twitter
    For Quick Alerts
    ALLOW NOTIFICATIONS  
    For Daily Alerts

    ಈ ಪಾತ್ರಧಾರಿಯನ್ನು ಗುರುತಿಸಿ: 'ತ್ರಿಕೋನ' ಚಿತ್ರದ ವಿಭಿನ್ನ ಮೋಷನ್ ಪೋಸ್ಟರ್

    |

    ಕನ್ನಡದಲ್ಲಿ ಪ್ರಯೋಗಾತ್ಮಕ ಚಿತ್ರಗಳಿಗೆ ಕೊರತೆಯಿಲ್ಲ. ಅನೇಕ ಹೊಸ ಪ್ರತಿಭೆಗಳು ವಿಭಿನ್ನ ಕಥೆ, ನಿರೂಪಣೆಯ ಸಿನಿಮಾಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ಮತ್ತೊಂದು ಸೇರ್ಪಡೆ 'ತ್ರಿಕೋನ'. 2014ರಲ್ಲಿ ಎರಡೇ ಪಾತ್ರಗಳನ್ನಿಟ್ಟುಕೊಂಡು '143' ಎಂಬ ವಿಭಿನ್ನ ಪ್ರಯೋಗದ ಸಿನಿಮಾ ಮಾಡಿದ್ದ ನಿರ್ದೇಶಕ ಚಂದ್ರಕಾಂತ್, ಸುದೀರ್ಘ ಅಂತರದ ಬಳಿಕ ಮತ್ತೊಂದು ಚಿತ್ರ ನಿರ್ದೇಶಿಸಿದ್ದಾರೆ.

    'ತ್ರಿಕೋನ' ಸಿನಿಮಾದ ಕುತೂಹಲಕಾರಿ ಮೋಷನ್ ಪೋಸ್ಟರ್ ಅನ್ನು ಚಿತ್ರತಂಡ 'ಫಿಲ್ಮಿಬೀಟ್' ವೆಬ್‌ಸೈಟ್‌ನ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆ ಮಾಡಿದೆ. ಈ ಮೋಷನ್ ಪೋಸ್ಟರ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರದ ಬಗ್ಗೆ ಕುತೂಹಲ ಕೆರಳಿಸಿದೆ.

    ಭಾರತೀಯ ಚಿತ್ರರಂಗದಲ್ಲಿಯೇ ವಿನೂತನ ಪ್ರಯೋಗ ಮಾಡಿದ ಕನ್ನಡ ಚಿತ್ರಭಾರತೀಯ ಚಿತ್ರರಂಗದಲ್ಲಿಯೇ ವಿನೂತನ ಪ್ರಯೋಗ ಮಾಡಿದ ಕನ್ನಡ ಚಿತ್ರ

    ಈ ಪೋಸ್ಟರ್‌ನಲ್ಲಿ ಪರಿಚಿತ ಕಲಾವಿದರ ಚಿತ್ರಗಳಿವೆ. ಆದರೆ ಅದರಲ್ಲಿ ಒಂದು ಪಾತ್ರವನ್ನು ನೀವು ಗುರುತಿಸುವುದು ಕಷ್ಟ. ಎದೆಯಲ್ಲಿ ಸಣ್ಣನೆ ನಡುಕ ಹುಟ್ಟಿಸುವಂತಿರುವ ಈ ಪಾತ್ರಧಾರಿಯನ್ನು ಗುರುತಿಸುವುದು ನಿಮ್ಮ ಮುಂದಿರುವ ಸವಾಲು.

    ಸಮಯದ ಜತೆಗಿನ ಓಟ

    'ಯಾವಾಗ ಸಮಯ ನಿಮ್ಮ ತಾಳ್ಮೆಯನ್ನು ಕೆಡಿಸುತ್ತದೆಯೋ, ಯಾವಾಗ ಸಮಯ ನಿಮ್ಮ ಅಹಂಅನ್ನು ಪರೀಕ್ಷಿಸುತ್ತದೆಯೋ, ಯಾವಾಗ ಸಮಯ ನಿಮ್ಮ ಶಕ್ತಿಯನ್ನು ಉಡುಗಿಸುತ್ತದೆಯೋ...' ಎಂಬ ನಿಗೂಢಾರ್ಥದ ಸಾಲುಗಳನ್ನು ಈ ಪೋಸ್ಟರ್ ಒಳಗೊಂಡಿದೆ. ಮುಂದೆ ಓದಿ.

    ಮೂರು ಭಾಷೆಗಳಲ್ಲಿ ಇಬ್ಬರ ನಿರ್ದೇಶನ

    ಮೂರು ಭಾಷೆಗಳಲ್ಲಿ ಇಬ್ಬರ ನಿರ್ದೇಶನ

    ವಿವಿಧ ವಯಸ್ಸಿನ ಜೋಡಿಗಳ ಕಥೆಯನ್ನು ಒಳಗೊಂಡಿರುವ ಈ ಚಿತ್ರ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿ ಚಂದ್ರಕಾಂತ್ ನಿರ್ದೇಶಿಸಿದ್ದರೆ, ಚಿತ್ರಕ್ಕೆ ಬಂಡವಾಳ ಹೂಡಿರುವ ರಾಜಶೇಖರ್, ತಮಿಳು ಮತ್ತು ತೆಲುಗು ಭಾಷೆಯಲ್ಲಿ ನಿರ್ದೇಶಿಸಿದ್ದಾರೆ.

    ಮೂರು ಭಾಷೆಯಲ್ಲಿ ವಿಭಿನ್ನ ಚಿತ್ರಕಥೆ

    ಮೂರು ಭಾಷೆಯಲ್ಲಿ ವಿಭಿನ್ನ ಚಿತ್ರಕಥೆ

    ವಿಶೇಷವೆಂದರೆ ಈ ಮೂರೂ ಭಾಷೆಗಳಲ್ಲಿ ಚಿತ್ರಕಥೆ ಬೇರೆ ಬೇರೆ. ಸಂಗೀತವೂ ಬೇರೆ. ಆದರೆ ಏಕಕಾಲಕ್ಕೆ ಇದನ್ನು ಚಿತ್ರೀಕರಿಸಿದ್ದು, ಸಂಕಲನದ ಸಂದರ್ಭದಲ್ಲಿ ತಮ್ಮ ಯೋಜನೆಗೆ ಅನುಗುಣವಾಗಿ ನಿರ್ದೇಶಕಧ್ವಯರು ಎಡಿಟಿಂಗ್ ಮಾಡಿಸಿದ್ದಾರೆ. ಇದರಲ್ಲಿ ನಟಿಸಿರುವ ಕಲಾವಿದರಿಗೂ ಇದು ಮೂರು ವಿಭಿನ್ನ ಚಿತ್ರಕಥೆಯ ಸಿನಿಮಾ ಎನ್ನುವುದು ತಿಳಿದಿಲ್ಲ.

    ಚಂದ್ರಕಾಂತ್ ಸಂತಸ

    ಚಂದ್ರಕಾಂತ್ ಸಂತಸ

    'ವರಮಹಾಲಕ್ಷ್ಮಿ' ಹಬ್ಬದ ಸಂದರ್ಭದಲ್ಲಿ ಈ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಖುಷಿಯನ್ನು ಹಂಚಿಕೊಂಡಿರುವ ನಿರ್ದೇಶಕ ಚಂದ್ರಕಾಂತ್, 'ನನ್ನ ನಿರ್ದೆಶನದ ಎರಡನೆಯ ಚಿತ್ರ 'ತ್ರಿಕೋನ'ದ ಮೋಷನ್ ಪೋಸ್ಟರ್ ಹಂಚಿಕೊಳ್ಳಲು ಸಂತಸವಾಗುತ್ತಿದೆ' ಎಂದು ತಿಳಿಸಿದ್ದಾರೆ.

    ಮೋಷನ್ ಪೋಸ್ಟರ್‌ಗೆ ಮೆಚ್ಚುಗೆ

    ಮೋಷನ್ ಪೋಸ್ಟರ್‌ಗೆ ಮೆಚ್ಚುಗೆ

    ಮೋಷನ್ ಪೋಸ್ಟರ್ ವೀಕ್ಷಿಸಿರುವ ಜನರು ಕೂಡ ಮೆಚ್ಚಿಕೊಂಡಿದ್ದಾರೆ. ಮೋಷನ್ ಪೋಸ್ಟರ್ ಅದ್ಭುತವಾಗಿದೆ. ಇದೇ ಹೀಗೆ ಇರುವಾಗ, ಸಿನಿಮಾ ಇನ್ನು ಎಷ್ಟು ಚೆನ್ನಾಗಿರಬಹುದು. ತಪ್ಪದೇ ಸಿನಿಮಾ ನೋಡುತ್ತೇವೆ ಎಂದು ಅನೇಕರು ಹೇಳಿದ್ದಾರೆ.

    English summary
    Chandrakanth directed Kannada film Trikona has released its first motion poster.
    Friday, July 31, 2020, 15:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X