ಆ ಕಡೆ ಜಾಲಿ ಮೂಡ್‌ನಲ್ಲಿ ನಿವೇದಿತಾ ಗೌಡ ಈ ಕಡೆ ಸಂಕಷ್ಟದಲ್ಲಿ ಸಿಲುಕಿದ ಚಂದನ್ ಶೆಟ್ಟಿ ?
ಕಳ್ಳತನ ಎನ್ನುವುದು ಇವತ್ತು ಎಲ್ಲ ಕ್ಷೇತ್ರದಲ್ಲಿ ಕೂಡ ಇದೆ. ರಾಜಕೀಯ, ಶಿಕ್ಷಣ, ಚಿತ್ರರಂಗ ಹೀಗೆ ಎಲ್ಲದರಲ್ಲಿ ಕೂಡ ಒಬ್ಬರಿಲ್ಲೊಬ್ಬರು ಒಂದಿಲ್ಲೊಂದು ರೀತಿಯಲ್ಲಿ ಈ ಚಾಳಿಯನ್ನು ರೂಢಿಸಿಕೊಂಡಿರುತ್ತಾರೆ. ಸಮಯ ಬಂದಾಗ ಇವರ ಈ ಪರಿಪಾಠ ಬೆಳಕಿಗೆ ಬರುತ್ತೆ. ಸದ್ಯದ ಶಾಕಿಂಗ್ ವಿಚಾರ ಏನಂದರೆ ಕನ್ನಡ ಚಿತ್ರರಂಗದ ಪ್ರತಿಭಾವಂತ ಸಂಗೀತ ನಿರ್ದೇಶಕ-ಗಾಯಕ ಮತ್ತು ರ್ಯಾಪರ್ ಚಂದನ್ ಶೆಟ್ಟಿಯ ಮೇಲೆ ಈಗ ಈ ಕಳ್ಳತನದ ಆರೋಪವನ್ನು ಮಾಡಲಾಗಿದೆ.
ಹೌದು, ಡಬಾಡಬಾಡಬಾ ಡಬ್ಬಿ ಬಡೆಯುತ್ತಲೇ ಪ್ರಾಸ-ತ್ರಾಸಗಳನ್ನೆಲ್ಲ ಸೇರಿಸಿ ಹಾಡಿನ ಬಂಡಿಯನ್ನೇಳೆಯುವ ಚತುರ ಚಂದನ್ ಶೆಟ್ಟಿ. ಇನ್ನು ಆಲ್ಬಂ ಹಾಡನ್ನು ಸಿನಿಮಾ ಹಾಡಿಗೆ ಸರಿಗಟ್ಟುವಂತೆ ರೂಪಿಸುವುದು ಸುಲಭದ ಮಾತಲ್ಲ. ಆಲ್ಬಂಗೆ ಹಾಕಿದ ಬಂಡವಾಳ ಯಾವತ್ತು ವಾಪಸು ಬರುತ್ತೆ ಎನ್ನುವುದು ಕೂಡ ಗೊತ್ತಿರಲ್ಲ. ಆದರೂ ಕೂಡ ತಮ್ಮ ಹಾಡುಗಳಿಗೆ ರಷ್ಯನ್ ಡ್ಯಾನ್ಸರ್ಸ್‌ಗಳನ್ನೆಲ್ಲ ಕರೆಸಿ ಹಾಡನ್ನು ಮುಂದಿಡುವಲ್ಲಿ ಕೂಡ ಚಂದನ್ ನಿಪುಣರು.

ಇಂಥಾ ಚಂದನ್ ಶೆಟ್ಟಿ ತಮ್ಮ ಹಾಡನ್ನು ಕದ್ದಿದ್ದಾರೆ ಎನ್ನುವ ಆರೋಪವನ್ನು ಈಗ ಯುವರಾಜ್ ವೈಬುಲ್ ಮಾಡಿದ್ದಾರೆ. ಹೌದು, ಕಳೆದ ಡಿಸೆಂಬರ್ 27ರಂದು ಹೊಸ ವರ್ಷದ ಪ್ರಯುಕ್ತ ಚಂದನ್ ತಮ್ಮ ಹಾಡೊಂದನ್ನು ಬಿಡುಗಡೆ ಮಾಡಿದ್ದರು. ಈ ಹಾಡಿಗೆ ಇವರು ಇಟ್ಟಿರುವ ಹೆಸರು ಕಾಟನ್ ಕ್ಯಾಂಡಿ. ಚಂದನ್ ಜೊತೆ ಸುಷ್ಮಿತಾ ಗೋಪಿನಾಥ್ ಈ ಹಾಡಲ್ಲಿ ಹೆಜ್ಜೆ ಹಾಕಿದ್ದಾರೆ. ಸದ್ಯಕ್ಕೆ ಈ ಹಾಡು ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಗಮನವನ್ನು ಸೆಳೆಯುತ್ತಿದೆ.
ಆದರೆ ಈಗ ಈ ಹಾಡಿನ ಮೇಲೆ ಕೃತಿಚೌರ್ಯದ ಆರೋಪವನ್ನು ಹೊರಿಸಲಾಗಿದೆ. ಈ ಕುರಿತು ನ್ಯೂಸ್ 18 ಕನ್ನಡ, ನ್ಯಾಶನಲ್ Tv ,ರಿಪಬ್ಲಿಕ್ ಕನ್ನಡ ಸೇರಿ ಅನೇಕ ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನು ನೀಡಿರುವ ಯುವರಾಜ್ ವೈಬುಲ್ 2018ರಲ್ಲಿ ನಾನು ಮಾಡಿದ್ದ Y Bul ಹಾಡನ್ನೇ ಚಂದನ್ ನಕಲು ಮಾಡಿದ್ದಾರೆ ಎಂದು ಹೇಳಿದ್ದಾರೆ. ಹಾಡಿನ ಚರಣವನ್ನು ಯಥಾವತ್ತಾಗಿ ಕಾಪಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಡು ಬಿಡುಗಡೆಯಾದ ನಂತರವಷ್ಟೇ ಈ ವಿಚಾರ ನನಗೆ ಗೊತ್ತಾಯ್ತು ಇದಕ್ಕೆ ಸಂಬಂಧಿಸಿದ ಟ್ರೋಲ್‌ಗಳನ್ನು ನಾನು ಆ ನಂತರವೇ ನೋಡಿದ್ದು ಎಂದಿರುವ ಯುವರಾಜ್ ವೈ ಬುಲ್ ಆರಂಭದಲ್ಲಿ ನಮ್ಮ ಆಡಿಯೋ ಸಂಸ್ಥೆಯವರು ಕಾಪಿ ರೈಟ್ ಕೇಸ್ ಹಾಕೋಣ ಎಂದು ಹೇಳಿದ್ದರು ಆದರೆ ಆಗ ನಾನೇ ಬೇಡ ಎಂದಿದ್ದೆ ಆದರೆ ಈಗ ಕೈ ಮೀರಿದೆ ಎಂದಿದ್ದಾರೆ.

ಇನ್ನು, ನನ್ನ Y Bul ಹಾಡು ಮೂರೇ ಮೂರು ಪೆಗ್ಗಿನ ಕಾಪಿ ಎಂದು ಚಂದನ್ ಹೇಳ್ತಿದ್ದಾರೆ ಎನ್ನುವ ವಿಚಾರ ಕೂಡ ನನ್ನ ಕಿವಿಗೆ ಬಿದ್ದಿದೆ, ನಿಜಾ ಆ ಹಾಡನ್ನು ನಾನು ಮೂರೇ ಮೂರು ಪೆಗ್ ಹಾಡಿನ ಸ್ಫೂರ್ತಿಯಿಂದನೇ ಮಾಡಿದ್ದು ಆದರೆ ಕದ್ದಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಹಾಗೊಂದು ವೇಳೆ ನಾನು ಟ್ಯೂನ್ ಕದ್ದಿದ್ದರೆ ಚಂದನ್ ಶೆಟ್ಟಿ ಅವತ್ತೇ ನನ್ನ ಮೇಲೆ ಕೇಸ್ ಹಾಕಬಹುದಿತ್ತು. ಯಾಕೆ ಹಾಕಲಿಲ್ಲ ಎಂದು ಪ್ರಶ್ನೆಯನ್ನು ಮಾಡಿದ್ದಾರೆ. ಇಷ್ಟೆಲ್ಲ ಆದ ಮೇಲೆ ನಾನು ಬಿಡಲ್ಲ ನಾನು ಕಾಪಿ ರೈಟ್ಸ್ ಕೇಸ್ ಹಾಕಿಯೇ ಹಾಕ್ತಿನಿ ಎಂದು ರ್ಯಾಪರ್ ಯುವರಾಜ್ ವೈಬುಲ್ ನ್ಯೂಸ್ 18ಕನ್ನಡಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಆ ಕಾಲದಲ್ಲಿ ಅಂದರೆ 2018ರಲ್ಲಿ ಹನ್ನೆರಡು ಲಕ್ಷ ಖರ್ಚು ಮಾಡಿ ನಾನು ಹಾಡು ಮಾಡಿದ್ದೆ ಆದರೆ ನನಗೆ ಯಾವ ಲಾಭವೂ ಬರಲಿಲ್ಲ, ಆದರೆ ಅದೇ ಹಾಡನ್ನು ಚಂದನ್ ಶೆಟ್ಟಿ ಬಳಿಸಿಕೊಂಡಿದ್ದಾರೆ ಅವರಿಗೆ ವ್ಯಾಪಕವಾದ ಬೆಂಬಲ ಜನರಿದ ಸಿಗ್ತಿದೆ ಎಂದು ತಮ್ಮ ಬೇಸರವನ್ನು ರಿಪಬ್ಲಿಕ್ ಕನ್ನಡಗೆ ನೀಡಿದ ಸಂದರ್ಶನದಲ್ಲಿ ಹೊರ ಹಾಕಿದ್ದಾರೆ.
ರ್ಯಾಪರ್ ಯುವರಾಜ್ ವೈಬುಲ್ ಅವರ ಈ ಆರೋಪಕ್ಕೆ ಚಂದನ್ ಶೆಟ್ಟಿ ಇನ್ನು ಉತ್ತರ ನೀಡಿಲ್ಲ ಬದಲಿಗೆ ತಮ್ಮ ಹಾಡಿನಲ್ಲಿ ಹೆಜ್ಜೆ ಹಾಕಿರುವ ಸುಷ್ಮಿತಾ ಅವರ ಜೊತೆ ತಮ್ಮ ಕಾಟನ್ ಕ್ಯಾಂಡಿ ಹಾಡಿನ ರೀಲ್ಸ್‌ಗಳನ್ನು ಮಾಡುತ್ತಿದ್ದಾರೆ. ಹಾಡಿಗೆ ಸಿಕ್ಕಿರುವ ಮತ್ತು ಸಿಗುತ್ತಿರುವ ಪ್ರತಿಕ್ರಿಯೆಯಿಂದ ಪುಳಕಿತರಾಗಿದ್ದಾರೆ. ನಿಜಕ್ಕೂ ಯುವರಾಜ್ ವೈ ಬುಲ್ ಚಂದನ್ ಶೆಟ್ಟಿ ವಿರುದ್ಧ ಕಾಪಿ ರೈಟ್ ಕೇಸ್ ಹಾಕ್ತಾರಾ ಅಥವಾಆ ರಾಜಿಯಾಗ್ತಾರಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











