Pavithra Gowda Chat: "ನಿನ್ನ ಫೋಟೊ ನೋಡಿ ಹಸ್ತಮೈಥುನ ಮಾಡ್ಕೊಂಡೆ"; ರೇಣುಕಾಸ್ವಾಮಿ
ಅಶ್ಲೀಲ ಮೆಸೇಜ್ ಕಳುಹಿಸಿದ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಾಣ ಕಳೆದುಕೊಳ್ಳುವಂತಾಗಿದೆ. ನಟ ದರ್ಶನ್ & ಗ್ಯಾಂಗ್ ಸೇರಿ ಆತನಿಗೆ ಚಿತ್ರಹಿಂಸೆ ಕೊಟ್ಟು ಕೊಂದಿರುವುದಾಗಿ ಹೇಳಲಾಗುತ್ತಿದೆ. ಪ್ರಕರಣದಲ್ಲಿ 17 ಜನ ಆರೋಪಿಗಳು ವಿಚಾರಣಾಧೀನ ಕೈದಿಗಳಾಗಿ ಜೈಲು ಸೇರಿದ್ದಾರೆ. ಈಗಾಗಲೇ ಚಾರ್ಜ್‌ಶೀಟ್ ಕೂಡ ಸಲ್ಲಿಕೆ ಆಗಿದೆ.
ಬೆಂಗಳೂರಿನಲ್ಲಿದ್ದ ನಟ ದರ್ಶನ್ ಹಾಗೂ ಪ್ರೇಯಸಿ ಪವಿತ್ರಾ ಗೌಡ. ಚಿತ್ರದುರ್ಗದ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ರೇಣುಕಾಸ್ವಾಮಿ. ಯಾರೊಬ್ಬರ ನಡುವೆ ಇದಕ್ಕೂ ಮುನ್ನ ಯಾವುದೇ ಸಂಪರ್ಕ ಇರಲಿಲ್ಲ. ಆದರೆ ಪವಿತ್ರಾ ಗೌಡ ಇನ್‌ಸ್ಟಾ ಪೋಸ್ಟ್‌ಗಳಿಗೆ ರೇಣುಕಾಸ್ವಾಮಿ ಮಾಡಿದ ಕಾಮೆಂಟ್‌ಗಳು. ಬಳಿಕ ನಡೆಸಿದ ಚಾಟ್. ಮುಂದೆ ಫೋನ್ ನಂಬರ್ ಬದಲಾಯಿಸಿಕೊಂಡು ವಾಟ್ಸಪ್‌ನಲ್ಲಿ ನಡೆಸಿದ ಚಾಟಿಂಗ್ ಆತನ ಸಾವಿನಲ್ಲಿ ಅಂತ್ಯವಾಗುವಂತಾಗಿದೆ.

ಪ್ರೇಯಸಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಕಾರಣಕ್ಕೆ ದರ್ಶನ್ ಆಪ್ತರ ಮೂಲಕ ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆಸಿಕೊಂಡಿದ್ದರು ಎನ್ನಲಾಗ್ತಿದೆ. ಬಳಿಕ ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿ ಹಾಕಿ ಥಳಿಸಿದ್ದು ಈ ವೇಳೆ ಆತನ ಪ್ರಾಣವೇ ಹೋಗಿದೆ. ಆತನಿಗೆ ಬಹಳ ಚಿತ್ರಹಿಂಸೆ ಕೊಟ್ಟಿರುವುದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.
ರೇಣುಕಾಸ್ವಾಮಿ ತನ್ನ ಮರ್ಮಾಂಗದ ಫೋಟೊಗಳನ್ನು ಕೂಡ ಪವಿತ್ರಾ ಗೌಡಗೆ ಕಳುಹಿಸಿದ್ದ. ಅದರಿಂದಲೇ ಆಕ್ರೋಶಗೊಂಡು ಈ ವಿಚಾರವನ್ನು ಆಕೆ ದರ್ಶನ್‌ಗೆ ಹೇಳಿದ್ದಳು. ಇದರಿಂದ ಕೆಂಡಾಮಂಡಲವಾದ ದರ್ಶನ್ ಇಂತಾದೊಂದು ದುಡುಕಿನ ನಿರ್ಧಾರ ಕೈಗೊಂಡರು ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ. ರೇಣುಕಾಸ್ವಾಮಿ ಮಾಡಿದ್ದು ದೊಡ್ಡ ತಪ್ಪು. ಒಬ್ಬ ಮಹಿಳೆಗೆ ಈ ರೀತಿ ಕೆಟ್ಟದಾಗಿ ಮೆಸೇಜ್ ಕಳುಹಿಸಿ ಕಿರುಕುಳ ಕೊಟ್ಟಿದ್ದನ್ನು ಕ್ಷಮಿಸಲು ಸಾಧ್ಯವಿಲ್ಲ. ಆತ ಇದೇ ರೀತಿ ಹಲವು ಹೆಣ್ಣುಮಕ್ಕಳಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂದು ವರದಿಯಾಗಿದೆ.
ರೇಣುಕಾಸ್ವಾಮಿ ಹಾಗೂ ಪವಿತ್ರಾ ಗೌಡ ಇನ್‌ಸ್ಟಾಗ್ರಾಮ್‌ನಲ್ಲಿ ನಡೆಸಿದ ಚಾಟಿಂಗ್ ಏನು? ಬಳಿಕ ಪವಿತ್ರಾ ಗೌಡ ಹೆಸರಿನಲ್ಲಿ ಆರೋಪಿ ಪವನ್ ರೇಣುಕಾಸ್ವಾಮಿ ಜೊತೆ ನಡೆಸಿದ ವಾಟ್ಸಪ್ ಚಾಟ್ ಸಂಗತಿ ಇದೀಗ ಮಾಧ್ಯಮಗಳಲ್ಲಿ ಸದ್ದು ಮಾಡ್ತಿದೆ. ಆರೋಪಿಗಳು ರೇಣುಕಾಸ್ವಾಮಿ ಫೋನ್ ಬಿಸಾಕಿದ್ದರು. ಅದು ಸಿಕ್ಕಿರಲಿಲ್ಲ. ಪವಿತ್ರಾ ಗೌಡ ಸಹ ಅದನ್ನು ಡಿಲೀಟ್ ಮಾಡಿದ್ದಳು. ಮೊಬೈ ರಿಟ್ರೀವ್ ಮಾಡಿ ಪೊಲೀಸರು ಚಾಟ್ ಸ್ಕ್ರೀನ್‌ಶಾಟ್ ಸಂಗ್ರಹಿಸಿರುವುದಾಗಿ ಹೇಳಲಾಗ್ತಿದೆ.

ಜೂನ್ 6ರಂದು ರೇಣುಕಾಸ್ವಾಮಿ ಈ ರೀತಿ ಚಾಟ್ ಮಾಡಲು ಆರಂಭಿಸಿದ್ದ. ಆರಂಭದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ರೇಣುಕಾಸ್ವಾಮಿ ಮೆಸೇಜ್ ಮಾಡುತ್ತಿದ್ದ. ಬಳಿಕ ಪವಿತ್ರಾ ಗೌಡ ಆತನ ನಂಬರ್ ಕೇಳಿ ಪಡೆದಿದ್ದಳು. ಪವನ್ ತನ್ನ ನಂಬರ್ ಅನ್ನು ಪವಿತ್ರಾ ಗೌಡ ನಂಬರ್ ಎನ್ನುವಂತೆ ನೀಡಿ ಚಾಟ್ ಮಾಡಲು ಆರಂಭಿಸಿದ್ದ. ಮೊದಲಿಗೆ ಆತನನ್ನು ನಂಬಿಸಲು ಪವಿತ್ರಾ ಗೌಡ ಕೈಲಿ ಫೋನ್ ಮಾಡಿ ಮಾತನಾಡಿಸಿದ್ದರು.
ನನ್ನೊಟ್ಟಿಗೆ ಪವಿತ್ರಾ ಗೌಡ ಮಾತನಾಡುತ್ತಿದ್ದಾಳೆ ಎಂದು ನಂಬಿ ರೇಣುಕಾಸ್ವಾಮಿ ಚಾಟ್ ಮಾಡಲು ಆರಂಭಿಸಿದ್ದ. ಇತ್ತ ಆತನ ಅಪಹರಣಕ್ಕೆ ಪ್ಲ್ಯಾನ್ ಸಿದ್ಧವಾಗಿತ್ತು. ಆತನ ಊರು, ಇರುವ ಜಾಗ ಎಲ್ಲದರ ಬಗ್ಗೆ ಪವನ್ ವಾಟ್ಸಪ್ ಚಾಟ್‌ನಲ್ಲಿ ಪವನ್ ಮಾಹಿತಿ ಸಂಗ್ರಹಿಸಿದ್ದ. ಅತ್ತ ರೇಣುಕಾಸ್ವಾಮಿ ನನ್ನೊಟ್ಟಿಗೆ ಪವಿತ್ರಾ ಗೌಡ ಚಾಟ್ ಮಾಡುತ್ತಿದ್ದಾಳೆ ಎಂದುಕೊಂಡು ಮೆಸೇಜ್ ಮಾಡುವುದು ಮುಂದುವರೆಸಿದ್ದ.
ಪವಿತ್ರಾ ಗೌಡ ಹೆಸರಿನಲ್ಲಿ ಪವನ್ ಮೆಸೇಜ್
ಪವನ್ (ಪವಿತ್ರಾ ಗೌಡ): ನಿನ್ನ ಮೆಡಿಕಲ್ ಶಾಪ್ ಹೊರಗಡೆ ಫೋಟೋ ಸೆಂಡ್ ಮಾಡು
ರೇಣುಕಾಸ್ವಾಮಿ: ಯಾಕೆ? ಯಾವ ಫೋಟೊ ಕಳುಹಿಸಬೇಕು
ಪವನ್ (ಪವಿತ್ರಾ ಗೌಡ): ನೀನು ಸುಳ್ಳು ಹೇಳ್ತಿದ್ದೀಯಾ ಎಂದು ಅನುಮಾನ.
ರೇಣುಕಾಸ್ವಾಮಿ: ತಾಯಿ ಮೇಲೆ ಆಣೆ. ನಾನು ಡ್ಯೂಟಿಯಲ್ಲಿ ಇದ್ದೀನಿ ಕಣೆ
ಪವನ್ (ಪವಿತ್ರಾ ಗೌಡ): ನಿಜ ಅನ್ನಿಸ್ತಿಲ್ಲ (ಫೋಟೊ ಸೆಂಡ್ ಆಗುತ್ತದೆ).. ಈಗ ನಂಬಿಕೆ ಬಂತು.
ರೇಣುಕಾಸ್ವಾಮಿ: ನಿನ್ನ ಫೋಟೊ ನೋಡ್ಕೊಂಡು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೀನಿ. ನನ್ನ ಜೊತೆ ರಸಸ್ಯವಾಗಿ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರ್ತೀಯಾ, ಹೇಳು ಪ್ಲೀಸ್.
ಪವನ್ (ಪವಿತ್ರಾ ಗೌಡ): ಓಕೆ. ನಾನು ಕರೆದಾಗ ನೀನು ಬರ್ತೀಯಾ?
ರೇಣುಕಾಸ್ವಾಮಿ: ನಿನಗೋಸ್ಕರ ಬರ್ತೀನಿ. ಪ್ರತಿ ತಿಂಗಳು ನಿನಗೆ 10 ಸಾವಿರ ಕೊಡ್ತೀನಿ. ನೀನು ನನ್ನ ಜೊತೆ ಇಡೀ ದಿನಾ ಮಾತನಾಡುತ್ತಿರಬೇಕು. ಕೋರ್ಟ್ ಇದೆ.
ಪವನ್ (ಪವಿತ್ರಾ ಗೌಡ): ಎಂಥದ್ದು.
ರೇಣುಕಾಸ್ವಾಮಿ: ಬಜರಂಗದಳದ್ದು. 11 ಗಂಟೆಗೆ ಹೋಗಬೇಕು. 12.30ಕ್ಕೆ ಮುಗಿಯುತ್ತೆ.
ಪವನ್ (ಪವಿತ್ರಾ ಗೌಡ): 12 ಗಂಟೆಗೆ ಕಾಲ್ ಮಾಡ್ತೀನಿ.
ಹೀಗೆ ಆ ದಿನ ವಾಟ್ಸಪ್‌ನಲ್ಲಿ ರೇಣುಕಾಸ್ವಾಮಿ ಹಾಗೂ ಪವಿತ್ರಾ ಗೌಡ ಹೆಸರಿನಲ್ಲಿ ಪವನ್ ಚಾಟಿಂಗ್ ನಡೆಸಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿದೆ ಎಂದು ವರದಿಯಾಗಿದೆ.


Click it and Unblock the Notifications











