»   » 9 ವರ್ಷದ ನಂತರ ಮತ್ತೆ ಕನ್ನಡಕ್ಕೆ ಬಂದ 'ತುಂಟಾಟ'ದ ನಟಿ

9 ವರ್ಷದ ನಂತರ ಮತ್ತೆ ಕನ್ನಡಕ್ಕೆ ಬಂದ 'ತುಂಟಾಟ'ದ ನಟಿ

Posted By:
Subscribe to Filmibeat Kannada

ಛಾಯಾ ಸಿಂಗ್... ಅಂತ ಹೇಳಿದ ತಕ್ಷಣ ಈ ಹೆಸರು ಎಲ್ಲೋ ಕೇಳಿದ್ದೀವಿ ಅಂತ ನಿಮಗೂ ಅನಿಸಬಹುದು. ಕನ್ನಡದಲ್ಲಿ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಈ ನಟಿ ಇದ್ದಕ್ಕಿದ್ದ ಹಾಗೆ ಮರೆಯಾಗಿ ಬಿಟ್ಟಿದ್ದರು. ಆದರೆ ಈಗ ಛಾಯಾ ಸಿಂಗ್ 9 ವರ್ಷಗಳ ನಂತರ ಮತ್ತೆ ಸ್ಯಾಂಡಲ್ ವುಡ್ ಗೆ ಬಂದಿದ್ದಾರೆ.

ಒಂದೇ ದಿನದಲ್ಲಿ ಧೂಳೆಬ್ಬಿಸಿದ 'ಮಫ್ತಿ' ಟೀಸರ್

ನಟ ಶ್ರೀಮುರಳಿ ನಟನೆಯ 'ಮಫ್ತಿ' ಸಿನಿಮಾದ ಮೂಲಕ ನಟಿ ಛಾಯಾ ಸಿಂಗ್ ಕನ್ನಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. 'ಮಫ್ತಿ' ಸಿನಿಮಾದ ಪ್ರಮುಖ ಪಾತ್ರದಲ್ಲಿ ಛಾಯಾ ಸಿಂಗ್ ನಟಿಸಿದ್ದು, ಸದ್ಯ ಬಳ್ಳಾರಿಯಲ್ಲಿ ನಡೆದ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

Chaya Singh comesback to Sandalwood from 'Mafthi' movie
Harbhajan Singh To Start His New Innings As Singer | Filmibeat Kannada

ಅಂದಹಾಗೆ, 2008 ರಲ್ಲಿ ಬಿಡುಗಡೆಯಾಗಿದ್ದ 'ಸಿಂಪ್ಲಿ ಕೈಲಾಸಂ' ಛಾಯಾ ಸಿಂಗ್ ಕನ್ನಡ ಚಿತ್ರದಲ್ಲಿ ನಟಿಸಿದ್ದ ಕೊನೆಯ ಸಿನಿಮಾವಾಗಿತ್ತು. ಅದರ ಹಿಂದೆ 'ತುಂಟಾಟ', 'ರೌಡಿ ಅಳಿಯ' ಸೇರಿದಂತೆ ಕೆಲ ಚಿತ್ರಗಳಲ್ಲಿ ಛಾಯಾ ನಟಿಸಿದ್ದರು.

English summary
Kannada Actress Chaya Singh comesback to Sandalwood from 'Mufthi' movie
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada