಮದುವೆಯಾಗಲು ರೆಡಿ ಎಂದು ಹೇಳಿದ್ದಾರೆ.

ಇನ್ನು ತಾವು ಮದುವೆಯಾಗುವ ಹುಡುಗಿ ಹೇಗಿರಬೇಕು ಎಂದು ಕೂಡ ಹೇಳಿರುವ ಚಂದನ್ ಶೆಟ್ಟಿ, ಹುಡುಗಿ ಸಾಮಾನ್ಯವಾಗಿರಬೇಕು, ನನ್ನ ಅರ್ಥ ಮಾಡಿಕೊಳ್ಳಬೇಕು, ನಾನು ಮಾಡುವ ಪ್ರತಿಯೊಂದು ಕೆಲಸದಲ್ಲಿ ನನ್ನ ಬೆನ್ನೆಲುಬಾಗಿರಬೇಕು ಎಂದು ಹೇಳಿದ್ದಾರೆ. ಇನ್ನು, ಮದುವೆಯಾಗುವ ಹುಡುಗಿಯ ಮೇಲೆ ಚಿತ್ರರಂಗದ ನೆರಳಿರಬಾರದು ಎಂದು ಹೇಳಿರುವ ಚಂದನ್ ಶೆಟ್ಟಿ ಆಕೆ ಪಬ್ಲಿಕ್ ಲೈಫ್‌ನಲ್ಲಿ ಇರಬಾರದು ಎಂದು ಹೇಳಿದ್ದಾರೆ.

ತಮ್ಮ ಈ ನಿರ್ಧಾರದ ಹಿಂದಿನ ಕಾರಣವನ್ನು ಕೂಡ ಹೇಳಿರುವ ಚಂದನ್ ಶೆಟ್ಟಿ ಇಬ್ಬರು ಒಂದೇ ಕ್ಷೇತ್ರದಲ್ಲಿದ್ದರೆ ಇಬ್ಬರು ಕೆಲಸಗಳಲ್ಲಿ ಬ್ಯುಸಿಯಾಗಿರುತ್ತೇವೆ, ಪರಸ್ಪರ ಟೈಮ್ ಕೊಡಲು ಸಾಧ್ಯವಾಗುವುದಿಲ್ಲ ಆಗ ನಾವು ಭೇಟಿಯಾಗುವುದೇ ಕಷ್ಟವಾಗುತ್ತೆ ಎಂದು ಹೇಳಿದ್ದಾರೆ. ಹೀಗಾಗಿ ಪಬ್ಲಿಕ್ ಲೈಫ್‌ನಲ್ಲಿರುವ ಹುಡುಗಿ ಬೇಡ ಎಂದು ಹೇಳಿದ್ದಾರೆ. ಈ ಮೂಲಕ ನಿವೇದಿತಾ ಗೌಡ ಅವರ ಜೊತೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗಲಿಲ್ಲ ಎಂದು ಚಂದನ್ ಹೇಳಿದಂತೆ ಇದೆ. ತಮ್ಮ ಅನುಭವವನ್ನು ಪರೋಕ್ಷವಾಗಿ ಚಂದನ್ ಶೆಟ್ಟಿ ಹಂಚಿಕೊಂಡಂತೆ ಇದೆ.

ಸದ್ಯ ಚಂದನ್ ಶೆಟ್ಟಿ ಎರಡನೇ ಮದುವೆಯ ಕುರಿತು ಮಾತುಗಳನ್ನಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇವರ ಅಭಿಮಾನಿಗಳು ಹುಡುಗಿ ಯಾರಿರಬಹುದು ಎನ್ನುವ ಚರ್ಚೆಯನ್ನು ಶುರು ಮಾಡಿದ್ದಾರೆ. ಆದಷ್ಟು ಬೇಗ ಮದುವೆಯ ಸುದ್ದಿಯನ್ನು ಕೊಡಿ ಎಂದು ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Chandan Shetty, Kannada rapper and actor, shares his plans for a second marriage, but there’s a surprising catch. Discover what it is!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X