Chandrayaan 3: ಚಂದ್ರಯಾನ್ 3 ಯಶಸ್ವಿ; ಯಶ್, ರಿಷಬ್ ಶೆಟ್ಟಿ ಶುಭ ಕೋರಿದ್ದು ಹೀಗೆ

ಇಸ್ರೋ ವಿಜ್ಞಾನಿಗಳ ಹಲವು ವರ್ಷಗಳ ಶ್ರಮ ಈ ಬಾರಿ ಯಶಸ್ವಿಯಾಗಿದೆ. ಕಳೆದ ಒಂದು ದಿನದಿಂದ ಕೋಟ್ಯಂತರ ಮಂದಿ ಮಾಡಿದ್ದ ಪ್ರಾರ್ಥನೆ ಫಲ ನೀಡಿದೆ. ಹೌದು, ಚಂದ್ರನ ಅಂಗಳದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿದೆ. ಈ ಮೂಲಕ ಚಂದ್ರನ ಅಂಗಳದಲ್ಲಿ ನೌಕೆಯನ್ನು ಇಳಿಸಿದ ವಿಶ್ವದ ನಾಲ್ಕನೇ ದೇಶ ಎನ್ನುವ ಕೀರ್ತಿಗೆ ಭಾರತ ಪಾತ್ರವಾಗಿದೆ.

ಅದರಲ್ಲೂ ಚಂದಿರನ ದಕ್ಷಿಣ ಧ್ರುವದಲ್ಲಿ ಉಪ್ರಗ್ರಹ ನೌಕೆ ಇಳಿಸಿದ ಮೊದಲ ದೇಶ ಭಾರತವಾಗಿದೆ. ಕಳೆದ ಎರಡು ದಿನಗಳಿಂದ ಉಪ್ರಗ್ರಹ ನೌಕೆ ಇಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು, ದೇಶದ ಮೂಲೆ ಮೂಲೆಗಳಲ್ಲಿ ಜನ ಮಂದಿರ, ಮಸೀದಿಗಳಲ್ಲಿ ಪ್ರಾರ್ಥನೆ ಮಾಡಿದ್ದರು. ಜನ ಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳೂ ಸಹ ಚಂದ್ರಯಾನ ಯಶಸ್ವಿಯಾಗಲಿ ಎಂದು ಶುಭ ಕೋರಿದ್ದರು.

Chandrayaan 3: Yash, Rakshit Shetty, Rishab Shetty and others wished for ISRO achievement

ಸದ್ಯ ತಮ್ಮ ನಿರೀಕ್ಷೆಯಂತೆ ಹಾಗೂ ಆಶಯದಂತೆ ಭಾರತದ ಉಪಗ್ರಹ ನೌಕೆ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿದ್ದು, ಸಿನಿ ರಂಗ ದೇಶದ ವಿಜ್ಞಾನಿಗಳ ಈ ಸಾಧನೆಗೆ ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರಿದೆ. ಹೌದು, ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೆ ಹಲವಾರು ಕಲಾವಿದರು ಇಸ್ರೋ ಸಾಧನೆಯನ್ನು ಕೊಂಡಾಡಿ ಈ ಕೆಳಕಂಡಂತೆ ಟ್ವೀಟ್ ಮಾಡಿದ್ದಾರೆ.

"ಪ್ರಯತ್ನಿಸುವವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ! ಚಂದ್ರಯಾನ-3 ನೊಂದಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ್ದಕ್ಕಾಗಿ ಇಸ್ರೊಗೆ ಅಭಿನಂದನೆಗಳು. ನೀವು ಇತಿಹಾಸವನ್ನು ನಿರ್ಮಿಸಿದ್ದೀರಿ ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತವನ್ನು ಮುಂಚೂಣಿಯಲ್ಲಿ ಇರಿಸಿದ್ದೀರಿ, ಎಲ್ಲಾ ಭಾರತೀಯರು ಹೆಮ್ಮೆಪಡುವಂತೆ ಮತ್ತು ನಕ್ಷತ್ರಗಳನ್ನು ತಲುಪಲು ಪೀಳಿಗೆಗೆ ಸ್ಫೂರ್ತಿ ನೀಡಿದ್ದೀರಿ!" ಎಂದು ರಾಕಿಂಗ್ ಸ್ಟಾರ್ ಯಶ್ ಟ್ವೀಟ್ ಮಾಡಿದ್ದಾರೆ.

"ಚಂದ್ರಯಾನ-3 ಐತಿಹಾಸಿಕ ಸಾಧನೆಯಿಂದ ಭಾರತದ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್ ಅಪಾರ ಸ್ಫೂರ್ತಿಯ ಮೂಲವಾಗಿದೆ, ವಿಶ್ವಕ್ಕೆ ಭಾರತದ ಸಮರ್ಪಣೆ ಮತ್ತು ತಾಂತ್ರಿಕ ಪರಾಕ್ರಮವನ್ನು ಪ್ರದರ್ಶಿಸುತ್ತದೆ" ಎಂದು ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

" ಭಾರತ ಈಗ ಚಂದ್ರನ ಮೇಲಿದೆ. ಎಂತಹ ಅದ್ಭುತ" ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

" ಈ ಸಾಧನೆಯನ್ನು ವರ್ಣಿಸಲು ಪದಗಳೇ ಸಾಲದು ಜೈ ಹಿಂದ್, ನನ್ನ ಹೃದಯ ಹೆಮ್ಮೆಯಿಂದ ಹಿಗ್ಗುತ್ತಿದೆ. ನಾನು ವಿವೇಕದಿಂದ ಇರಬಹುದೆಂದು ನಾನು ಭಾವಿಸುತ್ತೇನೆ" ಎಂದು ಮಾಧವನ್ ಟ್ವೀಟ್ ಮಾಡಿದ್ದಾರೆ.

More from Filmibeat

English summary
Chandrayaan 3: Yash, Rakshit Shetty, Rishab Shetty and others wished for ISRO achievement
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X