»   » ನಟಿ ಮೇಘನಾ ರಾಜ್ ವಿರುದ್ಧದ ಕೇಸ್ ಕ್ಲೋಸ್ ಆಗಿದ್ದೇಕೆ?

ನಟಿ ಮೇಘನಾ ರಾಜ್ ವಿರುದ್ಧದ ಕೇಸ್ ಕ್ಲೋಸ್ ಆಗಿದ್ದೇಕೆ?

Posted By:
Subscribe to Filmibeat Kannada

''ನಟಿ ಮೇಘನಾ ರಾಜ್ ನನ್ನ ಮದುವೆ ಆಗಿದ್ದಾರೆ. ರಿಜಿಸ್ಟರ್ ಮ್ಯಾರೇಜ್ ಸರ್ಟಿಫಿಕೇಟ್ ನೀಡದೆ ನನಗೆ ವಂಚನೆ ಮಾಡಿದ್ದಾರೆ'' ಅಂತ ಆರೋಪಿಸಿ ತಮಿಳುನಾಡಿನ ಧರ್ಮಪುರಿ ಮೂಲದ ಜನಾರ್ಧನ್ ಎಂಬ ವ್ಯಕ್ತಿ ಬೆಂಗಳೂರು ಪೊಲೀಸ್ ಕಮಿಷನರ್ ಗೆ ಈ-ಮೇಲ್ ಮುಖಾಂತರ ದೂರು ನೀಡಿದ್ದರು. ಸಾಲದಕ್ಕೆ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೂ ಜನಾರ್ಧನ್ ಕಂಪ್ಲೇಂಟ್ ಕೊಟ್ಟಿದ್ದರು.

ಕಳೆದ ವರ್ಷದಿಂದ ಜನಾರ್ಧನ್ ಎಂಬುವವರಿಂದ ಮೂರು ಬಾರಿ ದೂರು ಬಂದಿದ್ದ ಪರಿಣಾಮ ಬೆಂಗಳೂರಿನ ಜೆ.ಪಿ.ನಗರ ಪೊಲೀಸರು ತನಿಖೆ ಚುರುಕುಗೊಳಿಸಿದರು. [ಜನಾರ್ಧನ್ ರವರಿಗೆ ಮೇಘನಾ ರಾಜ್ ಎಷ್ಟನೇ ಹೆಂಡತಿ?]

Cheating case against Kannada Actress Meghana Raj closed

ನಟಿ ಮೇಘನಾ ರಾಜ್ ಕುಟುಂಬದವರಂತೂ ಜನಾರ್ಧನ್ ಯಾರು ಎಂಬುದು ಗೊತ್ತೇ ಇಲ್ಲ ಅಂದುಬಿಟ್ಟರು. ಇನ್ನೂ ಜನಾರ್ಧನ್ ಬಳಿಯೂ ಮೇಘನಾ ರಾಜ್ ರವರನ್ನ ಮದುವೆ ಆಗಿರುವುದಕ್ಕೆ ಯಾವುದೇ ಸಾಕ್ಷಿ ಇರ್ಲಿಲ್ಲ. [ನಟಿ ಮೇಘನಾ ರಾಜ್ ಬಗ್ಗೆ ಕೇಳಿಬಂದಿರುವ ವಂಚನೆ ಆರೋಪ ನಿಜವೇ?]

ಸೂಕ್ತ ಸಾಕ್ಷಿ ಆಧಾರಗಳ ಕೊರತೆ ಇರುವ ಕಾರಣ ಇದು ಸುಳ್ಳು ದೂರು ಅಂತ ಪರಿಗಣಿಸಿ ಪೊಲೀಸರು ಇದೀಗ ಕೇಸ್ ಕ್ಲೋಸ್ ಮಾಡಿದ್ದಾರೆ. [ಇದೆಲ್ಲಾ ಮೇಘನಾ ರಾಜ್ ಹೆಸರಿಗೆ ಮಸಿ ಬಳಿಯುವ ಕೆಲಸ?]

ಈ ಬಗ್ಗೆ ಟಿವಿ9 ವಾಹಿನಿ ಜೊತೆ ಮಾತನಾಡಿದ ಡಿ.ಸಿ.ಪಿ ಲೋಕೇಶ್ ಕುಮಾರ್, ''ನಟಿಯರ ಬಗ್ಗೆ ಆರೋಪ ಮಾಡುವ ಸುಮಾರು ಕೇಸ್ ಗಳು ಬರುತ್ತಿರುತ್ತವೆ. ಯಾವುದಕ್ಕೂ ಸಾಕ್ಷಿ ಇರುವುದಿಲ್ಲ. ಈ ಪ್ರಕರಣಕ್ಕೂ ಸಾಕ್ಷಿ ಇಲ್ಲ. ಮದುವೆ ಆಗಿದೆ ಅಂತ ಹೇಳುತ್ತಾರೆ ಹೊರತು ದಾಖಲೆ ಇಲ್ಲ. ಹೀಗಾಗಿ ಕೇಸ್ ಕ್ಲೋಸ್ ಮಾಡಿದ್ದೀವಿ'' ಅಂತ ಹೇಳಿದರು. [ಮದುವೆ-ಗಂಡ ಬಗ್ಗೆ ನಟಿ ಮೇಘನಾ ರಾಜ್ ಏನಂದಿದ್ದರು ಗೊತ್ತೇ?]

ಅಲ್ಲಿಗೆ, ಗಾಂಧಿನಗರದಲ್ಲಿ ಇದ್ದಕ್ಕಿದ್ದಂತೆ ಎದ್ದಿದ್ದ ಸುನಾಮಿ ತಣ್ಣಗಾದಾಗ್ಹಾಯ್ತು. ನಟಿ ಮೇಘನಾ ರಾಜ್ ನಿಟ್ಟುಸಿರು ಬಿಡುವಂತಾಯ್ತು.

English summary
After preliminary investigation, DCP Lokesh Kumar have said that JP Nagar Police have closed the cheating case against Kannada Actress Meghana Raj, as there was a lack of evidence to prove the Actress is guilty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada