Niveditha Gowda: ಹಾಟ್ ಅವತಾರದಲ್ಲಿ ನಿವೇದಿತಾ ಗೌಡ ಅಚ್ಚರಿಯ ಲುಕ್!
ಸಾಮಾಜಿಕ ಜಾತಾಣದಲ್ಲಿ ಅತಿ ಹೆಚ್ಚಾಗಿ ಸಕ್ರಿಯರಾಗಿರುವ ಸ್ಟಾರ್ ದಂಪತಿಗಳಲ್ಲಿ ನಿವೇದಿತಾ ಮತ್ತು ಚಂದನ್ ಜೋಡಿ ಕೂಡ ಒಂದು. ನಿವೇದಿತಾ ಗೌಡ ಫೋಟೊ ಮತ್ತು ವಿಡಿಯೋಗಳಿಗೆ ಹೆಚ್ಚು ಅಭಿಮಾನಿಗಳಿದ್ದಾರೆ. ನಿವೇದಿತಾ ಮುದ್ದು ಮುದ್ದಾಗಿ ಕನ್ನಡ ಮಾತನಾಡಿದರೆ ಸಾಕು, ಜನ ಮರುಳಾಗಿ ಬಿಡುತ್ತಾರೆ.
ಆದರೆ ಒಮ್ಮೊಮ್ಮೆ ಚಂದನ್ ಮತ್ತು ನಿವೇದಿತಾ ಟ್ರೋಲ್ ಆಗುತ್ತಾರೆ. ಇತ್ತೀಚೆಗೆ ಟವೆಲ್ ಕಳಚಿ ಟ್ರೋಲ್ ಆಗಿದ್ದರು. ಆದರೆ ಸದಾ ಒಂದಲ್ಲಾ ಒಂದು ಭಿನ್ನ, ವಿಭಿನ್ನ ವಿಡಿಯೋ ಮೂಲಕ ಸದ್ದು ಮಾಡುತ್ತಲೆ ಇರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟೀವ್ ಆಗಿದ್ದಾರೆ ನಿವೇದಿತಾ. ಜೀವನ ಶೈಲಿಯನ್ನು, ಉಡುಗೆ ತೊಡುಗೆಯ ಪರಿಯನ್ನು ಜನರ ಎದುರು ಯುಟ್ಯೂಬ್ ಮೂಲಕ ಬಿಚ್ಚಿಡುತ್ತಿದ್ದಾರೆ ನಿವೇದಿತಾ. ಇವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ನಿವೇದಿತಾ ಹೇರ್‌ಸ್ಟೈಲ್ ಮತ್ತು ಗೆಟಪ್‌ಗೆ ಜನ ಫಿದಾ ಆಗಿದ್ದಾರೆ. ಆಗಾಗಾ ಸೋಶಿಯಲ್ ಮೀಡಿಯಾದಲ್ಲಿ ಹೊಚ್ಚ ಹೊಸ ಗೆಟಪ್‌ನಲ್ಲಿ ನೆಟ್ಟಿಗರಿಗೆ ದರ್ಶನ ಕೊಡುತ್ತಾರೆ. ಪತಿ ಚಂದನ್ ಶೆಟ್ಟಿ ಜೊತೆ ಕಾಣಿಸಿಕೊಳ್ಳುತ್ತಾರೆ. ಹಾಗೆ ಕೆಲವೊಮ್ಮೆ ವಿಭಿನ್ನ ಶೈಲಿಯ ಡ್ರೆಸ್‌ನಲ್ಲಿ ಮಿರಮಿರ ಮಿಂಚುತ್ತಾ ವಿಭಿನ್ನ ಗೆಟಪ್‌ನಲ್ಲಿ ಪೋಸ್ ಕೊಡುತ್ತಾರೆ.

ಕಪ್ಪು ಬಣ್ಣದ ಬಾಡಿಕಾನ್ ಡ್ರೆಸ್‌ನಲ್ಲಿ ನಿವೇದಿತಾ!
ನಿವೇದಿತಾ ಈಗ ಕಪ್ಪು ಬಣ್ಣದ ಬಾಡಿಕಾನ್ ಮ್ಯಾಕ್ಸಿಯಲ್ಲಿ ಕಾಣಿಸುತ್ತಿದ್ದಾರೆ. ಹೊಸ ಹೇರ್ ಸ್ಟೈಲ್, ಹೊಸ ಲುಕ್‌ನಲ್ಲಿ ಚೇರ್ ಮೇಲೆ ಕುಳಿತ ನಿವೇದಿತಾ ಕೊಂಚ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ನಿವೇದಿತಾ ಈ ಹಿಂದೆ ಹಲವು ಬಾರಿ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ಹೆಚ್ಚು ಹಾಟ್ ಆಗಿ ಫೋಸ್ ಕೊಟ್ಟಿದ್ದಾರೆ. ನಿವೇದಿತಾ ಈ ಹೊಸ ಅವತಾರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ವಿಡಿಯೋ ವೈರಲ್ ಲಿಸ್ಟ್ ಸೇರಿದೆ.
ನೀಳ ಕೇಶಕ್ಕೆ ನಿವೇದಿತಾ ಕತ್ತರಿ!
ನಿವೇದಿತಾಗಿಂತಲೂ ಆಕೆಯ ಉದ್ದನೆಯ ಕೇಶಕ್ಕೆ ಹೆಚ್ಚಿನ ಅಭಿಮಾನಿಗಳು ಇದ್ದಾರೆ. ಆದರೆ ಈಗ ಈಕೆಯ ಹೇರ್ ಸ್ಟೈಲ್ ಕೂಡ ಬದಲಾಗಿದೆ. ಈಗ ನಿವೇದಿತಾ ಉದ್ದನೆಯ ಕೂದಲನ್ನು ಕತ್ತರಿಸಿದ್ದಾರೆ. ಆದರೂ ನಿವೇದಿತಾಳ ಈ ಹೊಸ ಲುಕ್ ಆಕೆಯನ್ನು ಇಷ್ಟ ಪಡುವವರಿಗೆ ಇಷ್ಟ ಆಗಿದೆ. ಇದೇ ಕಾಸ್ಟ್ಯೂಮ್‌ನಲ್ಲಿ ನಿವೇದಿತಾ ಪತಿ ಚಂದನ್ ಜೊತೆಗೆ ಒಂದು ಸ್ಟೆಪ್ ಕೂಡ ಹಾಕಿದ್ದಾರೆ.
ಚಂದನ್ ಶೆಟ್ಟಿ ಜೊತೆಗೆ ನಿವೇದಿತಾ ಡ್ಯಾನ್ಸ್!
ಇದೇ ಹಾಟ್ ಲುಕ್‌ನಲ್ಲಿ ನಿವೇದಿತಾ ಎರಡು ವಿಡಿಯೋಗಳನ್ನು ಮಾಡಿದ್ದಾರೆ. ಒಮದು ವಿಡಿಯೋದಲ್ಲಿ ನಿವೇದಿತಾ ಮಾತ್ರ ಇದ್ದಾರೆ. ಇನ್ನೊಂದು ವಿಡಿಯೋದಲ್ಲಿ ನಿವೇದಿತಾ ಜೊತೆಗೆ ಚಂದನ್ ಶೆಟ್ಟಿ ಕೂಡ ಇದ್ದಾರೆ. ಈ ಜೋಡಿ ಈ ವಿಡಿಯೋದಲ್ಲಿ ಸಿಕ್ಕಾಪಟ್ಟೆ ಸ್ಟೈಲಿಸ್ ಆಗಿ ಕಾಣಿಸಿಕೊಂಡಿದೆ. ಅದರಲ್ಲೂ ನಿವೇದಿತಾ ಲುಕ್‌ಗೆ ಜನ ಫಿದಾ ಆಗಿದ್ದು, ಜೈಕಾರ ಹಾಕುತ್ತಾ ಇದ್ದಾರೆ.
ಆಗಾಗ ಟ್ರೋಲ್ ಆಗುವ ಜೋಡಿ!
ಚಂದನ್ ಶೆಟ್ಟಿ ನಿವೇದಿತಾ ವಿಡಿಯೋಗಳಿಗೆ ಎಷ್ಟು ಅಭಿಮಾನಿಗಳಿದ್ದಾರೋ, ಅಷ್ಟೆ ಕಾಲೆಳೆಯುವವರೂ ಇದ್ದಾರೆ. ಈ ಜೋಡಿಯ ಹಲವಾರು ವಿಡಿಯೋಗಳು ಆಗಾಗ ಟ್ರೋಲ್ ಆಗುತ್ತವೆ. ಆದರೂ ಕೂಡ ಇವರು ತಮ್ಮ ಅಭಿನಯದ ಮೂಲಕ, ಕ್ರಿಯೇಟಿವ್ ವಿಡಿಯೋಗಳ ಮೂಲಕ ಜನರನ್ನು ರಂಜಿಸುವುದನ್ನು ಬಿಟ್ಟಿಲ್ಲ.


Click it and Unblock the Notifications











