For Quick Alerts
  ALLOW NOTIFICATIONS  
  For Daily Alerts

  ವಂಚನೆ ಆರೋಪ; ನಿರ್ದೇಶಕ ಪ್ರಶಾಂತ್ ರಾಜ್ ವಿರುದ್ಧ ದೂರು ದಾಖಲು

  |

  ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಲವ್ ಗುರು ಖ್ಯಾತಿಯ ಪ್ರಶಾಂತ್ ರಾಜ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದ್ದು ರಾಮನಗರ ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  ನಿರ್ದೇಶಕ ಪ್ರಶಾಂತ್ ರಾಜ್, ಶಬರೀಶ್ ಎಂಬ ಯುವನಟನಿಂದ ಕೆಲಸ ಮಾಡಿಸಿಕೊಂಡು ಹಣ ಕೊಡದೆ ಕಾರನ್ನು ನೀಡಿದ್ದರು. ಆದರೀಗ ಆ ಕಾರನ್ನು ವಾಪಸ್ ಕೊಡುವಂತೆ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

  'ಲವ್ ಗುರು-2' ಸಿನಿಮಾ ಮಾಡುವ ಪ್ಲಾನ್ ಮಾಡಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದೇನೆ, ಈ ಚಿತ್ರದಲ್ಲಿ ಅವಕಾಶ ಕೊಡ್ತೀನಿ ಅಂತ ಪ್ರಶಾಂತ್ ರಾಜ್ ಹೇಳಿದ್ದರು ಎಂದು ಆರೋಪಿಸಿದ್ದಾರೆ. ಅಂದಹಾಗೆ ಪ್ರಶಾಂತ್ ರಾಜ್, ಶಬರೀಶ್ ಗೆ 45 ಲಕ್ಷ ರೂ. ಕೊಡಬೇಕಿತ್ತು. ಆದರೆ 20 ಲಕ್ಷ ನೀಡಿ ಇನ್ನ ಉಳಿದ ಹಣಕ್ಕೆ ತನ್ನ ಬಳಿ ಇದ್ದ ಕಾರನ್ನು ನೀಡಿದ್ದರು. ಕಾರನ್ನು ಕೊಟ್ಟಿರುವುದಲ್ಲದೇ ಇದು ಅದೃಷ್ಟದ ಕಾರು, ಈ ಕಾರಿನಲ್ಲಿ ಯಶ್, ರಾಧಿಕಾ, ಗಣೇಶ್ ಕುಳಿತಿರುವ ಕಾರು. ಲಕ್ಷ್ಮೀ ಕಾರು, ಈ ತೆಗೆದುಕೊಳ್ಳಿ ಅದೃಷ್ಟಬದಲಾಗುತ್ತೆ ಎಂದು ಶಬರೀಶ್‌ಗೆ ಪ್ರಶಾಂತ್ ರಾಜ್ ನಂಬಿಸಿದ್ದರು ಎಂದು ಆರೋಪ ಮಾಡಿದ್ದಾರೆ.

  ಆದರೀಗ ಆ ಅದೃಷ್ಟದ ಕಾರನ್ನು ವಾಪಸ್ ಕೊಡುವಂತೆ ಪ್ರಶಾಂತ್ ರಾಜ್ ಧಮ್ಕಿ ಹಾಕುತ್ತಿದ್ದಾರಂತೆ. ಹಾಗಾಗಿ ಪ್ರಶಾಂತ್ ರಾಜ್ ಮತ್ತು ಸಹೋದರ ನವೀನ್ ರಾಜ್ ಮೇಲೆ ದೂರು ನೀಡಿದ್ದಾರೆ.

  ನಿರ್ದೇಶಕ ಪ್ರಶಾಂತ್ ಕಳೆದ ಎರಡು ತಿಂಗಳ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಶಾಂತ್ ರಾಜ್ ಕೃತಕ ಆಕ್ಸಿಜನ್ ಮೂಲಕ ಉಸಿರಾಡುತ್ತಿದ್ದರು. ಕೃತಕ ಉಸಿರಾಟ ಮೂಲಕ ಆಸ್ಪತ್ರೆ ಬೆಡ್ ಮೇಲೆ ಇದ್ದ ವಿಡಿಯೋವನ್ನು ಶೇರ್ ಮಾಡಿದ್ದರು. ಬಳಿಕ ಚಿತ್ರಾಭಿಮಾನಿಗಳು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದರು.

  ಅಶ್ಲೀಲ ಚಿತ್ರ ಶೂಟಿಂಗ್ & ಮಾರಾಟ: ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಅರೆಸ್ಟ್ | Filmibeat Kannada

  ಪ್ರಶಾಂತ್ ರಾಜ್ 'ಲವ್ ಗುರು', 'ಗಾನ ಬಜಾನಾ', 'ಜೂಮ್', 'ದಳಪತಿ' ಮತ್ತು 'ಆರೆಂಜ್' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಕೊನೆಯದಾಗಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಆರೆಂಜ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಮತ್ತೆ ಗಣೇಶ್ ಜೊತೆ ಕೆಲಸ ಮಾಡುತ್ತಿದ್ದು, ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ.

  English summary
  Cheating Case Filed against Sandalwood Director Prashanth Raj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X