»   » ಸಣ್ಣಗಿದ್ದ ಕಾರಣಕ್ಕೆ ಯಾರಿಗೂ ಬೇಡವಾಗಿದ್ದ ಚಾಂದಿನಿ ಒಂದೂವರೆ ವರ್ಷ ಬ್ರೇಕ್‌ ನಂತರ ಮರಳಿ ಸಿನಿಮಾ ಜಗತ್ತಿಗೆ ಕಾಲಿರಿಸಿದ್ದಾರೆ ; ಅದೂ ದಪ್ಪಗಾದ ನಂತರ !

ಸಣ್ಣಗಿದ್ದ ಕಾರಣಕ್ಕೆ ಯಾರಿಗೂ ಬೇಡವಾಗಿದ್ದ ಚಾಂದಿನಿ ಒಂದೂವರೆ ವರ್ಷ ಬ್ರೇಕ್‌ ನಂತರ ಮರಳಿ ಸಿನಿಮಾ ಜಗತ್ತಿಗೆ ಕಾಲಿರಿಸಿದ್ದಾರೆ ; ಅದೂ ದಪ್ಪಗಾದ ನಂತರ !

Subscribe to Filmibeat Kannada

ಸ್ಥಳೀಯ ನಾಯಕಿಯರು ದುಂಡಗಾಗಿರುವ ಕಾರಣ ಬಾಲಿವುಡ್‌ ಬೆಡಗಿಯರು ಹಾಗೂ ಮಾಡೆಲ್‌ಗಳನ್ನು ದಕ್ಷಿಣ ಭಾರತದ ಸಿನಿಮಾ ಮಂದಿ ಎಳತರುತ್ತಿರುವ ಈ ಹೊತ್ತಲ್ಲಿ ಆಶ್ಚರ್ಯಕರ ಸುದ್ದಿಯಾಂದು ಹೊರ ಬಿದ್ದಿದೆ. ನಗುವ ಬಿಸಾಕಿ, ದೀಪಾವಳಿ ಎಂಬ ತೋಪು ಚಿತ್ರದ ನಂತರ ಮಾಯವಾಗಿದ್ದ ಇಂಟಲೆಕ್ಚುಯಲ್‌ ಹುಡುಗಿ ಚಾಂದಿನಿ ತೆಳ್ಳಗಿದ್ದ ಕಾರಣಕ್ಕೇ ಯಾರಿಗೂ ಬೇಡವಾಗಿದ್ದರಂತೆ! ಸಿನಿಮಾ ಲೋಕಕ್ಕೆ ಆಕೆಯ ಪುನರಾಗಮನವಾಗಿದೆ; ಅದೂ ಚೆನ್ನಾಗಿ ತಿಂದು ಉಂಡು ದಪ್ಪಗಾದ ನಂತರ.

ಓವರ್‌ ಟು ಚಾಂದಿನಿ....

ನಾನು ತೆಳ್ಳಗಿದ್ದ ಕಾರಣಕ್ಕೆ ಯಾರಿಗೂ ಬೇಡವಾಗಿದ್ದೆ. ಒಂದೂವರೆ ವರ್ಷ ಫಾರಿನ್‌ ಸುತ್ತಿದೆ. ಒಳ್ಳೆ ಅನುಭವ ಕಟ್ಟಿಕೊಂಡೆ. ನನ್ನ ಡ್ರಾಬ್ಯಾಕ್‌ ತಿಳಿದು, ಸರಿಪಡಿಸಿಕೊಂಡೆ. ಮೊನ್ನೆ ಕನ್ನಡಿ ನೋಡಿಕೊಂಡಾಗ, ಖುಷಿ ಆಯಿತು. ನನ್ನ ಕೆನ್ನೆಗಳು ತುಂಬಿಕೊಂಡಿವೆ. ಸಿನಿಮಾ ಮಂದಿಗೆ ಬೇಕಾದ ತುಂಬು ಫಿಗರ್‌ ಇದೀಗ ನನ್ನದು. ತಮಿಳು, ತೆಲುಗು ಹಾಗೂ ಮರಾಠಿಯಲ್ಲಿ ಅವಕಾಶಗಳು ಹುಡುಕಿಕೊಂಡು ಬಂದಿವೆ.

‘ಎ’, ‘ಎಕೆ- 47’ ಹೆಸರು ತಂದುಕೊಟ್ಟಿತು. ‘ದೀಪಾವಳಿ’ ಕೆಸರು ಮೆತ್ತಿತು. ಆಮೇಲೆ ಸಿನಿಮಾದೋರಿಗೆ ನಾನು ಬೇಡವಾದೆ. ಚಿಂತೆಯಿಲ್ಲ, ನಾನು ಸಮಯ ಹಾಳು ಮಾಡಿಲ್ಲ. ಸಾಕಷ್ಟು ಗಳಿಸಿದ್ದೇನೆ. ಆದರೆ, ಕನ್ನಡದೋರಿಗೆ ಅದ್ಯಾಕೋ ನಾನು ಕಾಣುತ್ತಿಲ್ಲ.

ಚಾಂದಿನಿಯೇನೋ ಮರಳಲು ಸಿದ್ಧರಿದ್ದಾರೆ. ಆದರೆ, ಸ್ಯಾಂಡಲ್‌ವುಡ್‌ ದುಖಾನಿನ ಪ್ರತಿಧ್ವನಿ ಹೇಳುತ್ತಿದೆ, ಆ ಹುಡುಗಿಗೆ ಕೊಬ್ಬು ಜಾಸ್ತಿ ! ತೆಳ್ಳಗಿನ ಚಾಂದಿನಿ ದಪ್ಪಗಾದಂತೆ, ಸ್ಯಾಂಡಲ್‌ವುಡ್‌ನವರು ಆಕೆಯನ್ನು ಯಾಕೆ ಮೂಸುತ್ತಿಲ್ಲ ಎಂಬುದನ್ನು ಅರಿತು, ಆ ಇಗೋ ಇಂದ ಹೊರಬರಲಿ. ಅಂದಹಾಗೆ, ಚಾಂದಿನಿ ಹೆಸರಲ್ಲಿ ಕೊಂಚ ಆಲ್ಟ್ರೇಷನ್‌- ಚಾಂದಿನಿ ಸರಸೂ. ಅದೃಷ್ಟ ಖುಲಾಯಿಸಲಿ ಅಂತ ಅಮ್ಮನ ಹೆಸರನ್ನು ಪಕ್ಕದಲ್ಲಿ ಸೇರಿಸಿಕೊಂಡಿದ್ದಾರೆ ಅಷ್ಟೆ !

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada