ಮಚ್ಚು ಹಿಡಿದು ರೀಲ್ಸ್ ಮಾಡಿದ ಬಿಗ್ ಬಾಸ್ ರಜತ್‌ನ 'ಮೋನಿಕಾ' ಆದ ನಿವೇದಿತಾ ಗೌಡ
ಹೆಸರು ಸಂಪಾದಿಸುವುದು ಕಷ್ಟ. ಆದರೆ ಅದೇ ಹೆಸರನ್ನು ಹಾಳು ಮಾಡಿಕೊಳ್ಳುವುದು ತುಂಬಾನೇ ಸುಲಭ. ಇದಕ್ಕೆ ನಿವೇದಿತಾ ಗೌಡ ಸದ್ಯದ ಅತ್ಯುತ್ತಮ ಉದಾಹರಣೆ. ಹೌದು, ಮೊದಲೆಲ್ಲ ಬಾರ್ಬಿ ಡಾಲ್, ನಿವ್ವಿ ಎಂದು ಪ್ರೀತಿಯಿಂದ ಕರೆಯುತ್ತಿದ್ದ ಜನರೇ ಇವತ್ತು ನಿವೇದಿತಾ ಗೌಡ ಅವರ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಮನಸೋ ಇಚ್ಛೆ ಕಮೆಂಟ್ ಮಾಡುತ್ತಾರೆ.
ಈ ಬೆಳವಣಿಗೆಗೆ ನಿವೇದಿತಾ ಗೌಡ ಅವರಲ್ಲದೇ ಬೇರೆ ಯಾರು ಕಾರಣ ಅಲ್ಲ. ಮೂರೊತ್ತು ಅರ್ಧಮರ್ಧ ಬಟ್ಟೆ ಹಾಕಿಕೊಂಡು ರೀಲ್ಸ್‌ಗಳನ್ನು ಮಾಡುತ್ತಾ, ಮಾತಿಗೂ ಮುನ್ನ ಬಾತ್‌ರೂಮ್ ಸೇರಿಕೊಂಡು ತಮ್ಮ ಇಮೇಜ್‌ನ ಡ್ಯಾಮೇಜ್ ಮಾಡಿಕೊಂಡ ನಿವೇದಿತಾ ಗೌಡ ಯಾರು ಏನೇ ಠೀಕಿಸಿದರೂ, ಕಾಲೆಳೆದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ 'ಉಫ್' ಅಂದು ಮುಂದೆ ಸಾಗುತ್ತಲೇ ಬಂದರು.

ಇಂಥಾ ನಿವೇದಿತಾ ಗೌಡ ಸದ್ಯ ಮಚ್ಚು ಹಿಡಿದು ರೀಲ್ಸ್ ಮಾಡಿ ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದ ಬಿಗ್ ಬಾಸ್ ಖ್ಯಾತಿಯ ರಜತ್ ಜೊತೆ ಕುಣಿದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೌದು, ರಜಿನಿಕಾಂತ್ ಅಭಿನಯದ ''ಕೂಲಿ'' ಚಿತ್ರ ತೆರೆಗೆ ಬರುತ್ತಿರುವುದು ಗೊತ್ತಿರುವುದೇ. ಸದ್ಯ ಈ ಚಿತ್ರದ ಹಾಡು ''ಮೋನಿಕಾ'' ಎಲ್ಲೆಡೆ ಸದ್ದು ಮಾಡುತ್ತಿದೆ. ಪೂಜಾ ಹೆಗ್ಡೆ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಆದರೆ.. ಮಲಯಾಳಂನ ನಟ ಸೌಬಿನ್ ಶಾಹಿರ್ ಡ್ಯಾನ್ಸ್ ಸಿನಿರಸಿಕರ ಗಮನ ಸೆಳೆಯುತ್ತಿದೆ. ಹಾಡು ಟ್ರೆಂಡಿಂಗ್‌ನಲ್ಲಿದೆ. ಇದೇ ಹಾಡಿಗೆ ನಿವೇದಿತಾ ಗೌಡ ಹೆಜ್ಜೆ ಹಾಕಿದ್ದಾರೆ. ಅಪರೂಪಕ್ಕೆ ಬಾತ್‌ರೂಮ್‌ದಿಂದ ಹೊರ ಬಂದು ಕುಣಿದಿದ್ದಾರೆ. ವಿಶೇಷ ಅಂದರೆ ನಿವೇದಿತಾ ಗೌಡ ಅವರ ಜೊತೆ ರಜತ್ ಕೂಡ ಈ ಸಾಂಗ್‌ಗೆ ಸ್ಟೆಪ್ ಹಾಕಿದ್ದಾರೆ.
ರಜತ್ ಮತ್ತು ನಿವೇದಿತಾ ಗೌಡ ಅವರ ಜೊತೆ ಧನರಾಜ್ ಮತ್ತು ಅಖಿಲಾ ಪ್ರಕಾಶ್ ಕೂಡ ಥೈಥಕ ಎಂದು ಕುಣಿದಿದ್ದಾರೆ. ಆ ಮೋನಿಕಾಳೇ ನಾಚುವಂತೆ ಎಲ್ಲರೂ ಸೊಂಟ ಬಳುಕಿಸಿದ್ದಾರೆ. ಸದ್ಯ ಈ ಚಿಕ್ಕ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೇವಲ 16 ಗಂಟೆಗಳಲ್ಲಿ 55,000ಕ್ಕೂ ಅಧಿಕ ಜನರ ಮೆಚ್ಚುಗೆಗೆ ಈ ವಿಡಿಯೋ ಪಾತ್ರವಾಗಿದೆ. ಇನ್ನು ಈ ವಿಡಿಯೋಗೆ ವ್ಯಕ್ತವಾದ ಕಮೆಂಟ್‌ಗಳ ಬಗ್ಗೆ ನಾವು ಹೇಳುವ ಅವಶ್ಯಕತೆ ಇಲ್ಲ.
ಇನ್ನುಳಿದಂತೆ ನಿವೇದಿತಾ ಗೌಡ ಸದ್ಯ ''ಕ್ವಾಟ್ಲೆ ಕಿಚನ್'' ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ತಿದ್ದಾರೆ. ಕೆಲ ವಾರಗಳ ಹಿಂದೆಯಷ್ಟೇ ಹಸುವಿನ ಹಾಲು ಕರೆಯುವ ಟಾಸ್ಕ್‌ನ್ನು ನಿವೇದಿತಾ ಅವರಿಗೆ ಕೊಡಲಾಗಿತ್ತು. ನಿವೇದಿತಾ ಗೌಡ ಟಾಸ್ಕ್ ವೇಳೆ ಸುಸ್ತಾಗಿ ಹೋಗಿದ್ದರು. ಈ ಮೂಲಕ ಟ್ರೋಲಿಗರಿಗೆ ಆಹಾರವೂ ಆಗಿದ್ದರು.

ಇನ್ನು ಬಿಗ್ ಬಾಸ್ ನಲ್ಲಿ ಅಬ್ಬರಿಸಿದ್ದ ರಜತ್ ಬುಜ್ಜಿ 'ಬಲರಾಮನ ದಿನಗಳು' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚಲು ಅಣಿಯಾಗಿದ್ದಾರೆ. 1980ರ ದಶಕದ ಕಥಾಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ರಜತ್, ಭೂಗತ ಲೋಕದ ಒಂದ್ಕಾಲದ ಡಾನ್ ಕೋಳಿ ಫಯಾಜ್ ಪಾತ್ರವನ್ನು ಮಾಡುತ್ತಿರಬಹುದು ಎನ್ನುವ ಅನುಮಾನ ಹಲವರದ್ದು. ಕೆಲ ದಿನಗಳ ಹಿಂದೆಯಷ್ಟೇ ಬಿಡುಗಡೆಯಾದ ಇವರ ಪಾತ್ರದ ಲುಕ್ ಈ ಮಾತುಗಳನ್ನೇ ಪುಷ್ಟಿಕರಿಸುವಂತೆ ಇದೆ. ವಿನೋದ್ ಪ್ರಭಾಕರ್ ಈ ಚಿತ್ರದ ನಾಯಕನಾದರೆ ''ಆ ದಿನಗಳು'' ಖ್ಯಾತಿಯ ಕೆ.ಎಂ.ಚೈತನ್ಯ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಜತ್ ಅವರ ಆಪ್ತ ಸ್ನೇಹಿತ ಮತ್ತು ಬಿಗ್ ಬಾಸ್ ಸ್ಫರ್ಧಿ ವಿನಯ್ ಗೌಡ ಕೂಡ ಪಾತ್ರವೊಂದನ್ನು ನಿರ್ವಹಿಸುತ್ತಿರುವುದು ವಿಶೇಷ.


Click it and Unblock the Notifications











