»   » ಕೃಷ್ಣನ ಕೈಹಿಡಿದ ತುಂಟಾಟದ 'ಚಿಟ್ಟೆ' ಛಾಯಾ ಸಿಂಗ್

ಕೃಷ್ಣನ ಕೈಹಿಡಿದ ತುಂಟಾಟದ 'ಚಿಟ್ಟೆ' ಛಾಯಾ ಸಿಂಗ್

Posted By:
Subscribe to Filmibeat Kannada

ನಟಿ ಛಾಯಾ ಸಿಂಗ್ ಸದ್ದು-ಸುದ್ದಿಯಿಲ್ಲದೇ ಮದುವೆಯಾಗಿದ್ದಾರೆ. ತಮಿಳು ಕಿರುತೆರೆ ನಟ ಕೃಷ್ಣನ ಜೊತೆ ಲವ್ ಮ್ಯಾರೇಜ್ ಮಾಡಿಕೊಂಡಿದ್ದಾರೆ ಛಾಯಾ ಸಿಂಗ್. ಉತ್ತರ ಭಾರತ ಮೂಲದ ಬೆಂಗಳೂರು ಹುಡುಗಿ ಛಾಯಾ ಸಿಂಗ್ ಬಹಳಷ್ಟು ಕಾಲದಿಂದ ಆ ಟಿವಿ ನಟನೊಟ್ಟಿಗೆ ರೊಮ್ಯಾನ್ಸ್ ಮಾಡುತ್ತಿದ್ದರು. ಈಗ ಗಟ್ಟಿಮೇಳದಲ್ಲಿ ತಮ್ಮ ಸಂಬಂಧವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ.

ಈವರೆಗೆ 6 ಭಾಷೆಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಛಾಯಾ ಸಿಂಗ್, ಕನ್ನಡದಲ್ಲಿ ತುಂಟಾಟ, ಬಲಗಾಲಿಟ್ಟು ಒಳಗೆ ಬಾ, ಪ್ರೀತಿಸ್ಲೇಬೇಕು, ಸಖಸಖಿ, ಅಕಾಶಗಂಗೆ, ಚಿಟ್ಟೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ ಧನುಷ್ ಜೊತೆ ನಟಿಸಿದ 'ತಿರುಡಾ ತಿರುಡಿ' ಅವರಿಗೆ ಅತೀ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಚಿತ್ರ. ಇದಲ್ಲದೇ ಇನ್ನೂ ಮೂರ್ನಾಲ್ಕು ತಮಿಳು ಚಿತ್ರಗಳಲ್ಲೂ ಛಾಯಾ ನಟಿಸಿದ್ದಾರೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಹಾಗೂ ಭೋಜಪುರಿ ಹೀಗೆ ಆರು ಭಾಷೆಗಳಲ್ಲಿ ನಟಿಸಿದರೂ ಅವರು ಯಾಕೋ ಎಲ್ಲೂ ಗಟ್ಟಿಯಾಗಿ ನೆಲೆ ನಿಲ್ಲಲಿಲ್ಲ. ಭಾರೀ ಜನಪ್ರಿಯತೆ ಎಲ್ಲೂ ಸಿಗಲಿಲ್ಲ. ಕನ್ನಡದಲ್ಲಿ 'ಬಲಗಾಲಿಟ್ಟು ಒಳಗೆ ಬಾ' ಎಂದು ಕರೆಸಿಕೊಂಡರೂ ತಪ್ಪಿ ಎಡಗಾಲಿಟ್ಟರೋ ಏನೋ.., ಇಲ್ಲೂ ಭಾರೀ ಗೆಲುವು ಸಿಗಲಿಲ್ಲ. ಚಿಟ್ಟೆ ಚಿತ್ರದಲ್ಲಿ ನಟಿಸಿದರೂ ಹಾರಾಡುವ ಅದೃಷ್ಟ ಸಿಗಲಿಲ್ಲ. 

ಸಿನಿಮಾದಲ್ಲಿ ಬೇಡಿಕೆ ಕಡಿಮೆಯಾದಾಗ ತಮಿಳಿನ ಧಾರಾವಾಹಿಗಳಲ್ಲೂ ನಟಿಸಿದರು. ಈ ನಡುವೆ ತಮಿಳಿನ 'ಅನಂತಪುರತ್ತು ವೀಡು' ಎಂಬ ಚಿತ್ರದಲ್ಲಿ ಛಾಯಾ ಸಿಂಗ್ ನಟಿಸಿದ್ದರು. ಅಲ್ಲಿ ತಮಿಳು ಕಿರುತೆರೆ ನಟ ಕೃಷ್ಣನ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿ ಈಗ ಮದುವೆಯ ಮೂಲಕ ಸತಿ-ಪತಿ ಎನಿಸಿಕೊಂಡಿದ್ದಾರೆ. ಸದ್ಯಕ್ಕೆ ಜೀ ಕನ್ನಡದಲ್ಲಿ 'ಹಾಲು ಜೇನು ನಾನು ನೀನು' ಎಂಬ ಕಾರ್ಯಕ್ರಮವನ್ನು ಛಾಯಾ ನಡೆಸಿಕೊಡುತ್ತಿದ್ದಾರೆ.

ಈಗ್ಗೆ ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಛಾಯಾ ಹಾಗೂ ಕೃಷ್ಣ, ರಜಪೂತ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದಾರೆ. ಛಾಯಾ ಸಿಂಗ್ ಹಾಗೂ ಕೃಷ್ಣರ ಹೆತ್ತವರು, ಹಿರಿಯರು ಹಾಗೂ ಆಪ್ತರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ. ಇದೀಗ ಸಪ್ತಪದಿ ತುಳಿದು ನವವಧು ಎನಿಸಿರುವ ಛಾಯಾರ ಮುಂದಿನ ಬಣ್ಣದ ಬದುಕಿನ ನಡೆ ಏನೋ! (ಒನ್ ಇಂಡಿಯಾ ಕನ್ನಡ)

English summary
Kannada based Actress Chaya Singh, who shot to fame with Indrajith Lankesh directorial Thuntata, married her boyfriend and television actor Krishna recently in Bangalore. She acted 6 Languages including Kannada. 
 
Please Wait while comments are loading...