4ನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಪ್ರಶಸ್ತಿ: ಅತ್ಯುತ್ತಮ ನಟ ರಿಷಬ್, ನಟಿ ಶರ್ಮಿಳಾ, ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ
ಕಳೆದ 4 ವರ್ಷಗಳಿಂದ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯಿಂದ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಆಯಾ ವರ್ಷದ ಅತ್ಯುತ್ತಮ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕಳೆದ ವರ್ಷ ಬಹಳ ಸದ್ದು ಮಾಡಿದ 'ಕಾಂತಾರ' ಹಾಗೂ 'KGF- 2' ಸಿನಿಮಾಗಳು ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ರಿಷಬ್ ಶೆಟ್ಟಿ ಅತ್ಯುತ್ತಮ ನಟ, ಶರ್ಮಿಳಾ ಮಾಂಡ್ರೆ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ 4ನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭ ನಡೀತು. 'ಕಾಂತಾರ' ಚಿತ್ರದ ಶಿವನ ಪಾತ್ರಕ್ಕಾಗಿ 'ಅತ್ಯುತ್ತಮ ನಟ ಪ್ರಶಸ್ತಿಯನ್ನು ರಿಷಬ್ ಶೆಟ್ಟಿ ಪಡೆದರು. ಅತ್ಯುತ್ತಮ ಸಿನಿಮಾ ಪ್ರಶಸ್ತಿ ಕುಡ 'ಕಾಂತಾರ' ಪಾಲಾಗಿದೆ. ಅತ್ಯುತ್ತಮ ಸಂಗೀತ ಕಾಂತಾರ ಚಿತ್ರಕ್ಕಾಗಿ ಅಜನೀಶ್ ಲೋಕನಾಥ್ ಪಡೆದುಕೊಂಡರೆ, ಅತ್ಯುತ್ತಮ ಸಾಹಸ ಸಂಯೋಜನೆಗಾಗಿ ವಿಕ್ರಮ್ ಮೋರ್ ಸಾಹಸ ಸಂಯೋಜನೆಗಾಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಯಶ್ ಹಾಗೂ ಪ್ರಶಾಂತ್ ನೀಲ್ ಜೋಡಿಯ 'KGF'- 2 ಸಿನಿಮಾ ಒಟ್ಟು ಮೂರು ಪ್ರಶಸ್ತಿಗಳು ಬಾಚಿಕೊಂಡಿದೆ. ಛಾಯಾಗ್ರಹಣಕ್ಕಾಗಿ ಭುವನ್ ಗೌಡ, ಅತ್ಯುತ್ತಮ ಸಂಕಲನಕ್ಕಾಗಿ ಪ್ರಜ್ವಲ್ ಕುಲಕರ್ಣಿ ಹಾಗೂ ಅತ್ಯುತ್ತಮ ವಿಎಫ್‌ಎಕ್ಸ್‌ಗಾಗಿ ಉದಯ ರವಿ ಹೆಗಡೆ ಪ್ರಶಸ್ತಿ ಪಡೆದುಕೊಂಡಿದ್ದಾರೆ. 'ಗಾಳಿಪಟ'- 2 ಚಿತ್ರದ ನಟನೆಗಾಗಿ ಶರ್ಮಿಳಾ ಮಾಂಡ್ರೆಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತರೆ, '777 ಚಾರ್ಲಿ' ಚಿತ್ರದ ನಿರ್ದೇಶನಕ್ಕಾಗಿ ಕಿರಣ್ ರಾಜ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಈ ಬಾರಿ ಅಕಾಡೆಮಿಯಿಂದ 5 ವಿಶೇಷ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಯಿತು. ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಅತ್ಯುತ್ತಮ ನಿರ್ಮಾಪಕ (ಡೆಬ್ಯು), ಸಂಚಾರಿ ವಿಜಯ್ ಹೆಸರಿನಲ್ಲಿ ಅತ್ಯುತ್ತಮ ನಟ (ಡೆಬ್ಯು), ತ್ರಿಪುರಾಂಭ ಹೆಸರಿನಲ್ಲಿ ಅತ್ಯುತ್ತಮ ನಟಿ (ಡೆಬ್ಯು), ಶಂಕರ್‌ನಾಗ್ ಹೆಸರಿನಲ್ಲಿ ಅತ್ಯುತ್ತಮ ನಿರ್ದೇಶಕ (ಡೆಬ್ಯು) ಹಾಗೂ ಚಿ. ಉದಯ ಶಂಕರ್ ಹೆಸರಿನಲ್ಲಿ ಅತ್ಯುತ್ತಮ ಬರಹಗಾರ (ಡೆಬ್ಯು) ಪ್ರಶಸ್ತಿಯನ್ನು ನೀಡಿದ್ದು ವಿಶೇಷ. ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಮೋಹಕ ತಾರೆ ರಮ್ಯಾ, ನಟಿಯರಾದ ಕಾರುಣ್ಯ ರಾಮ್, ನಿರ್ದೇಶಕರಾದ ಬಿ.ಸುರೇಶ್, ರಾಜೇಂದ್ರ ಸಿಂಗ್ ಬಾಬು, ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಸಾಕಷ್ಟು ಗಣ್ಯರು ಭಾಗಿ ಆಗಿದ್ದರು.

ಗುರುಶಿಷ್ಯರು ಚಿತ್ರದ ಸಂಭಾಷಣೆಗಾಗಿ ಮಾಸ್ತಿ, ತುರ್ತು ನಿರ್ಗಮನ ಚಿತ್ರದ ನಟನೆಗಾಗಿ ಅತ್ಯುತ್ತಮ ಪೋಷಕ ನಟಿಯಾಗಿ ಸುಧಾರಾಣಿ, ವ್ಹೀಲ್ ಚೇರ್ ರೋಮಿಯೋ ಚಿತ್ರಕ್ಕಾಗಿ ಸುಚೇಂದ್ರ ಪ್ರಸಾದ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇನ್ನುಳಿದಂತೆ ಸ್ಮೈಲ್ ಶ್ರೀನು, ಬಿ. ಎಸ್. ಲಿಂಗದೇವರು, ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ.ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸೇರಿದಂತೆ ಹಲವರು ಕಾರ್ಯಕ್ರಮಕ್ಕೆ ಸಾಕ್ಷಿ ಆದರು.
4ನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ
ಅತ್ಯುತ್ತಮ ಚಿತ್ರ
ಕಾಂತಾರ
ಅತ್ಯುತ್ತಮ ನಿರ್ದೇಶಕ
ಕಿರಣ್ ರಾಜ್ (ಚಾರ್ಲಿ)
ಅತ್ಯುತ್ತಮ ನಾಯಕ
ರಿಷಬ್ ಶೆಟ್ಟಿ (ಕಾಂತಾರ)
ಅತ್ಯುತ್ತಮ ನಾಯಕಿ
ಶರ್ಮಿಳಾ ಮಾಂಡ್ರೆ (ಗಾಳಿಪಟ 2)
ಅತ್ಯುತ್ತಮ ಸಂಭಾಷಣೆ
ಮಾಸ್ತಿ (ಗುರು ಶಿಷ್ಯರು)
ಅತ್ಯುತ್ತಮ ಪೋಷಕ ನಟ
ಸುಚೇಂದ್ರ ಪ್ರಸಾದ್ (ವ್ಹೀಲ್ ಚೇರ್ ರೋಮಿಯೋ)
ಅತ್ಯುತ್ತಮ ಪೋಷಕ ನಟಿ
ಸುಧಾರಾಣಿ (ತುರ್ತು ನಿರ್ಗಮನ)
ಅತ್ಯುತ್ತಮ ಚಿತ್ರಕಥೆ
ಡಾರ್ಲಿಂಗ್ ಕೃಷ್ಣ (ಲವ್ ಮಾಕ್ಟೆಲ್ 2)
ಅತ್ಯುತ್ತಮ ಬಾಲನಟ/ನಟಿ
ಶಾರ್ವರಿ (ಚಾರ್ಲಿ)
ಅತ್ಯುತ್ತಮ ಸಂಗೀತ
ಕಾಂತಾರ (ಅಜನೀಶ್)
ಅತ್ಯುತ್ತಮ ಹಿನ್ನೆಲೆ ಸಂಗೀತ
ಅನೂಪ ಸೀಳೀನ್ (ಮಾನ್ಸೂನ್ ರಾಗ)
ಅತ್ಯುತ್ತಮ ಚಿತ್ರ ಸಾಹಿತ್ಯ
ಶಶಾಂಕ (ಲವ್ 350)
ಅತ್ಯುತ್ತಮ ಗಾಯಕ
ಮೋಹನ್ (ಜುಂಜಪ್ಪ, ವೇದ)
ಅತ್ಯುತ್ತಮ ಗಾಯಕಿ
ಐಶ್ವರ್ಯ ರಂಗರಾಜ್ (ಏಕ್ ಲವ್ ಯಾ)
ಅತ್ಯುತ್ತಮ ಛಾಯಾಗ್ರಹಣ
ಭುವನ್ ಗೌಡ (ಕೆಜಿಎಫ್ 2)
ಅತ್ಯುತ್ತಮ ಸಂಕಲನ
ಉಜ್ವಲ್ ಕುಲಕರ್ಣಿ (ಕೆಜಿಎಫ್2)
ಅತ್ಯುತ್ತಮ ಕಲಾ ನಿರ್ದೇಶನ
ಶಿವಕುಮಾರ (ವಿಕ್ರಾಂತ ರೋಣ)
ಅತ್ಯುತ್ತಮ ನೃತ್ಯ ನಿರ್ದೇಶನ
ಮೋಹನ್ (ಏಕ್ ಲವ್ ಯಾ, ಮೀಟ್ ಮಾಡೋಣ)
ಅತ್ಯುತ್ತಮ ಸಾಹಸ
ವಿಕ್ರಮ್ ಮೋರ್ (ಕಾಂತಾರ)
ಅತ್ಯುತ್ತಮ ವಿಎಫ್ ಎಕ್ಸ್
ಉದಯ ರವಿ ಹೆಗಡೆ ಯೂನಿಫೈ ಮೀಡಿಯಾ (ಕೆಜಿಎಫ್2)
ಅತ್ಯುತ್ತಮ ನಟ (ಡೆಬ್ಯು)
ಪೃಥ್ವಿ ಶ್ಯಾಮನೂರು (ಪದವಿ ಪೂರ್ವ)
ಅತ್ಯುತ್ತಮ ನಟಿ (ಡೆಬ್ಯು)
ಯಶಾ ಶಿವಕುಮಾರ್ (ಮಾನ್ಸನ್ ರಾಗ)
ಅತ್ಯುತ್ತಮ ನಿರ್ದೇಶಕ (ಡೆಬ್ಯು)
ಶ್ರೀಧರ್ ಶಿಕಾರಿಪುರ (ಧರಣಿ ಮಂಡಲ ಮಧ್ಯದೊಳಗೆ)
ಅತ್ಯುತ್ತಮ ನಿರ್ಮಾಪಕ (ಡೆಬ್ಯು)
ಪವನ್ ಒಡೆಯರ್ (ಡೊಳ್ಳು)
ಅತ್ಯುತ್ತಮ ಬರಹಗಾರ (ಡೆಬ್ಯು)
ಶ್ರೀಧರ್ ಶಿಕಾರಿಪುರ (ಧರಣಿ ಮಂಡಲ ಮಧ್ಯದೊಳಗೆ)
ಅತ್ಯುತ್ತಮ ಯುಟ್ಯೂಬರ್
ಕಲಾ ಮಾಧ್ಯಮ (ಪರಮೇಶ್ವರ ಕೆ.ಎಸ್)
ಅತ್ಯುತ್ತಮ ಮನರಂಜನಾ ಸಾಮಾಜಿಕ ಜಾಲತಾಣ
ವಿಕ್ಕಿ ಪೀಡಿಯಾ


Click it and Unblock the Notifications











