'ಜೇಮ್ಸ್' ಸಿನಿಮಾಗೆ ಇವರೇ ಮ್ಯೂಸಿಕ್ ಡೈರೆಕ್ಟರ್

'ಯುವರತ್ನ' ಸಿನಿಮಾದ ನಂತರ ಪುನೀತ್ ರಾಜ್ ಕುಮಾರ್ 'ಜೇಮ್ಸ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಪ್ರಮುಖ ವಿಷಯವೊಂದು ಇದೀಗ ಹೊರಬಂದಿದೆ.

'ಜೇಮ್ಸ್' ಸಿನಿಮಾದ ಸಂಗೀತ ನಿರ್ದೇಶಕ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಿನಿಮಾಗೆ ಚರಣ್ ರಾಜ್ ಸಂಗೀತ ನೀಡುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರೇ ಚರಣ್ ರಾಜ್ ಗೆ ಈ ಅವಕಾಶವನ್ನು ಕೊಡಿಸಿದ್ದಾರಂತೆ.

ಚರಣ್ ರಾಜ್ ಕನ್ನಡ ಚಿತ್ರರಂಗದ ಪ್ರತಿಭಾವಂತ ಸಂಗೀತ ನಿರ್ದೇಶಕ. ಈಗಾಗಲೇ 'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು', 'ಪುಷ್ಪಕ ವಿಮಾನ', 'ಟಗರು' ಸೇರಿದಂತೆ ಒಳ್ಳೆ ಒಳ್ಳೆಯ ಹಾಡುಗಳನ್ನು ನೀಡಿದ್ದಾರೆ. ಈ ಚಿತ್ರಗಳ ನಂತರ ಮತ್ತೊಂದು ದೊಡ್ಡ ಸಿನಿಮಾ ಚರಣ್ ರಾಜ್ ಪಾಲಾಗಿದೆ. ಚರಣ್ ಪ್ರತಿಭೆ ಕಂಡು ಪುನೀತ್ ಅವರೇ ಈ ಅವಕಾಶ ಕೊಡಿಸಿದ್ದಾರೆ.

Charan Raj Will Be The Music Director For James

ನಿರ್ದೇಶಕ ಚೇತನ್ ಕುಮಾರ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಹರಿಕೃಷ್ಣ ಹಾಗೂ ಅರ್ಜುನ್ ಜನ್ಯ ಜೊತೆಗೆ ಕೆಲಸ ಮಾಡಿದ್ದ ಚೇತನ್ ಮೊದಲ ಬಾರಿಗೆ ಚರಣ್ ರಾಜ್ ಗೆ ಆಫರ್ ನೀಡಿದ್ದಾರೆ.

ವಿಭಿನ್ನ ಶೈಲಿಯ ಹಾಡುಗಳನ್ನು ನೀಡಿಕೊಂಡು ಬಂದ ಚರಣ್ ರಾಜ್ 'ಜೇಮ್ಸ್'ಗೆ ಯಾವ ಮಾದರಿಯ ಹಾಡುಗಳನ್ನು ಕೊಡುತ್ತಾರೆ ಎನ್ನುವ ನಿರೀಕ್ಷೆ ಇದೆ.

More from Filmibeat

English summary
Charan Raj will be the music director for 'James' kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X