ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ಜೋಡಿ ಮೇಲೆ ದೂರು ದಾಖಲು
ಬಾಲಿವುಡ್ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಮತ್ತು ಆಕೆಯ ಪತಿ ಖ್ಯಾತ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ದೂರು ದಾಖಲಾಗಿದೆ.
ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಅವರುಗಳು ರಾಜಸ್ಥಾನ ಐಪಿಎಲ್ ಟೀಂ ನ ಮಾಲೀಕರು ಆಗಿದ್ದಾರೆ. ಇವರ ವಿರುದ್ಧ ವಂಚನೆ ಪ್ರಕರಣದಲ್ಲಿ ದೂರು ದಾಖಲಾಗಿದೆ. ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ಅನಿವಾಸಿಸ ಭಾರತೀಯರೊಬ್ಬರು ವಂಚನೆ ದೂರು ದಾಖಲಿಸಿದ್ದಾರೆ.
ಸಚಿನ್ ಜೋಷಿ ಎಂಬವರು ವಂಚನೆ ಪ್ರಕರಣ ದಾಖಲಿಸಿದ್ದು, ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಒಡೆತನದ ಸತ್ಯುಗ್ ಗೋಲ್ಡ್ ಕಂಪೆನಿಯು ತಮಗೆ ವಂಚನೆ ಮಾಡಿದೆ ಎಂದು ಸಚಿನ್ ಜೋಷಿ ಆರೋಪಿಸಿದ್ದಾರೆ.

ಸಚಿನ್ ಜೋಷಿ ಆರು ವರ್ಷದ ಹಿಂದೆ 18.58 ಲಕ್ಷ ರೂ ಹಣ ನೀಡಿ ಒಂದು ಕೆ.ಜಿ ಚಿನ್ನ ಖರೀದಿಸಿದ್ದರು. ಆಗ ಅವರಿಗೆ ಗೋಲ್ಡ್ ಕಾರ್ಡ್ ನೀಡಿ, ಐದು ವರ್ಷದ ನಂತರ ರಿಯಾಯಿತಿ ದರದಲ್ಲಿ ಚಿನ್ನ ಖರೀದಿಸಲು ಅವಕಾಶ ನೀಡಲಾಗಿತ್ತು. ಈಗ ಕಾರ್ಡ್ ಬಳಸಿ ಚಿನ್ನ ಖರೀದಿಸಲು ಹೋದರೆ ಕಂಪೆನಿ ಬಂದ್ ಆಗಿದೆಯಂತೆ.
ಅಷ್ಟೆ ಅಲ್ಲದೆ ಆಗ ಕಂಪೆನಿಯ ಒಡೆಯರಾಗಿದ್ದ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಸಹ ಕಂಪೆನಿಯಲ್ಲಿನ ತಮ್ಮ ಹುದ್ದೆಗಳಿಗೆ 2016, 2017 ರಲ್ಲೇ ರಾಜೀನಾಮೆ ನೀಡಿದ್ದಾರೆಂಬುದು ತಿಳಿದುಬಂದಿದೆ.
ಹೀಗಾಗಿ ಸಚಿನ್ ಜೋಷಿ ಖಾರ್ ಪೊಲೀಸ್ ಠಾಣೆಯಲ್ಲಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಮತ್ತು ಇತರರ ಮೇಲೆ ದೂರು ದಾಖಲಿಸಿದ್ದಾರೆ.


Click it and Unblock the Notifications











