ರಮ್ಯಾ - ದರ್ಶನ್ ಫ್ಯಾನ್ ವಾರ್ ; ಅಶ್ಲೀಲ ಮೆಸೇಜ್ ಕಳಿಸೋರಿಗೆ ಚಪ್ಪಲೀಲಿ ಹೊಡಿಬೇಕು-ಲೂಸ್ ಮಾದ ಯೋಗಿ

ಸಾಮಾಜಿಕ ಜಾಲತಾಣ ಮನುಷ್ಯನನ್ನು ಹೆಚ್ಚು ಕಂಟ್ರೋಲ್ ಮಾಡುತ್ತಿರುವ ಮಾಧ್ಯಮ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ. ಇನ್ನು ಈ ವೇದಿಕೆಯ ಮೂಲಕವೇ ಚಿತ್ರರಂಗದ ಅನೇಕರು ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವುದು ಅಲ್ಲದೇ ತಮ್ಮ ಅಭಿಮಾನಿಗಳ ಜೊತೆ ನಿತ್ಯ ಸಂಪರ್ಕದಲ್ಲಿರುವ ಸಾಧನವನ್ನಾಗಿಯೂ ಈಗೀಗ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇದನ್ನೇ ದುರ್ಬಳಕೆ ಮಾಡಿಕೊಳ್ಳುವ..

ಅನೇಕರು ಮಹಿಳೆಯರಿಗೆ ಲೈಂಗಿಕ ಶೋಷಣೆ, ಕಿರುಕುಳ ಕೊಡುವುದನ್ನೇ ವೃತ್ತಿಯನ್ನಾಗಿಸಿ ಸಾಕಷ್ಟು ಸ್ತ್ರೀಯರ ಬಾಳಿಗೆ ಕಗ್ಗಂಟಾಗಿ ಉಳಿದಿದ್ದಾರೆ. ಇದಕ್ಕೆ ಮೋಹಕತಾರೆ ರಮ್ಯಾ ಅವರಿಗೆ ಕಳುಹಿಸಲಾದ ಸಂದೇಶಗಳೇ ಕೈಗನ್ನಡಿ.ಹಾಗಂಥ ರಮ್ಯಾ ಸುಮ್ಮನೆ ಕುಳಿತಿಲ್ಲ. ಬದಲಿಗೆ ಪೊಲೀಸರ ಮೊರೆ ಹೋಗಿದ್ದಾರೆ. ವಿಕೃತ ಮನಸ್ಥಿತಿಗಳನ್ನೊಂದಿರುವವರ ವಿರುದ್ಧ ಸಮರವನ್ನು ಕೂಡ ಸಾರಿದ್ದಾರೆ.

Chappal For Abusers Loose Mada Yogesh s Fiery Stance on Ramya-Darshan Fan War

ಇನ್ನೂ ಇದೇ ವಿಚಾರದಲ್ಲಿ ಡಾ.ಶಿವರಾಜ್ ಕುಮಾರ್.. ವಿನಯ್ ರಾಜ್ ಕುಮಾರ್.. ಸೇರಿ ಕನ್ನಡ ಚಿತ್ರರಂಗದಲ್ಲಿ ಹಲವರು ರಮ್ಯಾ ಅವರ ಪರ ಮಾತನಾಡಿದ್ದಾರೆ. ಅಶ್ಲೀಲ ಸಂದೇಶ ಕಳುಹಿಸುವುದು ತಪ್ಪು ಎಂದು ಹೇಳಿದ್ದಾರೆ. ಅಭಿಮಾನದ ಹೆಸರಿನಲ್ಲಿ ಈ ತರಹದ ಕೆಲಸಗಳು ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಈ ಸಾಲಿಗೆ ಈಗ ಲೂಸ್ ಮಾದ ಯೋಗಿ ಕೂಡ ಸೇರಿಕೊಂಡಿದ್ದಾರೆ.

ಹೌದು, ಇಂದು ಯೋಗಿ ಅಭಿನಯದ ''ಲೂಸ್ ಮಾದ'' ಚಿತ್ರ ಮುಹೂರ್ತ ಭಾಗ್ಯವನ್ನು ಕಂಡಿದೆ. ಇದೇ ಸಮಯದಲ್ಲಿ ಸದ್ಯ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮಾತನಾಡಿರುವ ಯೋಗಿ ಆ ತರಹದ ಮೆಸೇಜ್‌ಗಳನ್ನು ಮಾಡುವರನ್ನು ಕರ್ಕೊಂಡು ಬಂದು ಚಪ್ಪಲಿಯಲ್ಲಿ ಹೊಡಿಬೇಕು ಎಂದು ಹೇಳಿದ್ದಾರೆ.

Chappal For Abusers Loose Mada Yogesh s Fiery Stance on Ramya-Darshan Fan War

ಅವರು ಹುಟ್ಟಿರುವುದು ಕೂಡ ತಾಯಿಯ ಹೊಟ್ಟೆಯಲ್ಲಿಯೇ ಅಲ್ವಾ ? ಅವರಿಗೆ ಬುದ್ದಿಯೇ ಇಲ್ಲ ಅಂದ ಮೇಲೆ ಮಾತನಾಡಿ ಪ್ರಯೋಜನ ಇಲ್ಲ ಎಂದು ಹೇಳಿರುವ ಯೋಗಿ ಒಂದು ಸ್ವಲ್ಪ ತಿಳುವಳಿಕೆ ಇರಬೇಕು ತಿಳುವಳಿಕೆ ಇದ್ದರೆ ಯಾರು ಈ ತರಹದ ಕೆಲಸಗಳನ್ನು ಮಾಡುವುದಿಲ್ಲ ಅವರಿಗೆ ಲೋಕಜ್ಞಾನನೇ ಇಲ್ಲ ಎಂದು ಹೇಳಿದ್ದಾರೆ.

ಮುಂದುವರೆದು ಸೋಶಿಯಲ್ ಮೀಡಿಯಾ ಬರುವ ಮುಂಚೆ ಕೂಡ ಫ್ಯಾನ್ ವಾರ್ ಇತ್ತು, ಆಗ ಸುಮಾರು ವರ್ಷದ ಮುಂಚೆ ಆ ಹೀರೋ ಯಾರು ಅಂತ ನನಗೂ ಕೂಡ ಗೊತ್ತಿಲ್ಲ ಆದರೆ ನಮ್ ಬಾಸ್ ಮುಂದೆ ನಿಂದೇನೋ ಅಂತ ಬ್ಲೇಡ್‌ನಲ್ಲಿ ನನಗೆ ಕುಯ್ದಿದ್ದಾ ಎಂದು ಹೇಳಿರುವ ಯೋಗಿ ಈಗ ಸೋಶಿಯಲ್ ಮೀಡಿಯಾ ಇರುವುದರಿಂದ ಡೈರೆಕ್ಟ್ ಆಗಿ ಮೆಸೇಜ್‌ ಮಾಡ್ತಿದ್ದಾರೆ, ಕಮೆಂಟ್‌ಗಳನ್ನು ಮಾಡ್ತಿದ್ದಾರೆ, ತುಂಬಾನೇ ಪರ್ಸನಲ್ ಅಟ್ಯಾಕ್ ಮಾಡ್ತಿದ್ದಾರೆ, ಅವರು ಮಾತನಾಡುವ ಮಾತುಗಳಿಂದ ಕೋಪ ಬರುತ್ತೆ, ಇಂತಹವರ ಮೇಲೆ ಅಂತ ಅಲ್ಲ ಯಾರೇ ಹೆಣ್ಣು ಮಗು ಇರಲಿ ಆ ತರಹದ ಮಾತುಗಳನ್ನಾಡಬಾರದು ಅದು ತಪ್ಪು ಎಂದು ಹೇಳಿದ್ಧಾರೆ.

ರಮ್ಯಾ ಅವರು ದೂರು ಕೊಟ್ಟಿರುವುದು ತುಂಬಾ ಒಳ್ಳೆಯ ಕೆಲಸ ಅವರ ದೂರಿನ ಮೇರೆಗೆ ಈಗ ಕೆಲವರನ್ನು ಪೊಲೀಸರು ಹುಡಕ್ತಾರೆ, ಬುದ್ದಿ ಕಲಿಸ್ತಾರೆ ಆಗ ಮುಂದೆ ಹೀಗೆ ಮಾಡಬಾರದು ಎನ್ನುವ ಜ್ಞಾನೋದಯ ಅವರಿಗಾಗಬಹುದು ಎಂದು ಹೇಳಿರುವ ಯೋಗಿ, ದರ್ಶನ್ ಅವರು ಮುಂದೆ ಬಂದು ಫ್ಯಾನ್ಸ್ ಗೆ ಹೀಗೆ ಮಾಡ್ಬೇಡಿ ಅಂದ್ರೆ ಒಳ್ಳೆಯದು. ಆದರೆ ಮಾಡ್ತಿರುವುದು ಅವರ ಫ್ಯಾನ್ಸ್‌ಗಳೇ ಅನ್ನುವುದು ಕೂಡ ಗೊತ್ತಿಲ್ಲವಲ್ಲಾ ಎಂದು ಹೇಳಿದ್ದಾರೆ. ನಾನು ನೋಡಿರುವಂತೆ ದರ್ಶನ್ ಅವರು ಇದೆಲ್ಲಾ ಹೇಳಿ ಮಾಡಿಸೋ ವ್ಯಕ್ತಿ ಅಲ್ಲವೇ ಅಲ್ಲ. ಮುಖ ಕಾಣ್ದಿರೋ ಅಕೌಂಟ್ ನಲ್ಲಿ ಈ ಥರ ಬೇವರ್ಸಿ ಕೆಲಸ ಮಾಡೋವರಿಗೆ ಏನ್ ಹೇಳೋಕಾಗುತ್ತೆ ಎಂದು ಹೇಳಿದ್ದಾರೆ.

More from Filmibeat

English summary
The Ramya-Darshan fan war escalates. Actor Loose Mada Yogesh says "those who send abusive messages should be hit by chappal." Read his full, unfiltered response
Read more about: ramya yogi filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X