For Quick Alerts
  ALLOW NOTIFICATIONS  
  For Daily Alerts

  ಚಂದನ್ ಶೆಟ್ಟಿ ಫೇಸ್‌ಬುಕ್ ಖಾತೆ ಹ್ಯಾಕ್‌

  |

  ಸಂಗೀತ ನಿರ್ದೇಶಕ, ಗಾಯಕ ಚಂದನ್ ಶೆಟ್ಟಿಯ ಫೇಸ್‌ಬುಕ್ ಖಾತೆಯನ್ನು ಕೆಲವು ವಿದೇಶಿ ಪುಂಡರು ಹ್ಯಾಕ್ ಮಾಡಿದ್ದಾರೆ.

  Ayogya ಸಿನಿಮಾದ ಕ್ಲೈಮ್ಯಾಕ್ಸ್ ಸನ್ನಿವೇಶದ ತೆರೆ ಹಿಂದಿನ ದೃಶ್ಯ | Ayogya Climax Making | Filmibeat Kannada

  ಚಂದನ್ ಶೆಟ್ಟಿ ಫೇಸ್‌ಬುಕ್ ಖಾತೆಯಿಂದ ಲೈವ್ ಮಾಡಿದ ವಿದೇಶಿ ವ್ಯಕ್ತಿ, ಲೈವ್‌ನಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ. ಅಸಭ್ಯ ಚಿಹ್ನೆಗಳನ್ನು ತೋರಿ ಪುಂಡಾಟ ನಡೆಸಿದ್ದಾನೆ.

  ಶಿವಶರಣೆ ಶಂಕಮ್ಮ, ಮಲೆ ಮಾದಪ್ಪನಿಗೆ ಅಪಚಾರ: ಚಂದನ್ ಶೆಟ್ಟಿ ತಪ್ಪು ಮಾಡಿದ್ದು ಎಲ್ಲಿ?ಶಿವಶರಣೆ ಶಂಕಮ್ಮ, ಮಲೆ ಮಾದಪ್ಪನಿಗೆ ಅಪಚಾರ: ಚಂದನ್ ಶೆಟ್ಟಿ ತಪ್ಪು ಮಾಡಿದ್ದು ಎಲ್ಲಿ?

  30 ನಿಮಿಷಗಳ ವರೆಗೆ ಚಂದನ್ ಶೆಟ್ಟಿ ಫೇಸ್‌ಬುಕ್ ಖಾತೆಯಿಂದ ಲೈವ್ ನಡೆಸಿದ ವಿದೇಶಿ ಯುವಕ, ಚಿತ್ರ-ವಿಚಿತ್ರ ಗ್ರಾಫಿಕ್‌ ವೇಶಗಳನ್ನು ಧರಿಸಿ ಲೈವ್ ನೋಡುತ್ತಿರುವವರನ್ನು, ಕಮೆಂಟ್ ಮಾಡುತ್ತಿರುವವರನ್ನು ಅಣಕಿಸುವಂತೆ ವರ್ತಿಸಿದ.

  ಅಷ್ಟೆ ಅಲ್ಲದೆ, ಚಂದನ್ ಶೆಟ್ಟಿ ಫೇಸ್‌ಬುಕ್‌ನಿಂದಲೇ ಬೇರೆ ವ್ಯಕ್ತಿಗಳ ಚಿತ್ರವನ್ನೂ ಸಹ ಅಪ್‌ಲೋಡ್ ಮಾಡಿದ್ದಾನೆ ಈ ಹ್ಯಾಕರ್‌.

  ಹಣದ ಬೇಡಿಕೆ ಇಡಲಾಗುತ್ತದೆ

  ಹಣದ ಬೇಡಿಕೆ ಇಡಲಾಗುತ್ತದೆ

  ಸಾಮಾನ್ಯವಾಗಿ ಫೇಸ್‌ಬುಕ್‌ ಹ್ಯಾಕ್‌ಗಳಲ್ಲಿ ಹಣದ ಬೇಡಿಕೆ ಇಡಲಾಗುತ್ತದೆ. ಈಗಾಗಲೇ ಚಂದನ್ ಶೆಟ್ಟಿ ಖಾತೆಯು ಹ್ಯಾಕರ್‌ ಕೈಸೇರಿರುವ ಕಾರಣ. ಆತ ಹಣದ ಬೇಡಿಕೆ ಇಟ್ಟು ಖಾತೆಯನ್ನು ಮರಳಿ ಪಡೆಯುವಂತೆ ಸಂದೇಶ ಕಳಿಸಿರುವ ಸಾಧ್ಯತೆ ಇದೆ. ಹಲವಾರು ಪ್ರಕರಣಗಳಲ್ಲಿ ಈ ರೀತಿಯಾಗಿ ಆಗಿದೆ.

  ಚಂದನ್ ಶೆಟ್ಟಿ ಖಾತೆಯಿಂದ ಗೆಳೆಯರಿಗೆ ಸಂದೇಶ?

  ಚಂದನ್ ಶೆಟ್ಟಿ ಖಾತೆಯಿಂದ ಗೆಳೆಯರಿಗೆ ಸಂದೇಶ?

  ಚಂದನ್ ಶೆಟ್ಟಿ ಖಾತೆಯಿಂದ ಚಂದನ್ ಶೆಟ್ಟಿ ಫೇಸ್‌ಬುಕ್ ಗೆಳೆಯರಿಗೆ ಸಂದೇಶ ಕಳುಹಿಸಿ ಹಣಕ್ಕೆ ಬೇಡಿಕೆ ಇಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇತ್ತೀಚೆಗೆ ಇಂಥಹಾ ಕೆಲವು ಪ್ರಕರಣಗಳು ನಡೆದಿವೆ.

  ಜಿ-ಮೇಲ್ ಹ್ಯಾಕ್ ಆದರೆ ಇದೆ ನಿಜವಾದ ಸಂಕಷ್ಟ

  ಜಿ-ಮೇಲ್ ಹ್ಯಾಕ್ ಆದರೆ ಇದೆ ನಿಜವಾದ ಸಂಕಷ್ಟ

  ಫೇಸ್‌ಬುಕ್ ಹ್ಯಾಕ್‌ ತೀರಾ ಕಷ್ಟದ ಹ್ಯಾಕ್ ಅಲ್ಲ ಎನ್ನಲಾಗುತ್ತದೆ. ಆದರೆ ಆತಂಕ ಪಡಬೇಕಿರುವ ಸಂಗತಿಯೆಂದರೆ ಫೇಸ್‌ಬುಕ್‌ ನಲ್ಲಿ ನಮ್ಮ ಜಿ-ಮೇಲ್ ಖಾತೆ ಹಾಗೂ ಮೊಬೈಲ್ ಸಂಖ್ಯೆ ಮಾಹಿತಿ ಇರುತ್ತದೆ. ಯುಪಿಐ ಖಾತೆಗಳಿಗೂ ಮೊಬೈಲ್ ಸಂಖ್ಯೆ, ಜಿ-ಮೇಲ್ ಬಳಸುವುದು ಸಾಮಾನ್ಯ. ಹ್ಯಾಕರ್‌ ಜಿ-ಮೇಲ್ ಹಾಗೂ ಆ ಮೂಲಕ ಮೊಬೈಲ್ ಹ್ಯಾಕ್‌ ಮಾಡಿದರೆ ನಿಜವಾದ ಇಕ್ಕಟ್ಟು ಶುರುವಾಗುತ್ತದೆ.

  ಈಗಾಗಲೇ ಸಂಕಷ್ಟದಲ್ಲಿರುವ ಚಂದನ್ ಶೆಟ್ಟಿ

  ಈಗಾಗಲೇ ಸಂಕಷ್ಟದಲ್ಲಿರುವ ಚಂದನ್ ಶೆಟ್ಟಿ

  'ಕೋಲುಮಂಡೆ' ರೀಮಿಕ್ಸ್ ಹಾಡಿನಿಂದ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಚಂದನ್ ಶೆಟ್ಟಿ ಈಗ ಇದೊಂದು ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋಲುಮಂಡೆ ಹಾಡಿನಲ್ಲಿ ಶಿವಶರಣೆ ಶಂಕಮ್ಮ ಹಾಗೂ ಮಾದಪ್ಪನಿಗೆ ಅಪಮಾನ ಮಾಡಲಾಗಿದೆ ಎಂದು ಚಂದನ್ ಶೆಟ್ಟಿ ವಿರುದ್ಧ ದೂರು ನೀಡಲಾಗಿದೆ.

  English summary
  Singer, Music composer Chandan Shetty's Facebook account hacked by a foreign unknown fellow. He did live through Chandan Shetty's account.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X