For Quick Alerts
  ALLOW NOTIFICATIONS  
  For Daily Alerts

  ರಾಬರ್ಟ್ ಸಕ್ಸಸ್: ಚಂದು ಗೌಡ ಮನೆಗೆ ಬಂತು ದುಬಾರಿ ಕಾರು

  |

  ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟ ಚಂದು ಗೌಡ ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. ಆಡಿ ಕ್ಯೂ 7 ಕಾರನ್ನು ಖರೀದಿಸಿದ್ದು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  ''ಬೋರಿಂಗ್ ಕಾರುಗಳನ್ನು ಓಡಿಸಲು ಜೀವನ ಬಹಳ ಚಿಕ್ಕದು'' ಎಂದು ಪೋಸ್ಟ್ ಹಾಕಿಕೊಂಡಿರುವ ಚಂದು ಗೌಡ, ''ಮನೆಗೆ ದೊಡ್ಡ ಕ್ವಾಟ್ರೊಗೆ ಸ್ವಾಗತ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

  'ಮದಗಜ' ನಿರ್ದೇಶಕರಿಗೆ ಕಾರ್ ಉಡುಗೊರೆ ನೀಡಿದ 'ರಾಬರ್ಟ್' ನಿರ್ಮಾಪಕ

  ಚಂದು ಗೌಡ ಅವರು ಹೊಸ ಕಾರು ಖರೀದಿಸಿರುವುದಕ್ಕೆ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ಅಂದ್ಹಾಗೆ, ಆಡಿ ಕ್ಯೂ 7 ಕಾರಿನ ಆರಂಭಿಕ ಬೆಲೆ 69.27 ಲಕ್ಷದಿಂದ 81.18 ಲಕ್ಷದವರೆಗೂ ಇದೆ.

  ಚಂದ್ರು ಗೌಡ ಇತ್ತೀಚಿಗಷ್ಟೆ ಬಿಡುಗಡೆಯಾದ ದರ್ಶನ್ ನಟನೆಯ ರಾಬರ್ಟ್ ಚಿತ್ರದಲ್ಲಿ ನಟಿಸಿದ್ದರು. ರಾಬರ್ಟ್ ಸಿನಿಮಾ ಮಾರ್ಚ್ 11 ರಂದು ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿದೆ. ಈ ಚಿತ್ರದಲ್ಲಿ ಚಂದು ಗೌಡ ವಿಲನ್ ಆಗಿ ಅಭಿನಯಿಸಿದ್ದಾರೆ.

  ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ Roberrt | Darshan | Filmibeat Kannada

  2018ರಲ್ಲಿ ರಿಲೀಸ್ ಆದ 'ಎಟಿಎಂ' (ಅಟೆಮ್ಟ್ ಟು ಮರ್ಡರ್) ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದರು. ಕಳೆದ ವರ್ಷ ತೆರೆಕಂಡ 'ಕುಷ್ಕ' ಚಿತ್ರದಲ್ಲೂ ಚಂದು ಬಿ ಗೌಡ ಅಭಿನಯಿಸಿದ್ದಾರೆ. ಈಗ ರಾಬರ್ಟ್ ಸಿನಿಮಾದಲ್ಲಿ ಎಂಎಲ್‌ಎ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

  English summary
  Kannada serial actor Chandu B Gowda buys Audi Q 7 cars.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X