Chandrayaan 3: ಚಂದ್ರಯಾನ ಸಕ್ಸಸ್ ಆಗೋದು ಪಕ್ಕಾ; ಇಸ್ರೋ ಗೆಲುವಿಗೆ ಶುಭ ಕೋರಿದ ನಟ ಆರ್ ಮಾಧವನ್
ಇಡೀ ವಿಶ್ವವೇ ಎದುರು ನೋಡುತ್ತಿರುವ ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಇಳಿಸುವ ಕ್ಷಣಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಸಂಜೆ (ಆಗಸ್ಟ್ 23) 6.04ರ ವೇಳೆಗೆ ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಅದ್ಬುತ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಾರತೀಯರು ಎದುರು ನೋಡುತ್ತಿದ್ದಾರೆ. ಭಾರತದ ಮೂರನೇ ಚಂದ್ರಯಾನ ಯೋಜನೆ ಯಶಸ್ವಿಯಾಗಲಿ ಎಂದು ಇಡೀ ದೇಶದ ಜನತೆ ಪಾರ್ಥನೆ ಮಾಡುತ್ತಿದೆ.
ಹೌದು, ದೇಶದ ವಿವಿಧ ನಗರಗಳ ಹಲವೆಡೆ ಎಲ್ಲಾ ಧರ್ಮದ ಜನರು ತಮ್ಮ ತಮ್ಮ ದೇವರ ಬಳಿ ಚಂದ್ರಯಾನ್ 3 ಯಶಸ್ವಿಯಾಗಲಿ ಎಂದು ಪೂಜೆ ಸಲ್ಲಿಸಿ ಪಾರ್ಥಿಸಿಕೊಳ್ಳುತ್ತಿದ್ದಾರೆ. ಇನ್ನು ರಾಜಕಾರಣಿಗಳು, ಕ್ರಿಕೆಟಿಗರು ಹಾಗೂ ಸಿನಿಮಾ ಮಂದಿ ಸಹ ಚಂದ್ರಯಾನ್ 3 ಯಶಸ್ವಿಯಾಗಲಿ ಎಂದು ಶುಭ ಕೋರಿ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ.

ಇನ್ನು ತಮಿಳು ನಟ ಆರ್ ಮಾಧವನ್ ಸಹ ಚಂದ್ರಯಾನ್ ಕುರಿತಾಗಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಮಾಧವನ್ ಈ ಬಾರಿಯ ಚಂದ್ರಯಾನ್ ಖಂಡಿತವಾಗಿ ಯಶಸ್ವಿಯಾಗುತ್ತದೆ ನನ್ನ ಮಾತುಗಳನ್ನು ನೆನಪಿಟ್ಟುಕೊಳ್ಳಿ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. "ಚಂದ್ರಯಾನ-3 ಸಂಪೂರ್ಣ ಯಶಸ್ವಿಯಾಗಲಿದೆ. ನನ್ನ ಮಾತುಗಳನ್ನು ನೆನಪಿಟ್ಟುಕೊಳ್ಳಿ. ಇಸ್ರೋಗೆ ಮುಂಚಿತವಾಗಿ ಅಭಿನಂದನೆಗಳು. ಈ ಅದ್ಭುತ ಯಶಸ್ಸಿಗೆ ನಾನು ತುಂಬಾ ಸಂತೋಷ ಮತ್ತು ಹೆಮ್ಮೆ ಪಡುತ್ತೇನೆ. ನಂಬಿ ಅವರಿಗೂ ಸಹ ಅಭಿನಂದನೆಗಳು. ವಿಕಾಸ್ ಎಂಜಿನ್ ಉಡಾವಣೆ ವೇಳೆ ಮತ್ತೊಮ್ಮೆ ದೊಡ್ಡ ಪಾತ್ರ ನಿರ್ವಹಿಸಲಿದೆ" ಎಂದು ಮಾಧವನ್ ಟ್ವೀಟ್ ಮಾಡಿದ್ದಾರೆ.


Click it and Unblock the Notifications











